Asianet Suvarna News Asianet Suvarna News

'ಯಾವುದೇ ಕಾರಣಕ್ಕೂ ಮೇ.3 ವರೆಗೆ ಲಾಕ್‌ಡೌನ್‌ ಸಡಿಲಿಕೆ ಇಲ್ಲ'

21 ಜನ ಪಾಸಿಟಿವ್‌ಗಳಲ್ಲಿ ಇಬ್ಬರು ಡಿಸ್ಚಾರ್ಜ್‌ ಮಾಡಲಾಗಿದ್ದು ಇನ್ನೆರಡು ದಿನಗಳಲ್ಲಿ 6 ಜನ ಡಿಸ್ಚಾರ್ಜ್‌: ಡಿಸಿ ಕ್ಯಾಪ್ಟನ್‌ ರಾಜೇಂದ್ರ| ಕೋವಿಡ್‌-19 ಹೆಚ್ಚಿಗೆ ಹರಡಿರುವುದರಿಂದ ಬಾಗಲಕೋಟೆ ಜಿಲ್ಲೆ ರೆಡ್‌ ಜೋನ್‌ ಎಂದು ಘೋಷಣೆ| ಕೇಂದ್ರ ಸರ್ಕಾರ ಆಯಾ ಜಿಲ್ಲಾಧಿಕಾರಿಗಳ ನಿರ್ಣಯದಂತೆ ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳಲು ಆದೇಶಿಸಿದೆ| 

DC K Rajendra Talks Over LockDown in Bagalkot District
Author
Bengaluru, First Published Apr 24, 2020, 2:33 PM IST

ಜಮಖಂಡಿ(ಏ.24): ಬಾಗಲಕೋಟೆ ಜಿಲ್ಲೆಯಲ್ಲಿ ಕಂಟೈನ್ಮೆಂಟ್‌ ಜೋನ್‌ಗಳು ಹೆಚ್ಚಾಗುತ್ತಿದ್ದು, ಮೇ.3 ರವರೆಗೆ ಲಾಕ್‌ಡೌನ್‌ ಸಡಿಲಿಕೆ ಮಾಡುವುದಿಲ್ಲ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ. ಕೆ.ರಾಜೇಂದ್ರ ಸ್ಪಷ್ಟಪಡಿಸಿದ್ದಾರೆ. 

ಇಲ್ಲಿನ ನಿಷೇಧಿತ ಪ್ರದೇಶಗಳಾದ ಅಂಬೇಡ್ಕರ್‌ ವೃತ್ತ, ಶಿವಾಜಿ ವೃತ್ತ, ಸರ್ಕಾರಿ ಆಸ್ಪತ್ರೆ, ಶಾಲಂಗೇಟ್‌ ಬಳಿ ಹಾಗೂ ಪೊಲೀಸ್‌ ಕ್ವಾಟ​ರ್‍ಸ್ರ್‍ಗಳಲ್ಲಿ ಜನಜೀವನದ ವ್ಯವಸ್ಥೆ ಬಗ್ಗೆ ಸಮೀಕ್ಷೆ ನಡೆಸಿದ ಅವರು, ಕ್ವಾರಂಟೈನ್‌ದಲ್ಲಿನ ಜನರ ಹಾಗೂ ಸೀಲ್‌ಡೌನ್‌ ಪ್ರದೇಶದಲ್ಲಿನ ಜನರ ಚಲನ-ವಲನವನ್ನು ಪರಿಶೀಲಿಸದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌-19 ಹೆಚ್ಚಿಗೆ ಹರಡಿರುವುದರಿಂದ ಬಾಗಲಕೋಟೆ ಜಿಲ್ಲೆ ರೆಡ್‌ ಜೋನ್‌ ಎಂದು ಘೋಷಿಸಿದ್ದು, ಈಗಾಗಲೇ ಕೇಂದ್ರ ಸರ್ಕಾರ ಆಯಾ ಜಿಲ್ಲಾಧಿಕಾರಿಗಳ ನಿರ್ಣಯದಂತೆ ಕಟ್ಟು ನಿಟ್ಟಿನ ಕ್ರಮ ಕೈಕೊಳ್ಳಲು ಆದೇಶಿಸಿದೆ. ಬ್ಯಾಂಕ್‌, ಕೃಷಿ-ಕೃಷೇತರ ಚಟುವಟಿಕೆಗಳು, ಸಾಗಾಣಿಕೆ ಹೊರತು ಪಡಿಸಿ ಉಳಿದೆಲ್ಲ ಸೌಕರ್ಯಗಳನ್ನು ಸದ್ಯಕ್ಕೆ ನಿಷೇಧಿಸಲಾಗಿದೆ. ಜನರು ಗುಂಪು ಗುಂಪಾಗಿ ಕೂಡಿಕೊಂಡು ಇರಬಾರದು ಎಂದರು.

