ಉದ್ಧವ್‌ ಠಾಕ್ರೆಗೆ ಸಿಎಂ ಸ್ಥಾನ ಹೋಗುವ ಭೀತಿ!...

ಕೊರೋನಾದಿಂದಾಗಿ ಮಹಾರಾಷ್ಟ್ರ ಮುಖ್ಯಮಂತ್ರಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಪರಿಸ್ಥಿತಿ ಬಂದಿದೆ. ರಾಜಸ್ಥಾನದಲ್ಲಿ ಸಾಂವಿಧಾನಿಕ ಬಿಕ್ಕಟ್ಟೊಂದು ಎದುರಾಗಿದೆ. 


ಯಾವುದೇ ಕಾರಣಕ್ಕೂ ಮೇ.3 ವರೆಗೆ ಲಾಕ್‌ಡೌನ್‌ ಸಡಿಲಿಕೆ ಇಲ್ಲ'

21 ಜನ ಪಾಸಿಟಿವ್‌ಗಳಲ್ಲಿ ಇಬ್ಬರು ಡಿಸ್ಚಾರ್ಜ್‌ ಮಾಡಲಾಗಿದ್ದು ಇನ್ನೆರಡು ದಿನಗಳಲ್ಲಿ 6 ಜನ ಡಿಸ್ಚಾರ್ಜ್‌: ಡಿಸಿ ಕ್ಯಾಪ್ಟನ್‌ ರಾಜೇಂದ್ರ| ಕೋವಿಡ್‌-19 ಹೆಚ್ಚಿಗೆ ಹರಡಿರುವುದರಿಂದ ಬಾಗಲಕೋಟೆ ಜಿಲ್ಲೆ ರೆಡ್‌ ಜೋನ್‌ ಎಂದು ಘೋಷಣೆ| ಕೇಂದ್ರ ಸರ್ಕಾರ ಆಯಾ ಜಿಲ್ಲಾಧಿಕಾರಿಗಳ ನಿರ್ಣಯದಂತೆ ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳಲು ಆದೇಶಿಸಿದೆ| 

ಹೊರ ಜಿಲ್ಲೆಗೆ ಹೋದ್ರೆ, ಬಂದ್ರೆ ಹೋಂ ಕ್ವಾರಂಟೈನ್‌ ಕಡ್ಡಾಯ.

ಕೋವಿಡ್‌-19 ಸೋಂಕು ನಿಯಂತ್ರಿಸುವ ನಿಟ್ಟಿನಲ್ಲಿ ಲಾಕ್‌ಡೌನ್‌ ಜಾರಿಯಲ್ಲಿದ್ದು, ತುರ್ತುಕಾರ್ಯ ನಿಮಿತ್ತ ಹೊರ ಜಿಲ್ಲೆ ಹಾಗೂ ಹೊರ ರಾಜ್ಯಗಳಿಗೆ ತೆರಳಬಯಸುವವರಿಗೆ ಇ-ಪಾಸ್‌ ವ್ಯವಸ್ಥೆ ಜಾರಿಗೊಳಿಸಲಾಗಿದ್ದು, ಆನ್‌ಲೈನ್‌ನಲ್ಲೇ ಅರ್ಜಿ ಸಲ್ಲಿಸಬೇಕು. ಹೊರ ಜಿಲ್ಲೆ ಅಥವಾ ರಾಜ್ಯಗಳಿಂದ ಬರುವ ಎಲ್ಲರಿಗೂ ಹೋಂ ಕ್ವಾರಂಟೈನ್‌ ಮಾಡುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

