ಕುಲಭೂಷಣ್ ತೀರ್ಪು: ಪಾಪ ಪಾಕಿಸ್ತಾನವೆಂದ ಬಿಜೆಪಿ ಸಚಿವ!
ಕುಲಭೂಷಣ್ ಜಾಧವ್ ತೀರ್ಪು ಪಾಕ್ ಪರ ಬಂದಿದೆಯೇ? ತೀರ್ಪಿನ ಕುರಿತು ಪಾಕಿಸ್ತಾನದ ಪರ ಬ್ಯಾಟ್ ಬೀಸಿದ ಬಿಜೆಪಿ ಸಚಿವ| ಪಾಕ್ ಪರ ಸಚಿವ ಗಿರಿರಾಜ್ ಸಿಂಗ್ ಬ್ಯಾಟಿಂಗ್| ತೀರ್ಪು ಇಂಗ್ಲಿಷ್‌ನಲ್ಲಿರುವುದರಿಂದ ಪಾಕಿಸ್ತಾನೀಯರಿಗೆ ಅರ್ಥವಾಗಿಲ್ಲ'| ಇದರಲ್ಲಿ ನಿಮ್ಮ ಅವರ ತಪ್ಪೇನಿಲ್ಲ ಬಿಡಿ ಎಂದ ಗಿರಿರಾಜ್|
ನವದೆಹಲಿ(ಜು.18): ಕುಲಭೂಷಣ್ ಜಾಧವ್ ಕುರಿತಾಧ ಐಸಿಜೆ ತೀರ್ಪು ಭಾರತದ ಪರವಾಗಿ ಬಂದಿದೆ ಎಂಬುದು ಇಡೀ ಜಗತ್ತಿಗೆ ಗೊತ್ತಿರುವ ಸಂಗತಿ. ಆದರೆ ತೀರ್ಪನ್ನು ತನ್ನ ವಾದಕ್ಕೆ ಸಂದ ಜಯ ಎಂದು ಪಾಕಿಸ್ತಾನ ಹೇಳಿಕೊಂಡು ಓಡಾಡುತ್ತಿದೆ.
ಐಸಿಜೆ ತೀರ್ಪು ತನ್ನ ಪರ ಬಂದಿದ್ದು, ಜಾಧವ್ ಪ್ರಕರಣವನ್ನು ಪುನರ್ ಪರಿಶೀಲಿಸುವುದಾಗಿ ಪಾಕಿಸ್ತಾನ ಹೇಳಿದೆ. ಪಾಕಿಸ್ತಾನದ ಪ್ರತಿಕ್ರಿಯೆಯನ್ನು ಅಣಕಿಸಿರುವ ಕೇಂದ್ರ ಸಚಿವ ಗಿರಿರಾಜ್ ಸಿಂಗ್, ಐಸಿಜೆ ತೀರ್ಪು ಇಂಗ್ಲಿಷ್‌ನಲ್ಲಿರುವುದರಿಂದ ಪಾಕ್‌ಗೆ ತೀರ್ಪು ಅರ್ಥವಾಗಿಲ್ಲ ಎಂದು ಕುಹಕವಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಗಿರಿರಾಜ್ ಸಿಂಗ್, ಐಸಿಜೆ ತೀರ್ಪನ್ನು ತನ್ನ ಪರ ಎಂಬ ಪಾಕ್ ವಾದ ತಪ್ಪಲ್ಲ. ಕಾರಣ ತೀರ್ಪು ಇಂಗ್ಲಿಷ್‌ನಲ್ಲಿರುವುದರಿಂದ ಪಾಕಿಸ್ತಾನೀಯರಿಗೆ ತೀರ್ಪು ಅರ್ಥವಾಗಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತದ ಪರ ತೀರ್ಪು ನೀಡಿರುವ ಐಸಿಜೆ, ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಉಲ್ಲಂಘಿಸಿದ್ದು, ಕೂಡಲೇ ಭಾರತೀಯ ರಾಯಭಾರಿಗೆ ಜಾಧವ್ ಭೇಟಿಯಾಗಲು ಅವಕಾಶ ನೀಡಬೇಕು ಎಂದು ಸೂಚನೆ ನೀಡಿದೆ.
ಅಲ್ಲದೇ ಜಾಧವ್ ಗಲ್ಲುಶಿಕ್ಷೆಯನ್ನು ಅಮಾನತುಗೊಳಿಸಿರುವ ಐಸಿಜೆ, ಪ್ರಕರಣದ ಮರವಿಚಾರಣೆ ಮಾಡಬೇಕೆಂದು ಪಾಕಿಸ್ತಾನಕ್ಕೆ ಸ್ಪಷ್ಟ ನಿದರ್ಶನ ನೀಡಿದೆ.