Asianet Suvarna News Asianet Suvarna News

2019ಕ್ಕೂ ಮೋದಿಯೇ ಪ್ರಧಾನಿ

ಇನ್ನೆರೆಡು ದಿನದಲ್ಲಿ ತನ್ನ ಆಡಳಿತದ 4ನೇ ವರ್ಷಾಚರಣೆಗೆ ಸಿದ್ಧವಾಗಿರುವ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಸಂತಸವಾಗುವ ಸುದ್ದಿಯೊಂದನ್ನು ಸಮೀಕ್ಷಾ ವರದಿಯೊಂದು ನೀಡಿದೆ. ಇಂದು ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಎಬಿಪಿ ನ್ಯೂಸ್‌- ಸಿಎಸ್‌ಡಿಎಸ್‌ ನಡೆಸಿದ ಸಮೀಕ್ಷಾ ವರದಿ ಹೇಳಿದೆ.

Narendra Modi Will Win the 2019 election

ನವದೆಹಲಿ: ಇನ್ನೆರೆಡು ದಿನದಲ್ಲಿ ತನ್ನ ಆಡಳಿತದ 4ನೇ ವರ್ಷಾಚರಣೆಗೆ ಸಿದ್ಧವಾಗಿರುವ ಬಿಜೆಪಿ ನೇತೃತ್ವದ ಕೇಂದ್ರದ ಎನ್‌ಡಿಎ ಸರ್ಕಾರಕ್ಕೆ ಸಂತಸವಾಗುವ ಸುದ್ದಿಯೊಂದನ್ನು ಸಮೀಕ್ಷಾ ವರದಿಯೊಂದು ನೀಡಿದೆ. ಇಂದು ಚುನಾವಣೆ ನಡೆದರೆ ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಮತ್ತೆ ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಿದ್ದು, ನರೇಂದ್ರ ಮೋದಿ ಅವರೇ ಮತ್ತೆ ಪ್ರಧಾನಿಯಾಗಲಿದ್ದಾರೆ ಎಂದು ಎಬಿಪಿ ನ್ಯೂಸ್‌- ಸಿಎಸ್‌ಡಿಎಸ್‌ ನಡೆಸಿದ ಸಮೀಕ್ಷಾ ವರದಿ ಹೇಳಿದೆ.

ಈಗಿನ ಸಂದರ್ಭದಲ್ಲಿ ಜನರ ಚಿತ್ತ ಯಾವ ಕಡೆ ಇದೆ ಎಂದು ಅರಿಯಲು 19 ರಾಜ್ಯಗಳ 15859 ಜನರನ್ನು ಸಂದರ್ಶಿಸಿ ‘ಮೂಡ್‌ ಆಫ್‌ ದ ನೇಷನ್‌’ ಹೆಸರಿನ ಸಮೀಕ್ಷೆಯನ್ನು ನಡೆಸಲಾಗಿತ್ತು. ಅದರನ್ವಯ ಬಿಜೆಪಿ ನೇತೃತ್ವದ ಎನ್‌ಡಿಎ, ಒಟ್ಟು 543 ಸ್ಥಾನಗಳ ಪೈಕಿ 274 ಸ್ಥಾನ ಪಡೆಯುವ ಮೂಲಕ ಬಹುಮತಕ್ಕೆ ಅಗತ್ಯವಾದ ಮ್ಯಾಜಿಕ್‌ ನಂಬರ್‌ 272ನ್ನು ದಾಟಲಿದೆ. ಇನ್ನು ಕಾಂಗ್ರೆಸ್‌ ನೇತೃತ್ವದ ಯುಪಿಎ 164 ಸ್ಥಾನ ಪಡೆಯಲಿದ್ದರೆ, ಇತರೆ ಪಕ್ಷಗಳು ಭಾರೀ ಹೊಡೆತ ತಿನ್ನುವ ಮೂಲಕ 105 ಸ್ಥಾನಗಳಿಗೆ ಇಳಿಯಲಿದೆ. ಎನ್‌ಡಿಎ ಶೇ.37 (ಪ್ಲಸ್‌ 1), ಯುಪಿಎ ಶೇ.31(ಪ್ಲಸ್‌ 6), ಇತರರು ಶೇ.32 (ಮೈನಸ್‌ 7) ಮತ ಪಡೆಯಲಿದ್ದಾರೆ ಎಂದು ಸಮೀಕ್ಷೆ ಹೇಳಿದೆ.

ಆದರೆ ಹಿಂದಿನ ಚುನಾವಣೆಗೆ ಹೋಲಿಸಿದರೆ ಈ ವರ್ಷ ಎನ್‌ಡಿಎ ಬಲ ಕುಸಿಯಲಿದೆ. ಈ ಹಿಂದೆ 336 ಸ್ಥಾನ ಗೆದ್ದಿದ್ದ ಎನ್‌ಡಿಎ ಮೈತ್ರಿಕೂಟವು ನಿರುದ್ಯೋಗ, ಜಿಎಸ್‌ಟಿ ಅಡ್ಡಪರಿಣಾಮ, ಕಡಿಮೆ ಆದಾಯ, ದಲಿತರ ಮೇಲಿನ ಹಲ್ಲೆ ಪ್ರಕರಣಗಳಿಂದಾಗಿ ನಷ್ಟಅನುಭವಿಸಲಿದೆ. ಅದು ಹಿಂದಿನ ಬಾರಿಗಿಂತ 49 ಸ್ಥಾನ ಕಡಿಮೆ ಪಡೆಯಲಿದೆ. ಇದೇ ವೇಳೆ ಯುಪಿಎ ತನ್ನ ಬಲವನ್ನು 104 ಸೀಟುಗಳಷ್ಟುಹೆಚ್ಚಿಸಿಕೊಳ್ಳುವ ಮೂಲಕ 164 ಸ್ಥಾನ ತಲುಪಲಿದೆ. ಆದರೆ ಇತರರು 48 ಸ್ಥಾನ ಕಳೆದುಕೊಳ್ಳುವ ಮೂಲಕ ಕೇವಲ 105 ಸ್ಥಾನಕ್ಕೆ ತೃಪ್ತಿಪಟ್ಟಕೊಳ್ಳಬೇಕಾಗಿ ಬರುತ್ತದೆ ಎಂದು ಸಮೀಕ್ಷೆ ಹೇಳಿದೆ.

