ನಾಲ್ಕು ವರ್ಷ ಪೂರೈಸಿದ ಮೋದಿ: ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ?

four years for Narendra Modi government how was his performance
Highlights

ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮೇ.26ಕ್ಕೆ ನಾಲ್ಕು ವರ್ಷಗಳಾಗುತ್ತಿವೆ. ಹಿಂದೆಂದೂ ಕಂಡು ಕೇಳಿಯರಿದ ಮಟ್ಟದ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ಮೋದಿ ಸರ್ಕಾರಕ್ಕೆ ಉಳಿದಿರೋದು ಇನ್ನೊಂದೇ ವರ್ಷ. ಅಧಿಕಾರ ಮುಗಿಯುವುದರೊಳಗೆ ದೇಶದ ಜನತೆಗೆ ಲೆಕ್ಕ ಕೊಡುತ್ತೇನೆ ಎಂದಿದ್ದ ಮೋದಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ?

ಬೆಂಗಳೂರು: ನರೇಂದ್ರ ಮೋದಿ ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಮೇ.26ಕ್ಕೆ ನಾಲ್ಕು ವರ್ಷಗಳಾಗುತ್ತಿವೆ. ಹಿಂದೆಂದೂ ಕಂಡು ಕೇಳಿಯರಿದ ಮಟ್ಟದ ನಿರೀಕ್ಷೆಗಳನ್ನು ಹುಟ್ಟು ಹಾಕಿದ್ದ ಮೋದಿ ಸರ್ಕಾರಕ್ಕೆ ಉಳಿದಿರೋದು ಇನ್ನೊಂದೇ ವರ್ಷ. ಅಧಿಕಾರ ಮುಗಿಯುವುದರೊಳಗೆ ದೇಶದ ಜನತೆಗೆ ಲೆಕ್ಕ ಕೊಡುತ್ತೇನೆ ಎಂದಿದ್ದ ಮೋದಿ ಕೊಟ್ಟ ಮಾತು ಉಳಿಸಿಕೊಂಡಿದ್ದಾರಾ?

ಭಾರಿ ನಿರೀಕ್ಷೆ ಹುಟ್ಟು ಹಾಕಿದ್ದ ಮೋದಿ

ಸ್ವತಂತ್ರಾ ನಂತರ ಕೇಂದ್ರದಲ್ಲಿ ಅಧಿಕಾರ ಹಿಡಿದ ಯಾವ ಸರ್ಕಾರವೂ ಮೋದಿ ಹುಟ್ಟು ಹಾಕಿದಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿರಲಿಲ್ಲ. 2014ರ ಮೇ 26 ರಂದು ಪ್ರಧಾನಿಯಾಗಿ ಅಧಿಕಾರ ಹಿಡಿದ ಮೋದಿ ಹುಟ್ಟು ಹಾಕಿದ್ದ ನಿರೀಕ್ಷೆಗಳೆಲ್ಲವೂ ನಿಜವಾಗಿದೆಯಾ? ಈ ಪ್ರಶ್ನೆಗೆ ಹೌದು.. ಇಲ್ಲ.. ಪರವಾಗಿಲ್ಲ.. ಕಳಪೆ ಅನ್ನೋ ಉತ್ತರಗಳು ಸಿಗುತ್ತವೆ. ಆದ್ರೆ ಮೋದಿ ಸರ್ಕಾರದ ಸಾಧನೆಗಳೇನು..? ವೈಫಲ್ಯಗಳೇನು? 

ಮೋದಿ ಸರ್ಕಾರದ ಸಾಧನೆಗಳೇನು?

- ಭ್ರಷ್ಟಾಚಾರ ರಹಿತ ಆಡಳಿತ
- ದೇಶದ ಎಲ್ಲ ಹಳ್ಳಿಗಳಿಗೂ ವಿದ್ಯುತ್ ಸಂಪರ್ಕ
- ಪಾಕಿಸ್ತಾನದ ವಿರುದ್ಧದ ಸರ್ಜಿಕಲ್ ಸ್ಟ್ರೈಕ್
- ಜಿಎಸ್​ಟಿ ಜಾರಿ (ಕೆಲವು ಸಮಯದ ನಂತರ ಇದರ ಲಾಭ ತಿಳಿಯಲಿದೆ.)
- 50 ಕೋಟಿ ಜನರಿಗೆ ಆರೋಗ್ಯ ವಿಮೆ(ಮೋದಿ ಕೇರ್)
- ಜನ್ ಧನ್ ಯೋಜನೆಯಡಿಯಲ್ಲಿ 31 ಕೋಟಿ ಬ್ಯಾಂಕ್​ ಖಾತೆ
- ಸಬ್ಸಿಡಿ ಹಣ ನೇರವಾಗಿ ಜನರ ಖಾತೆಗೆ
- ಸಣ್ಣ ಉದ್ಯಮಿಗಳಿಗೆ ಮುದ್ರಾ ಯೋಜನೆ ಮೂಲಕ ಸಾಲ
- ದಿನಕ್ಕೆ 40 ಕಿಮೀ ಹೆದ್ದಾರಿ ನಿರ್ಮಾಣ (ಯುಪಿಎ ಅವಧಿಯಲ್ಲಿ ನಿರ್ಮಾಣವಾಗಿದ್ದು ಕೇವಲ 17 ಕಿ.ಮೀ.)
- ಉಜ್ವಲ್ ಅನಿಲ ಯೋಜನೆ
- ಪರಿಣಾಮಕಾರಿ ವಿದೇಶಾಂಗ ನೀತಿ