ಕೊರೋನಾ ನಿಗ್ರಹಕ್ಕಾಗಿ ದೇವತೆಗೆ ಮೊರೆ ಹೋದ ಗ್ರಾಮಸ್ಥರು: ತಾಯಿಗೆ ದೀರ್ಘದಂಡ ನಮಸ್ಕಾರ ಸೇವೆ

ಖಾಸಗಿ ಆಸ್ಪತ್ರೆ ಮುಚ್ಚುತ್ತಿದ್ದು ಅದರಿಂದ ಕೆಲವು ಅನಾಹುತ ಆಗುತ್ತಿವೆಂದು ಪ್ರಶ್ನೆಗೆ ಜಿಲ್ಲೆಯಲ್ಲಿ 541 ನೋಂದಾಯಿತ ವೈದ್ಯರಿದ್ದು, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರೊಂದಿಗೆ ಮಾತನಾಡಿದ್ದು, ಜಿಲ್ಲೆಯ ಎಲ್ಲ ಖಾಸಗಿ ವೈದ್ಯರು ತಮ್ಮ ಕಾರ್ಯದಲ್ಲಿ ತೊಡಗಬೇಕು. ಎಪಿಎಂ ಕಾಯ್ದೆ ಪ್ರಕಾರ ವೈದ್ಯರು ಕಡ್ಡಾಯವಾಗಿ ಸೇವೆ ಸಲ್ಲಿಸಲು ಸೂಚಿಸಲಾಗಿದೆ.

ಜಿಲ್ಲೆಯಲ್ಲಿ ಕಳೆದ 30 ದಿನಗಳಿಂದ ಸುಮಾರು 30 ಸಾವಿರ ಕ್ವಾರಂಟೈನದಲ್ಲಿನ ಜನಕ್ಕೆ ಊಟ-ತಿಂಡಿ ಹಾಗೂ ನಿಷೇಧಿತ ಪ್ರದೇಶದ ಜನಕ್ಕೆ ತರಕಾರಿ, ಹಾಲು, ದಿನಸಿ ಸಾಮಗ್ರಿಗಳನ್ನು ವಿತರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ.ರಾಜೇಂದ್ರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಳಗಾಸರ್‌, ಉಪವಿಭಾಗಾಧಿಕಾರಿ ಡಾ.ಸಿದ್ದು ಹುಲ್ಲೊಳ್ಳಿ, ಡಿವೈಎಸ್ಪಿ ಆರ್‌.ಕೆ.ಪಾಟೀಲ, ತಹಸೀಲ್ದಾರ್‌ ಎಸ್‌.ಬಿ.ಇಂಗಳೆ, ನಗರಸಭೆ ಪೌರಾಯುಕ್ತ ರಾಮಕೃಷ್ಣ ಸಿದ್ದನಕೊಳ್ಳ, ತಾಲೂಕು ವೈದ್ಯಾಧಿಕಾರಿ ಡಾ.ಜಿ.ಎಸ್‌.ಗಲಗಲಿ, ಎಸೈ ಗೋವಿಂದಗೌಡ ಪಾಟೀಲ ಇದ್ದರು.