ಪಾದರಾಯನಪುರ ಇಬ್ಬರು ಪುಂಡರಿಗೆ ಕೊರೋನಾ ಸೋಂಕು ದೃಢ; ವಿಕ್ಟೋರಿಯಾಗೆ ಶಿಫ್ಟ್

ಪಾದರಾಯನಪುರ ಇಬ್ಬರು ಪುಂಡರಿಗೆ ಕೊರೋನಾ ದೃಢಪಟ್ಟಿದೆ.  ಪಾದರಾಯನಪುರದಲ್ಲಿ ಕೊರೊನಾ ವಾರಿಯರ್ಸ್ ಮೇಲೆ ಹಲ್ಲೆ ಮಾಡಿ ಜೈಲು ಸೇರಿರುವ 54 ಮಂದಿಯಲ್ಲಿ ಇಬ್ಬರಿಗೆ ಕೊರೊನಾ ಇರುವುದು ಖಚಿತವಾಗಿದೆ. ಸೋಂಕಿತರನ್ನು ವಿಕ್ಟೋರಿಯಾಗೆ ಸ್ಥಳಾಂತರ ಮಾಡಲಾಗಿದೆ. ಇತರ ಆರೋಪಿಗಳನ್ನು ಹಜ್ ಭವನಕ್ಕೆ ಶಿಫ್ಟ್ ಮಾಡಲಾಗಿದೆ. 

47ನೇ ವಸಂತಕ್ಕೆ ಕಾಲಿರಿಸಿದ ಲಿಟ್ಲ್ ಮಾಸ್ಟರ್ ಸಚಿನ್ ತೆಂಡುಲ್ಕರ್ 

ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ 47ನೇ ಜನ್ಮದಿನಕ್ಕೆ ಕಾಲಿರಿಸಿದ್ದಾರೆ. ವಿಶ್ವಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ಅವರ ಹುಟ್ಟುಹಬ್ಬಕ್ಕೆ ಬಿಸಿಸಿಐ ಶುಭಕೋರಿದೆ. 

ಡಾ.ರಾಜ್‌ ಹುಟ್ಟುಹಬ್ಬ; ಅಣ್ಣಾವ್ರೇಕೆ ನಮ್ಮ ಮನಸ್ಸಲ್ಲಿ ಉಳಿಯುತ್ತಾರೆ!

ಒಮ್ಮೆ ನಿರ್ದೇಶಕರೊಬ್ಬರು ರಾಜ್‌ಕುಮಾರ್‌ ಅವರಿಗೊಂದು ಕತೆ ಹೇಳಲು ಮನೆಗೆ ಬಂದರು. ರಾಜ್‌ಕುಮಾರ್‌ ಅವರ ಬಳಿ ಕುಳಿತು ಸುಮಾರು ಮೂರೂವರೆ ಗಂಟೆಗಳ ಕಾಲ ಕತೆ ಕೇಳಿಸಿಕೊಂಡರು. ತುಂಬ ರೋಚಕವಾಗಿದ್ದ ಆ ಕತೆ ಖಂಡಿತಾ ಗೆಲ್ಲುತ್ತದೆ ಅನ್ನುವ ನಂಬಿಕೆ ಆ ಕತೆಯನ್ನು ಕೇಳಿದ ಎಲ್ಲರಿಗೂ ಬಂತು. ರಾಜ್‌ಕುಮಾರ್‌ ಜೊತೆಗೇ ಕೂತು ಕತೆ ಕೇಳಿದ್ದ ನಾಲ್ಕೈದು ಮಂದಿಯಂತೂ ಆ ಚಿತ್ರದಲ್ಲಿ ರಾಜ್‌ಕುಮಾರ್‌ ನಟಿಸಬೇಕೆಂದು ಒಕ್ಕೊರಲಿನಿಂದ ಹೇಳಿದರು.

ಲಾಕ್‌ಡೌನ್‌ ಕಾರಣ ತರಕಾರಿ ಮಾರಿ ಜೀವನ ನಡೆಸುತ್ತಿರುವ ಹಾಸ್ಯ ನಟ ಕಣ್ಣೀರು!

ಒಡಿಶಾ ಚಿತ್ರರಂಗದ ಖ್ಯಾತ ಹ್ಯಾಸ ಕಲಾವಿದ ರವಿ ಕುಮಾರ್ ಲಾಕ್‌ಡಾನ್‌ ಕಾರಣ ರಸ್ತೆಗಳಲ್ಲಿ ತರಕಾರಿ ಮಾರಿಕೊಂಡು ಜೀವನ  ಸಾಗಿಸುತ್ತಿದ್ದಾರೆ. ಹಾಸ್ಯ ಕಾಲಾವಿದ ರವಿ ಕುಮಾರ್‌ ಚಿತ್ರರಂಗದಲ್ಲಿ 'ಬ್ಲ್ಯಾಕ್‌ ರವಿ' ಎಂದು ಗುರುತಿಸಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದ ಚಿತ್ರೀಕರಣ, ಕಾರ್ಯಕ್ರಮಗಳು ರದ್ದಾದ ಕಾರಣ ಜೀವನ ನಡೆಸಲು ರವಿ ಮನೆ-ಮನೆಗೂ ಹೋಗಿ ತರಕಾರಿ ಮಾರುತ್ತಿದ್ದಾರೆ. 

