ದೆಹಲಿ ದಂಗಲ್ : ಲಾಲ್ ಕಿಲಾ ಕೋಲಾಹಲ ಸೃಷ್ಟಿಸಿದವರೇ ನಾಪತ್ತೆ!

ದೆಹಲಿ ರೈತ ದಂಗೆ ಬೇರೆ ಬೇರೆ ಟ್ವಿಸ್ಟ್ ಪಡೆಯುತ್ತಿದೆ. ಹೊಸ ಹೊಸ ಆಯಾಮಗಳು ತೆರೆದುಕೊಳ್ಳುತಿದೆ. ರೈತರ ಟ್ರ್ಯಾಕ್ಟರ್‌ ರಾರ‍ಯಲಿ ಹಿಂಸಾಸ್ವರೂಪ ಪಡೆದಿದ್ದರ ಹಿಂದೆ, ಪಂಜಾಬ್‌ನ ನಟ ದೀಪ್‌ ಸಿಧು ಮತ್ತು ಗ್ಯಾಂಗ್‌ಸ್ಟರ್‌ ಲಖಾ ಸಿಧಾನ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿವೆ. 

First Published Jan 29, 2021, 11:19 AM IST | Last Updated Jan 29, 2021, 1:01 PM IST

ನವದೆಹಲಿ (ಜ. 29): ರಾಜದಾನಿ ರೈತ ದಂಗೆ ಬೇರೆ ಬೇರೆ ಟ್ವಿಸ್ಟ್ ಪಡೆಯುತ್ತಿದೆ. ಹೊಸ ಹೊಸ ಆಯಾಮಗಳು ತೆರೆದುಕೊಳ್ಳುತಿದೆ. ರೈತರ ಟ್ರ್ಯಾಕ್ಟರ್‌ ರಾರ‍ಯಲಿ ಹಿಂಸಾಸ್ವರೂಪ ಪಡೆದಿದ್ದರ ಹಿಂದೆ, ಪಂಜಾಬ್‌ನ ನಟ ದೀಪ್‌ ಸಿಧು ಮತ್ತು ಗ್ಯಾಂಗ್‌ಸ್ಟರ್‌ ಲಖಾ ಸಿಧಾನ ಪ್ರಮುಖ ಪಾತ್ರ ವಹಿಸಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿವೆ.

ಲಾಲ್ ಖಿಲಾದ ಕೋಲಾಹಲಕ್ಕೆ ಅಸಲಿ ಕಾರಣ ಯಾರು? ಬಯಲಾಯ್ತು ರಹಸ್ಯ! 

ತಾನು ಮಾಡಿದ ಕೆಲಸವನ್ನು ದೀಪ್ ಸಿಧು ಸಮರ್ಥಿಸಿಕೊಂಡಿದ್ದಾನೆ. ' ಕೆಂಪುಕೋಟೆಯಲ್ಲಿ ಪ್ರತಿಭಟನಾಕಾರರು ರಾಷ್ಟ್ರಧ್ವಜವನ್ನು ತೆಗೆದಿಲ್ಲ. ಬದಲಾಗಿ ಹೋರಾಟದ ಕುರಿತು ಸಾಂಕೇತಿಕವಾಗಿ ನಿಶಾನ್‌ ಸಾಹಿಬ್‌ ಹಾರಿಸಿದ್ದಾರೆ. ಇದು ಪೂರ್ವಯೋಜಿತವಲ್ಲ. ಆ ಕ್ಷಣದಲ್ಲಿ ಸಹಜವಾಗಿ ನಡೆದ ಘಟನೆ. ಜನರ ನೈಜ ಹಕ್ಕುಗಳನ್ನು ಕಡೆಗಣಿಸಿದಾಗ ಸಮೂಹವೊಂದು ಸೇರಿದಾಗ ಇಂಥ ಕೋಪದ ಘಟನೆಗಳು ಸಹಜ’ ಎಂದು ಸಮಜಾಯಿಷಿ ಕೊಟ್ಟಿದ್ಧಾನೆ. ಇದೀಗ ದೀಪ್ ಸಿಧು ನಾಪತ್ತೆಯಾಗಿದ್ದಾರೆ. 

 

Video Top Stories