Asianet Suvarna News Asianet Suvarna News

ಕೂಡಲೇ ಕುಲಭೂಷಣ್ ಜಾಧವ್ ಬಿಡುಗಡೆ ಮಾಡಿ: ಜೈಶಂಕರ್ ಗುಡುಗು!

ಕುಲಭೂಷಣ್ ಜಾಧವ್ ಕುರಿತ ಐಸಿಜೆ ತೀರ್ಪು| ಐಸಿಜೆ ತೀರ್ಪಿನಿಂದ ಜಾಧವ್ ನಿರಪರಾಧಿ ಎಂದು ಸಾಬೀತು| ಕೂಡಲೇ ಜಾಧವ್ ಬಿಡುಗಡೆ ಮಾಡಲು ಭಾರತ ಒತ್ತಾಯ| ಜಾಧವ್ ಬಿಡುಗಡೆ ಮಾಡುವಂತೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಆಗ್ರಹ|

India Asks Pakistan To Release Kulbhushan Jadhav
Author
Bengaluru, First Published Jul 18, 2019, 5:28 PM IST
  • Facebook
  • Twitter
  • Whatsapp

ನವದೆಹಲಿ(ಜು.18): ಕುಲಭೂಷಣ್ ಜಾಧವ್ ಕುರಿತ ಅಂತಾರಾಷ್ಟ್ರೀಯ ನ್ಯಾಯಾಲಯದ ತೀರ್ಪಿನ ಹಿನ್ನೆಲೆಯಲ್ಲಿ, ಭಾರತ ಕೂಡಲೇ ಜಾಧವ್ ಅವರನ್ನು ಬಿಡುಗಡೆ ಮಾಡುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸಿದೆ.

ಜಾಧವ್ ಪರ ಐಸಿಜೆ ತೀರ್ಪು ನೀಡಿದ್ದು, ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಪಾಕಿಸ್ತಾನವನ್ನು ಒತ್ತಾಯಿಸಿದ್ದಾರೆ.

ರಾಜ್ಯಸಭೆಯಲ್ಲಿ ಈ ಕುರಿತು ಮಾತನಾಡಿದ ಎಸ್.ಜೈಶಂಕರ್, ಐಸಿಜೆ ತೀರ್ಪಿನಿಂದಾಗಿ ಜಾಧವ್ ನಿರಪರಾಧಿ ಎಂದು ಸಾಬೀತಾಗಿದ್ದು, ಈ ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಪಾಕಿಸ್ತಾನವನ್ನು ಒತ್ತಾಯಿಸಿದರು.

Follow Us:
Download App:
  • android
  • ios