ಮತ್ತೆ ಎರಡು ರೈತ ಸಂಘಟನೆಗಳು ರೈತ ಹೋರಾಟದಿಂದ ಹಿಂದೆ ಸರಿದಿದೆ. ಇತ್ತ ದೆಹಲಿ ಗಲಭೆ ಸೃಷ್ಟಿಸಿದ ಆರೋಪ ಹೊತ್ತಿರವವರೆಲ್ಲಾ ನಾಪತ್ತೆಯಾಗಿದ್ದಾರೆ. ಸೌರವ್ ಗಂಗೂಲಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ಮಾಡಲಾಗಿದೆ. ಕೆಜಿಎಫ್ ರಿಲೀಸ್ ದಿನಾಂಕಕ್ಕೆ ಮೂಹೂರ್ತ ಫಿಕ್ಸ್ ಮಾಡಲಾಗಿದೆ. ಜೊತೆಯಾಗಿ ಕಾಣಿಸಿಕೊಂಡ ರಮ್ಯ, ರಾಧಿಕಾ, ತಾರ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಾಯಕ ಸೇರಿದಂತೆ ಜನವರಿ 29ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ದೆಹಲಿ ದಂಗಲ್ : ಲಾಲ್ ಕಿಲಾ ಕೋಲಾಹಲ ಸೃಷ್ಟಿಸಿದವರೇ ನಾಪತ್ತೆ!...
ದೆಹಲಿ ರೈತ ದಂಗೆ ಬೇರೆ ಬೇರೆ ಟ್ವಿಸ್ಟ್ ಪಡೆಯುತ್ತಿದೆ. ಹೊಸ ಹೊಸ ಆಯಾಮಗಳು ತೆರೆದುಕೊಳ್ಳುತಿದೆ. ರೈತರ ಟ್ರ್ಯಾಕ್ಟರ್ ರಾರಯಲಿ ಹಿಂಸಾಸ್ವರೂಪ ಪಡೆದಿದ್ದರ ಹಿಂದೆ, ಪಂಜಾಬ್‌ನ ನಟ ದೀಪ್ ಸಿಧು ಮತ್ತು ಗ್ಯಾಂಗ್‌ಸ್ಟರ್ ಲಖಾ ಸಿಧಾನ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿವೆ.
ಕೇರಳದ ಮಂತ್ರವಾದಿಗಳಿಂದ ಇಡೀ ಕುಟುಂಬದ ಸರ್ವನಾಶ! ತಂಗಿಯನ್ನು ಕೊಂದ ಅಕ್ಕ!...
ಮೂಢನಂಬಿಕೆಗಳನ್ನು ಇಟ್ಟುಕೊಂಡರೆ, ಮಂತ್ರವಾದಿಗಳನ್ನು ನಂಬಿಕೊಂಡು ಅವರು ಹೇಳಿದಂತೆಲ್ಲ ಮಾಡುತ್ತ ಹೊರಟರೆ ಎಂಥ ದುರಂತ ಸಂಭವಿಸಬಹುದು ಎಂಬುದಕ್ಕೆ ಮದನಪಲ್ಲಿ ಡಬಲ್ ಮರ್ಡರ್ ಪ್ರಕರಣವೇ ಸಾಕ್ಷಿಯಾಗಿದೆ.
ಮತ್ತೆ 2 ರೈತ ಸಂಘಟನೆಗಳು ಪ್ರತಿಭಟನೆಯಿಂದ ಹಿಂದಕ್ಕೆ...
ಮತ್ತೆ ಎರಡು ರೈತ ಸಂಘಟನೆಗಳು ರೈತ ಹೋರಾಟದ ಭಾಗವಾಗಿರುವ ಪ್ರತಿಭಟನೆಯಿಂದ ಹಿಂದೆ ಸರಿದಿವೆ. ಹಿಂಸಾಚಾರದಿಂದ ಬೇಸತ್ತು ದೂರ ಸರಿದಿವೆ.
ಸೌರವ್ ಗಂಗೂಲಿಗೆ ಯಶಸ್ವಿ ಶಸ್ತ್ರಚಿಕಿತ್ಸೆ, ಮತ್ತೆರಡು ಸ್ಟೆಂಟ್ ಅಳವಡಿಕೆ...
ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಗೆ ಎರಡನೇ ಬಾರಿಗೆ ಯಶಸ್ವಿಯಾಗಿ ಆ್ಯಂಜಿಯೋಪ್ಲಾಸ್ಟಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ದಾದಾ ಆರೋಗ್ಯ ಸ್ಥಿರವಾಗಿದೆ.
ಕೆಜಿಎಫ್-2 ರಿಲೀಸ್ ದಿನಾಂಕ ಘೋಷಿಸಲು ಟೈಮ್ ಫಿಕ್ಸ್; ಮಿಸ್ ಮಾಡ್ಬೇಡಿ!...
