ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಗುಟ್ಟು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ?. ಮೈದಾನದಲ್ಲಿ ಪಾದರಸದಂತೆ ಓಡಾಡುವ ವಿರಾಟ್ ಅದಕ್ಕಾಗಿ ತುಂಬ ಕಸರತ್ತು ನಡೆಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಕೊಹ್ಲಿ ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಗುಟ್ಟು ತಿಳಿಯಲು ಬಯಸಿದ್ದಾರೆ.
ಬೆಂಗಳೂರು (ಮೇ. 24): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಫಿಟ್ನೆಸ್ ಗುಟ್ಟು ಯಾರಿಗೆ ತಾನೆ ಗೊತ್ತಿಲ್ಲ ಹೇಳಿ?. ಮೈದಾನದಲ್ಲಿ ಪಾದರಸದಂತೆ ಓಡಾಡುವ ವಿರಾಟ್ ಅದಕ್ಕಾಗಿ ತುಂಬ ಕಸರತ್ತು ನಡೆಸುತ್ತಾರೆ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಕೊಹ್ಲಿ ಕೂಡ ಪ್ರಧಾನಿ ನರೇಂದ್ರ ಮೋದಿ ಅವರ ಫಿಟ್ನೆಸ್ ಗುಟ್ಟು ತಿಳಿಯಲು ಬಯಸಿದ್ದಾರೆ.
ಹೌದು ಮೋದಿ ಅವರ ಫಿಟ್ನೆಸ್ ಗುಟ್ಟು ಕೇಳಿ ಈ ಕುರಿತು ವಿಡಿಯೋ ಬಿಡುಗಡೆ ಮಾಡುವಂತೆ ಕೊಹ್ಲಿ ಮನವಿ ಮಾಡಿದ್ದಾರೆ. ಇದಕ್ಕೆ ಟ್ವಿಟರ್ ನಲ್ಲಿ ಉತ್ತರಿಸಿರುವ ಮೋದಿ, ತಮ್ಮ ಚಾಲೆಂಜ್ ಸ್ವೀಕರಿಸುವುದಾಗಿ ಕೊಹ್ಲಿಗೆ ತಿಳಿಸಿದ್ದಾರೆ. ಕೊಹ್ಲಿ ತಮ್ಮ ವಿಡಿಯೋ ಟ್ವಿಟ್ ನಲ್ಲಿ ಪತ್ನಿ ಅನುಷ್ಕಾ ಶರ್ಮ ಅವರನ್ನೂ ಕೂಡ ಟ್ಯಾಗ್ ಮಾಡಿದ್ದಾರೆ. ಕೇಂದ್ರ ಕ್ರೀಡಾ ಸಚಿವ ರಾಜವರ್ಧನ್ ಸಿಂಗ್ ರಾಠೋಡ್ #HumFitTohIndiaHit ಹೆಸರಿನಲ್ಲಿ ಈ ಅಭಿಯಾನ ಆರಂಭಿಸಿದ್ದರು.
ಬಾಲಿವುಡ್ ನಟ ಹೃತಿಕ್ ರೋಷನ್, ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬ್ಯಾಟ್ಮಿಂಟನ್ ಆಟಗಾರ್ತಿ ಸೈನಾ ನೆಹವಾಲ್ ಅವರಿಗೆ ರಾಠೋಡ್ ಫಿಟ್ನೆಸ್ ಚಾಲೆಂಜ್ ನೀಡಿದ್ದರು. ಈ ಹಿನ್ನೆಯಲ್ಲಿ ಕೊಹ್ಲಿ ತಮ್ಮ ಕಸರತ್ತಿನ ವಿಡಿಯೋ ಮಾಡಿ ಪ್ರಧಾನಿ ಅವರಿಗೂ ತಮ್ಮ ಫಿಟ್ನೆಸ್ ವಿಡಿಯೋ ಮಾಡುವಂತೆ ಕೋರಿದ್ದರು. ಇದಕ್ಕೆ ಸ್ಪಂದಿಸಿರುವ ಪ್ರಧಾನಿ, ಶೀಘ್ರವೇ ರಿಲೀಸ್ ಮಾಡುವುದಾಗಿ ಹೇಳಿದ್ದಾರೆ.
