ನವದೆಹಲಿ (29): ಮುಕೇಶ್‌ ಅಂಬಾನಿ ಒಡೆತನದ ರಿಲಯನ್ಸ್‌ ಜಿಯೋ ಟೆಲಿಕಾಂ ಕಂಪನಿ, ವಿಶ್ವದ ಅತ್ಯಂತ ಪ್ರಬಲ ಬ್ರ್ಯಾಂಡ್‌ಗಳ ಪೈಕಿ 5ನೇ ಸ್ಥಾನ ಪಡೆದುಕೊಂಡಿದೆ.

 ‘ದ ಬ್ರ್ಯಾಂಡ್‌ ಪೈನಾನ್ಸ್‌’ ಗ್ಲೋಬಲ್‌ 500 ರಾರ‍ಯಂಕಿಂಗ್‌ ಬಿಡುಗಡೆಯಾಗಿದ್ದು, ಅದರಲ್ಲಿ ವಿಚಾಟ್‌, ಫೆರಾರಿ, ರಷ್ಯಾದ ಸುಬರ್‌ ಬ್ಯಾಂಕ್‌, ಕೋಕಾ ಕೋಲಾ ಮತ್ತು ರಿಲಯನ್ಸ್‌ ಜಿಯೋ ಕ್ರಮವಾಗಿ ಟಾಪ್‌ 5 ಸ್ಥಾನ ಪಡೆದುಕೊಂಡಿವೆ.

ರೂ.11ರ ಪ್ಲ್ಯಾನ್‌‌‌‌ನಲ್ಲಿ 1GB ಡೇಟಾ: 2.51 ಕೋಟಿ ಚಂದಾದಾರರು! ...

 2016ರಲ್ಲಷ್ಟೇ ಆರಂಭವಾದ ಜಿಯೋ ಪ್ರಸಕ್ತ 40 ಕೋಟಿ ಚಂದದಾರರೊಂದಿಗೆ ಭಾರತದ ಅತಿದೊಡ್ಡ ಮತ್ತು ವಿಶ್ವದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿ ಹೊರಹೊಮ್ಮಿದೆ. ಮಾರುಕಟ್ಟೆಹೂಡಿಕೆ, ಹೂಡಿಕೆದಾರರ ಪಾಲು ಮತ್ತು ಉದ್ಯಮ ಸಾಧನೆಯನ್ನು ಗಮನಿಸಿ ಕಂಪನಿಗಳಿಗೆ ರಾರ‍ಯಂಕಿಂಗ್‌ ನೀಡಲಾಗಿದೆ.