ರಂಜಾನ್‌ ಹಬ್ಬ ಮನೆಯಲ್ಲೇ ಆಚರಿಸಿ

ಮುಸ್ಲಿಂ ಸಮಾಜದವರು ರಂಜಾನ್‌ ಹಬ್ಬವನ್ನು ಮನೆಯಲ್ಲೇ ಆಚರಿಸಬೇಕು. ಹಬ್ಬದ ಹೆಸರಲ್ಲಿ ಸಮಾಜದಲ್ಲಿ ಯಾವುದೇ ಗೊಂದಲ ಸೃಷ್ಟಿಮಾಡಬಾರದು ಎಂದು ಡಿಸಿ ಕ್ಯಾಪ್ಟನ್‌ ರಾಜೇಂದ್ರ ತಿಳಿಸಿದರು.
ಕೊರೋನಾ ಕಾಯಿಲೆ ಯಾವುದೇ ಕೋಮಿಗೆ ಪ್ರತ್ಯೇಕವಾಗಿ ಬರತಕ್ಕಂತದ್ದಲ್ಲ. ಈ ಕಾಯಿಲೆ ಯಾವುದೇ ಜಾತಿ-ಮತ-ಪಂಥ, ಬಡವ-ಶ್ರೀಮಂತರೆನ್ನುವುದಿಲ್ಲ. ಎಲ್ಲರೂ ಒಗ್ಗಟ್ಟಾಗಿ ಮಹಾಮಾರಿ ಕೋವಿಡ್‌ನ್ನು ಹೊಡೆದೊಡಿಸೋಣ. ಎಲ್ಲರೂ ಕೋಮು ಸೌಹಾರ್ದತೆ ಕಾಪಾಡಿಕೊಂಡು ಒಂದಾಗಬೇಕು ಎಂದು ಸಲಹೆ ನೀಡಿದರು.

ಸದ್ಯ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಯಾವುದೇ ಪಾಸಿಟಿವ್‌ ಕೇಸ್‌ಗಳು ಪತ್ತೆಯಾಗಿಲ್ಲ. ಈಗಾಗಲೇ ಜಿಲ್ಲೆಯಲ್ಲಿನ 300 ಜನರ ಪ್ರೈಮರಿ ಸಂಪರ್ಕದಲ್ಲಿದ್ದ ಹಾಗೂ 1300 ಜನ ಸೆಕೆಂಡರಿ ಸಂಪರ್ಕದಲ್ಲಿದ್ದು, ಅವರೆಲ್ಲರನ್ನು ಕ್ವಾರಂಟೈನ್‌ದಲ್ಲಿಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 21 ಜನ ಪಾಸಿಟಿವ್‌ ಕೇಸಗಳಿದ್ದವು. ಅದರಲ್ಲಿ ಇಬ್ಬರು ಡಿಸ್ಚಾಜ್‌ರ್‍ ಮಾಡಲಾಗಿದೆ. ಇನ್ನೆರಡು ದಿನಗಳಲ್ಲಿ ಇನ್ನೂ 6 ಜನ ಡಿಸ್ಚಾರ್ಜ್‌ ಮಾಡುವ ಸಾಧ್ಯತೆ ಇದೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್‌ ಡಾ. ಕೆ.ರಾಜೇಂದ್ರ ಅವರು ಹೇಳಿದ್ದಾರೆ. 

ಕ್ವಾರಂಟೈನ್‌ದಲ್ಲಿರುವ ಯಾವುದೇ ಪೊಲೀಸ್‌ ಪೇದೆಗಳು ಸೇವೆಯಲ್ಲಿ ಇರುವುದಿಲ್ಲ. ಅವರೆಲ್ಲರನು ಕಡ್ಡಾಯವಾಗಿ ಕ್ವಾರಂಟೈನ್‌ದಲ್ಲಿ ಇಡಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಳಗಾಸರ್‌ ತಿಳಿಸಿದ್ದಾರೆ. 
 

Follow Us:
Download App:
  • android
  • ios