ಪೆಟ್ರೋಲ್‌, ಡೀಸೆಲ್‌ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಮೇಲಿನ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ತೆರಿಗೆ ಕಡಿತಗೊಳಿಸುವ ಸಾಧ್ಯತೆ ಇದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಾಲ್ಕು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಇದೇ ವಾರದಲ್ಲಿ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ.

ನವದೆಹಲಿ: ಪೆಟ್ರೋಲ್‌, ಡೀಸೆಲ್‌ ದರ ಭಾರಿ ಪ್ರಮಾಣದಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಗ್ರಾಹಕರ ಮೇಲಿನ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ತೆರಿಗೆ ಕಡಿತಗೊಳಿಸುವ ಸಾಧ್ಯತೆ ಇದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ ನಾಲ್ಕು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಇದೇ ವಾರದಲ್ಲಿ ಹೊರಬೀಳಬಹುದು ಎಂದು ಹೇಳಲಾಗುತ್ತಿದೆ.

ಹೆಚ್ಚುತ್ತಿರುವ ತೈಲ ಬೆಲೆ ಸರ್ಕಾರಕ್ಕೆ ಬಿಕ್ಕಟ್ಟಿನ ಪರಿಸ್ಥಿತಿಯನ್ನು ತಂದೊಡ್ಡಿದೆ. ಬೆಲೆ ಏರಿಕೆಯನ್ನು ಎದುರಿಸಲು ಹಣಕಾಸು ಸಚಿವಾಲಯ ಈಗಾಗಲೇ ಪೆಟ್ರೋಲಿಯಂ ಮಂತ್ರಾಲಯದ ಜತೆ ಸಮಾಲೋಚನೆಯಲ್ಲಿ ನಿರತವಾಗಿದೆ. ಈ ಬೆಲೆ ಏರಿಕೆಯನ್ನು ಹಲವಾರು ಕ್ರಮಗಳ ಮಿಶ್ರಣದೊಂದಿಗೆ ಎದುರಿಸಬೇಕಾಗಿದೆ.

ಪೆಟ್ರೋಲ್‌, ಡೀಸೆಲ್‌ನ ಒಟ್ಟು ದರದಲ್ಲಿ ನಾಲ್ಕನೇ ಒಂದರಷ್ಟುಪಾಲು ಅಬಕಾರಿ ಸುಂಕದ್ದಾಗಿದೆ. ಸರ್ಕಾರ ಅದೊಂದೇ ಸುಂಕವನ್ನು ಕಡಿತಗೊಳಿಸುವ ಆಯ್ಕೆಯನ್ನು ಮಾತ್ರವೇ ಅವಲಂಬಿಸುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ 19 ದಿನಗಳ ಕಾಲ ಈ ಪರಿಷ್ಕರಣೆಗೆ ತಡೆಯಡ್ಡೊಲಾಗಿತ್ತು. ಈಗ ಮತ್ತೆ ಪರಿಷ್ಕರಣೆ ಪ್ರಾರಂಭಿಸಲಾಗಿದ್ದು, ಕಳೆದ 9 ದಿನಗಳಲ್ಲಿ ಲೀಟರ್‌ ಪೆಟ್ರೋಲ್‌ ದರ 2.24 ರು. ಹಾಗೂ ಡೀಸೆಲ್‌ 2.15 ರು.ನಷ್ಟುಏರಿಕೆಯಾಗಿವೆ. ದೆಹಲಿಯಲ್ಲಿ ಸಾರ್ವಕಾಲಿಕ ದಾಖಲೆ ಮಟ್ಟತಲುಪಿವೆ.

ಒಂದು ವೇಳೆ ಕೇಂದ್ರ ಸರ್ಕಾರವೇನಾದರೂ ಅಬಕಾರಿ ಸುಂಕವನ್ನು ಲೀಟರ್‌ಗೆ ಒಂದು ರು.ನಷ್ಟುಕಡಿತಗೊಳಿಸಿದರೆ ಎರಡೂ ಇಂಧನಗಳಿಂದ ಬೊಕ್ಕಸಕ್ಕೆ ಬರುತ್ತಿರುವ ಆದಾಯ ವರ್ಷಕ್ಕೆ 13000 ಕೋಟಿ ರು.ನಷ್ಟುತಪ್ಪಲಿದೆ.