ಮೋದಿ ಸರ್ಕಾರದ ವೈಫಲ್ಯಗಳು


- ನೋಟ್ ಬ್ಯಾನ್ ಹಾಗೂ ನಗದು ರಹಿತ ವ್ಯವಹಾರ ಅನುಷ್ಠಾನದಲ್ಲಿ ವೈಫಲ್ಯ
- ಮೇಕ್​ ಇನ್ ಇಂಡಿಯಾ ಯೋಜನೆಯಲ್ಲಿನ ಹಿನ್ನಡೆ
- ತೈಲ ದರಗಳನ್ನು ನಿಯಂತ್ರಿಸುವಲ್ಲಿನ ವೈಫಲ್ಯ
- ಉದ್ಯೋಗ ಸೃಷ್ಟಿಸಿಲ್ಲ 
- ಕಪ್ಪು ಹಣವನ್ನು ವಾಪಾಸು ತಂದಿಲ್ಲ
- ಬ್ಯಾಂಕ್​ಗಳಲ್ಲಿನ ಎನ್​ಪಿಎ 9 ಲಕ್ಷ ಕೋಟಿಗೆ ಏರಿಕೆ
- ಸಾವಿರಾರು ಕೋಟಿ ಸಾಲ ಮಾಡಿದ ಉದ್ಯಮಿಗಳ ಪರಾರಿ

ವೈಫಲ್ಯ ಕಂಡ ನೋಟ್ ಬ್ಯಾನ್

ಮೋದಿ ಸರ್ಕಾರದ ಸಾಧನೆಗಳು ಮತ್ತು ವೈಫಲ್ಯಗಳ ಲಿಸ್ಟ್​ ಬಗ್ಗೆ ಪರ ವಿರೋಧದ ಚರ್ಚೆಗಳು ಇದ್ದೇ ಇವೆ. ಆದ್ರೆ ಮೊದಿ ಸರ್ಕಾರ ಸಾಧನೆಗಳನ್ನೊಳಗೊಂಡು ಕೆಲವು ಗುರಿಗಳನ್ನು ತಲುಪುವಲ್ಲಿ ವಿಫಲವಾಗಿದೆ ಅನ್ನೋದೂ ಸತ್ಯ. ದೇಶದ ಕ್ರಾಂತಿಕಾರಿ ಬದಲಾವಣೆಯೆಂದೇ ಭಾವಿಸಲಾಗಿದ್ದ ನೊಟ್​ ಬ್ಯಾನ್ ನಿರ್ಧಾರದಿಂದ ಅಂದುಕೊಂಡಿದ್ದನ್ನು ಸಾಧಿಸಲಾಗಲಿಲ್ಲ. ಆಧಾರ್ ಯೋಜನೆ, ಸ್ವಚ್ಚ ಭಾರತ ಮತ್ತಿತರ ಜನಪ್ರಿಯ ಯೋಜನೆಗಳಿನ್ನೂ ನಿರೀಕ್ಷಿತ ಮಟ್ಟದಲ್ಲಿ ಗುರಿ ತಲುಪಿಲ್ಲ 

2019ಕ್ಕೆ ಮತ್ತೆ ಮೋದಿ ಮೊಡಿ ಮುಂದುವರಿಯುತ್ತಾ?


ಮೋದಿ ಸರ್ಕಾರದ ನಾಲ್ಕು ವರ್ಷಗಳ ಸಂಭ್ರಮಕ್ಕೆ 48 ತಿಂಗಳ ಎನ್​ಡಿಎ ಆಡಳಿತ ಮತ್ತು ಕಾಂಗ್ರೆಸ್ ಆಳಿದ 48 ವರ್ಷಗಳ ಆಡಳಿತವನ್ನೇ ಥೀಮ್​ ಮಾಡಿಕೊಳ್ಳಲಾಗಿದೆ. ಮಾರ್ಚ್​ 26 ರಂದು ಮೋದಿ ಸರ್ಕಾರ ತನ್ನ ಸಾಧನೆಗಳ ಅಂಕಿ ಅಂಶಗಳನ್ನು ದೇಶದ ಮುಂದಿಡಲಿದೆ. ಆ ಮೂಲಕ ಕಾಂಗ್ರೆಸ್ ಮಾಡಲಾಗದ ಸಾಧನೆಯನ್ನು ಮೋದಿ ಸರ್ಕಾರ ಮಾಡಿದೆ ಎಂದು ದೇಶಕ್ಕೆ ಹೇಳಲು ಎಲ್ಲ ಸಿದ್ದತೆ ನಡೆಸಿದೆ. ಅಂದುಕೊಂಡಿದ್ದನ್ನು ಸಾಧಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಮೋದಿ 2019ಕ್ಕೆ ಮತ್ತೆ ಅಧಿಕಾರಕ್ಕೆ ಏರುತ್ತಾರಾ? 

- ಶಶಿಶೇಖರ್, ಸುವರ್ಣ ನ್ಯೂಸ್ 

loader