Asianet Suvarna News Asianet Suvarna News

ಲ್ಯಾಂಡ್ ಕ್ರೂಸರ್ SUV ಕಾರು ಓಡಿಸಿದ 5 ವರ್ಷದ ಪುಟ್ಟ ಬಾಲಕ; ವಿಡಿಯೋ ವೈರಲ್

5 ವರ್ಷದ ಪುಟ್ಟ ಬಾಲಕ, ಟ್ರಾಫಿಕ್ ತುಂಬಿದ ನಗರ ರಸ್ತೆಯಲ್ಲಿ ಅತೀ ದೊಡ್ಡ ಲ್ಯಾಂಡ್ ಕ್ರೂಸರ್ SUV ಕಾರು ಚಲಾಯಿಸಿದ್ದಾನೆ. ವಿಡಿಯೋ ವೈರಲ್ ಆಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ.

5 Year old boy driving Land Cruiser SUV on busy highway in Pakistan video goes viral ckm
Author
Bengaluru, First Published Jan 29, 2021, 2:32 PM IST

ಮುಲ್ತಾನ್(ಜ.29): ಅಪ್ರಾಪ್ತರು ವಾಹನ ಚಲಾಯಿಸುವಂತಿಲ್ಲ. ಇದು ಕಾನೂನು ಉಲ್ಲಂಘನೆಯಾಗಿದೆ. ಕನಿಷ್ಠ 18 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ ಡ್ರೈವಿಂಗ್ ಲೈಸೆನ್ಸ್ ಹೊಂದಿದವರಿಗೆ ಮಾತ್ರ ನಿಗದಿತ ವಾಹನ ಚಲಾಯಿಸುವ ಪರವಾನಿಗೆ ಇದೆ. ಭಾರತದಲ್ಲಿರವು ಈ ನಿಯಮ ಬಹುತೇಕ ಎಲ್ಲಾ ದೇಶದಲ್ಲೂ ಇವೆ. ಕೇವಲ ವಯಸ್ಸಿನಲ್ಲಿ ಕೆಲ ಬದಲಾವಣೆಗಳಿವೆ. ಇದೀಗ ಪಾಕಿಸ್ತಾನದಲ್ಲಿ 5 ವರ್ಷದ ಪುಟ್ಟ ಬಾಲಕೋರ್ವ ಟೋಯೊಟಾ ಲ್ಯಾಂಡ್ ಕ್ರೂಸರ್ ಚಲಾಯಿಸಿ ಎಲ್ಲರ ಹುಬ್ಬೇರಿಸಿದ್ದಾನೆ.

U ಟರ್ನ್ ಬದಲು ಪಾದಾಚಾರಿ ಸೇತುವೆ ಮೇಲೆ ಕಾರು ಹತ್ತಿಸಿದ, ಇಳಿದಾಗ ಸಾಹಸಿಗೆ ಕಾದಿತ್ತು ಅಚ್ಚರಿ!.

ಪಾಕಿಸ್ತಾನದ ಮುಲ್ತಾನ್ ನಗರದಲ್ಲಿನ ಬೋಸಾನ್ ರಸ್ತೆಯಲ್ಲಿ ಈ ಪುಟ್ಟ ಬಾಲಕ ಲ್ಯಾಂಡ್ ಕ್ರೂಸರ್ ಕಾರನ್ನು ಸುಲಭವಾಗಿ ಚಲಾಯಿಸಿಕೊಂಡು ಹೋಗಿದ್ದಾನೆ. ಈ ಕಾರಿನಲ್ಲಿ ವಯಸ್ಕು ಯಾರೂ ಇರಲಿಲ್ಲ. ಇತರ ವಾಹನದಲ್ಲಿ ತೆರಳುವ ಮಂದಿ ಕೂತಲದಿಂದ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.

ಕಾರು ಡ್ರೈವರ್ ಸೀಟ್ ಹಿಂಬದಿಗೆ ಸರಿಸಿರುವ ಬಾಲಕ, ನಿಂತುಕೊಂಡಿದ್ದಾನೆ. ಸೀಟಿನಲ್ಲಿ ಕುಳಿತರೆ ಅತ್ತ ಪೆಡಲ್ ಎಟಕುವುದಿಲ್ಲ, ಇತ್ತ ರಸ್ತೆ ಕಾಣುವುದಿಲ್ಲ. ಹೀಗಾಗಿ ನಿಂತು ಕೊಂಡು ಸ್ಟೇರಿಂಗ್ ಹಿಡಿದುಕೊಂಡು ಕಾರು ಓಡಿಸಿದ್ದಾನೆ. 

ಲಾಕ್‌ಡೌನ್ ಸಂಕಷ್ಟದ ನಡುವೆ ಜಿಲ್ಲಾಧಿಕಾರಿ ಜೀಪಿನಲ್ಲಿ ಪತ್ನಿಗೆ ಡ್ರೈವಿಂಗ್ ಕ್ಲಾಸ್.

ಪಾಕಿಸ್ತಾನದ ಟ್ರಾಫಿಕ್ ರಸ್ತೆಗಳಲ್ಲಿ ಬೋಸಾನ ರಸ್ತೆ ಕೂಡ ಒಂದಾಗಿದೆ. ಸಿಗ್ನಲ್,  ಜಂಕ್ಷನ್ ಸೇರಿದಂತೆ ಹಲವು ಅಡೆತಡೆಗಳು ಈ ರಸ್ತೆಯಲ್ಲಿದೆ. ಇನ್ನು ಪೊಲೀಸರು ಕೂಡ ಈ ರಸ್ತೆಯಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ ಈ ಪುಟ್ಟ ಬಾಲಕನನ್ನು ಯಾವ ಪೊಲೀಸರುು ತಡೆದಿಲ್ಲ. 

 

ಇನ್ನು ಸಿಗ್ನಲ್‌ಗಳನ್ನು ದಾಟಿ ಮುಂದೆ ಸಾಗಿದ್ದಾನೆ. ಸಾಮಾಜಿಕ ಜಾಲತಾಣದಲ್ಲಿ ಈ ಪುಟ್ಟು ಬಾಲಕನ ಕಾರು ಡ್ರೈವಿಂಗ್ ವೈರಲ್ ಆಗಿದೆ. ಇದು ಯಾರು? ನಿಜವೇ? ಈ ಬಾಲಕನ ಪೋಕಷಕರು ಯಾರು? ಬಾಲಕನಿಗೆ ವಾಹನ ಕೊಟ್ಟ ಪೋಷಕರಿಗೆ ದಂಡ ವಿಧಿಸಿ ಎಂದು ಸಾವಿರಾರು ಕಮೆಂಟ್‌ಗಳು ಬಂದಿವೆ.

ವಿಡಿಯೋ ವೈರಲ್ ಆಗುತ್ತಿದ್ದಂತೆ, ಟ್ರಾಫಿಕ್ ಪೊಲೀಸ್ ಅಧಿಕಾರಿ ಜಫರ್ ಬುಜ್ದಾರ್ ತನಿಖೆಗೆ ಆದೇಶಿಸಿದ್ದಾರೆ. ಕಾರು ಹಾಗೂ ಪೋಷಕರ ಮಾಹಿತಿಗೆ ಆಗ್ರಹಿಸಿದ್ದಾರೆ. 

Follow Us:
Download App:
  • android
  • ios