ಬಹುನಿರೀಕ್ಷಿತ ಕೆಜಿಎಫ್ ಚಾಪ್ಟರ್ 2 ಚಿತ್ರಕ್ಕಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಇಲ್ಲಿದೆ ಗುಡ್ ನ್ಯೂಸ್. ನಿರ್ದೇಶಕ ಪ್ರಶಾಂತ್ ನೀಲ್ ಹಾಗೂ ಹೊಂಬಾಳೆ ಫಿಲಂಸ್ ಇಂದು ಸಂಜೆ 6.32ಕ್ಕೆ ಸಿನಿಮಾ ಬಿಡುಗಡೆ ದಿನಾಂಕ ರಿವೀಲ್ ಮಾಡುವುದಾಗಿ ಟ್ಟೀಟ್ ಮಾಡಿದ್ದಾರೆ.
ರಿಲಯನ್ಸ್ ಜಿಯೋಗೆ ಗ್ರಾಹಕರೇ ಗಮನಿಸಿ : ಇಲ್ಲಿದೆ ಒಂದು ಸಿಹಿ ಸುದ್ದಿ...
ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಕಂಪನಿ, ವಿಶ್ವದ ಅತ್ಯಂತ ಪ್ರಬಲ ಬ್ರ್ಯಾಂಡ್‌ಗಳ ಪೈಕಿ 5ನೇ ಸ್ಥಾನ ಪಡೆದುಕೊಂಡಿದೆ.
ಲ್ಯಾಂಡ್ ಕ್ರೂಸರ್ SUV ಕಾರು ಓಡಿಸಿದ 5 ವರ್ಷದ ಪುಟ್ಟ ಬಾಲಕ; ವಿಡಿಯೋ ವೈರಲ್...
5 ವರ್ಷದ ಪುಟ್ಟ ಬಾಲಕ, ಟ್ರಾಫಿಕ್ ತುಂಬಿದ ನಗರ ರಸ್ತೆಯಲ್ಲಿ ಅತೀ ದೊಡ್ಡ ಲ್ಯಾಂಡ್ ಕ್ರೂಸರ್ SUV ಕಾರು ಚಲಾಯಿಸಿದ್ದಾನೆ. ವಿಡಿಯೋ ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.
ರಮ್ಯಾ, ರಾಧಿಕಾ ಜೊತೆ ತಾರಾ; ಮೂವರು ನಟಿಯರನ್ನು ಒಟ್ಟಾಗಿ ಕಂಡ ನೆಟ್ಟಿಗರು ಶಾಕ್!...
ಮೂವರು ಸ್ಟಾರ್ ನಟಿಯರನ್ನು ಒಟ್ಟಾಗಿ ನೋಡಿ, ಸಾವಿರಾರು ಪ್ರಶ್ನೆ ಕೇಳಿದ ನೆಟ್ಟಿಗರು. ಸಿನಿಮಾ ಮಾಡಲೇ ಬೇಕು....
ಶಾಸಕ ಸ್ಥಾನಕ್ಕೆ ರಾಜೀನಾಮೆ, ಜನ ಸೇವೆಗೆ ಅವಕಾಶ ನೀಡಿದ ಸಿಎಂಗೆ ಧನ್ಯವಾದ ಅಂದ್ರು...!...
ಇತ್ತೀಚೆಗಷ್ಟೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ನಾಯಕ ಇದೀಗ ಶಾಸಕ ಸ್ಥಾನಕ್ಕೂ ರಿಸೈನ್ ಮಾಡಿದ್ದಾರೆ. ರಾಜೀನಾಮೆ ಪತ್ರವನ್ನು ಸ್ಪೀಕರ್‌ಗೆ ನೀಡಿದ್ದಾರೆ.
ನಟಿ ರಾಗಿಣಿ ವಾಟ್ಸಪ್ ಡಿಪಿ ಬದಲು; ಅರ್ಥ ತಿಳಿಯದೆ ನೆಟ್ಟಿಗರು ಕಂಗಾಲು!...
144 ದಿನಗಳ ಬಳಿಕ ಜೈಲಿನಿಂದ ಹೊರ ಬರುತ್ತಿದ್ದಂತೆ ನಟಿ ರಾಗಿಣಿ ಪ್ರೆಸ್‌ಮೀಟ್ ಮಾಡುವ ಮೂಲಕ ಎತ್ತರಿಗೂ ಉತ್ತರ ನೀಡುವುದಾಗಿ ಹೇಳಿದ್ದಾರೆ. ಫ್ಯಾಮಿಲಿ ಜೊತೆ ಸಮಯ ಕಳೆಯುತ್ತಿರುವ ರಾಗಿಣಿ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟಿವ್ ಆಗಿದ್ದಾರೆ. Women isnpiration quoteನ ತಮ್ಮ ವಾಟ್ಸಪ್ ಡಿಪಿಯಾಗಿ ಬದಲಾಯಿಸಿಕೊಂಡಿದ್ದಾರೆ.
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 29, 2021, 5:10 PM IST