ಪ್ರಧಾನಿಯಾಗಲಿ ಮೋದಿ:

ಸಮೀಕ್ಷೆಯಲ್ಲಿ ಭಾಗಿಯಾಗಿದ್ದವರ ಪೈಕಿ ಶೇ.34ರಷ್ಟುಜನ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಒಲವು ವ್ಯಕ್ತಪಡಿಸಿದ್ದರೆ ಶೇ.24ರಷ್ಟುಜನ ರಾಹುಲ್‌ ಪರ ಒಲವು ವ್ಯಕ್ತಪಡಿಸಿದ್ದಾರೆ.

ದಕ್ಷಿಣದಲ್ಲಿ ಎನ್‌ಡಿಎಗೆ ಹೊಡೆತ : 

ದಕ್ಷಿಣದ ರಾಜ್ಯಗಳಲ್ಲಿ ಈ ಬಾರಿ ಎನ್‌ಡಿಎ ನಷ್ಟಅನುಭವಿಸಲಿದೆ. ಕಳೆದ ಬಾರಿ 23 ಸ್ಥಾನ ಗೆದ್ದಿದ್ದ ಎನ್‌ಡಿಎ ಈ ಬಾರಿ 18-22 ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬರಬಹುದು. ಇನ್ನು ಕಳೆದ ಬಾರಿ 21 ಸ್ಥಾನಕ್ಕೆ ಸೀಮಿತಗೊಂಡಿದ್ದ ಯುಪಿಎ ಈ ಬಾರಿ 67-75 ಸ್ಥಾನ ಪಡೆಯಲಿದೆ. ಕಳೆದ ಬಾರಿ 88 ಸ್ಥಾನ ಗೆದ್ದಿದ್ದ ಇತರರು 38-44 ಸ್ಥಾನಕ್ಕೆ ತೃಪ್ತಿಪಡಬೇಕಾಗಿ ಬರಲಿದೆ ಎಂದು ಸಮೀಕ್ಷೆ ಹೇಳಿದೆ.

ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿಗೆ ಹಿನ್ನಡೆ

ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಇಂದು ಲೋಕಸಭಾ ಚುನಾವಣೆ ನಡೆದರೆ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್‌ ಶೇ.49ರಷ್ಟುಮತ ಪಡೆಯಲಿದ್ದರೆ, ಬಿಜೆಪಿ ಶೇ.34ರಷ್ಟುಮತ ಪಡೆಯಲಿದೆ. ಇನ್ನು ರಾಜಸ್ಥಾನದಲ್ಲಿ ಕಾಂಗ್ರೆಸ್‌ ಶೇ.44ರಷ್ಟುಮತ ಪಡೆಯಲಿದ್ದರೆ, ಬಿಜೆಪಿ ಶೇ.39ರಷ್ಟುಮತಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಗಿ ಬರುತ್ತದೆ ಎಂದು ಸಮೀಕ್ಷೆ ಹೇಳಿದೆ. ಈ ಎರಡೂ ರಾಜ್ಯಗಳಲ್ಲಿ ಈ ವರ್ಷಾಂತ್ಯಕ್ಕೆ ವಿಧಾನಸಭಾ ಚುನಾವಣೆ ನಡೆಯಲಿದೆ. ಹೀಗಾಗಿ ಇದೇ ಮತ ಪ್ರಮಾಣ ವಿಧಾನಸಭಾ ಚುನಾವಣೆಯಲ್ಲೂ ಚಲಾವಣೆಯಾದರೆ ಎರಡೂ ರಾಜ್ಯಗಳಲ್ಲಿ ಅಧಿಕಾರ ಬಿಜೆಪಿ ಕೈತಪ್ಪಿ ಕಾಂಗ್ರೆಸ್‌ ಪಾಲಾಗಲಿದೆ ಎಂದು ಸಮೀಕ್ಷೆ ಹೇಳಿದೆ.

ಒಕ್ಕೂಟ 2018 ಸಮೀಕ್ಷೆ 2013 +/-

ಎನ್‌ಡಿಎ 274 336 -49

ಯುಪಿಎ 60 164 +104

ಇತರರು 105 153 -48

ಪ್ರಧಾನಿ ಯಾರಾಗಬೇಕು?

ನರೇಂದ್ರ ಮೋದಿ: ಶೇ.34

ರಾಹುಲ್‌ ಗಾಂಧಿ: ಶೇ.24

Follow Us:
Download App:
  • android
  • ios