ಬೆಂಗಳೂರಲ್ಲಿ ಕೊರೋನಾ ಸ್ಫೋಟ: ಪೊಲೀಸರೊಂದಿಗೆ ಬೊಮ್ಮಾಯಿ ತುರ್ತು ಸಭೆ

 ಬೆಂಗಳೂರಿನಲ್ಲಿ ಕೊರೋನಾ ಸ್ಫೋಟ ಹಿನ್ನೆಲೆ ಗೃಹ ಸಚಿವ ಬಸವರಾಜ್‌ ಬೊಮ್ಮಾಯಿ ತುರ್ತು ಸಭೆ ಕರೆದಿದ್ದಾರೆ. ಪಾದರಾಯನಪುರ, ಹೊಂಗಸಂದ್ರ ಘಟನೆ ಬಗ್ಗೆ ಚರ್ಚೆ ನಡೆಯಲಿದೆ. 

ಕೊರೋನಾ ಎಫೆಕ್ಟ್: ಭಾರತದ ಜಿಡಿಪಿ ಶೇ.1ಕ್ಕಿಂತ ಕೆಳಕ್ಕೆ ಕುಸಿಯುವ ಸಂಭವ

ಕೊರೋನಾ ವೈರಸ್ ಇಡೀ ಜಾಗತಿಕ ಆರ್ಥಿಕ ವ್ಯವಸ್ಥೆಯನ್ನೇ ಬುಡಮೇಲು ಮಾಡುವ ಮುನ್ಸೂಚನೆ ನೀಡಿದೆ. ಇದಕ್ಕೆ ಭಾರತ ಕೂಡಾ ಹೊರತಾಗಿಲ್ಲ. ಭಾರತದ ಜಿಡಿಪಿ ಒಂದಕ್ಕಿಂತ ಕೆಳಗೆ ಕುಸಿಯುವ ಭೀತಿ ಎದುರಾಗಿದೆ. 

ಛೀಮಾರಿ ಹಾಕಿಸಿಕೊಂಡ್ರೂ ಬುದ್ದಿ ಕಲಿತಿಲ್ಲ ಚೀನಾ, ಟಾಟಾ ನೆಕ್ಸಾನ್ ಡಿಸೈನ್ ಕಾಪಿ!

ಒರಿಜನಲ್ ಉತ್ಪನ್ನಗಳಿಗೆ ಪೈಪೋಟಿ ನೀಡುವಷ್ಟರ ಮಟ್ಟಿಗೆ ಚೀನಾ ಡೂಪ್ಲಿಕೇಟ್ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತದೆ. ವಿಶ್ವದ ಹಲವು ಕಾರುಗಳ ಡಿಸೈನ್ ಕದ್ದು ಕೋರ್ಟ್‌ನಿಂದ ಛೀಮಾರಿ ಹಾಕಿಸಿಕೊಂಡಿರುವ ಚೀನಾ ತನ್ನು ಬುದ್ದಿ ಮಾತ್ರ ಬಿಟ್ಟಿಲ್ಲ. ಚೀನಾ ಎಲ್ಲಾ ಆಟೋಮೊಬೈಲ್ ಕಂಪನಿಗಳ ಮೇಲೆ ಡಿಸೈನ್ ಕದ್ದ ಕೇಸ್‌ಗಳಿವೆ. ಇದೀಗ ಚೀನಾದ ಪ್ರತಿಷ್ಠಿತ ಆಟೋಮೊಬೈಲ್ ಕಂಪನಿ ಭಾರತದ ಹೆಮ್ಮೆಯ ಟಾಟಾ ಕಾರಿನ ವಿನ್ಯಾಸ ಕದ್ದು ಮುಖಭಂಗಕ್ಕೆ ಗುರಿಯಾಗಿದೆ.