ಲಾಕ್‌ಡೌನ್‌ ಕಾರಣ ತರಕಾರಿ ಮಾರಿ ಜೀವನ ನಡೆಸುತ್ತಿರುವ ಹಾಸ್ಯ ನಟ ಕಣ್ಣೀರು!

ಒಡಿಶಾ ಚಿತ್ರರಂಗದ ಖ್ಯಾತ ಹ್ಯಾಸ ಕಲಾವಿದ ರವಿ ಕುಮಾರ್ ಲಾಕ್‌ಡಾನ್‌ ಕಾರಣ ರಸ್ತೆಗಳಲ್ಲಿ ತರಕಾರಿ ಮಾರಿಕೊಂಡು ಜೀವನ  ಸಾಗಿಸುತ್ತಿದ್ದಾರೆ. 

Odisha actor ravi kumar sells vegetable during lockdown for living

ಮಹಾಮಾರಿ ಕೊರೋನಾ ವೈರಸ್‌ ಲಾಕ್‌ಡೌನ್‌ನಿಂದ ಅದೆಷ್ಟೋ  ಕಲಾವಿದರು ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಕಲಾವಿದರ ನೆರವಿಗೆ  ಸರ್ಕಾರ ಹಣ ಹಾಗೂ ದಿನಸಿ ಸಾಮಾಗ್ರಿಗಳನ್ನು ನೀಡಿದರೂ ಕೆಲವೊಂದು ಕಮಿಟ್‌ಮೆಂಟ್‌ಗಳು ಇರುವ  ಕಾರಣ ಸ್ವಾಭಿಮಾನದಿಂದ ಯಾವುದೋ ಒಂದು ಮಾರ್ಗದಲ್ಲಿ ದುಡಿಯುವುದು ಅನಿವಾರ್ಯವಾಗಿದೆ. 

ಹಾಸ್ಯ ಕಾಲಾವಿದ ರವಿ ಕುಮಾರ್‌ ಚಿತ್ರರಂಗದಲ್ಲಿ 'ಬ್ಲ್ಯಾಕ್‌ ರವಿ' ಎಂದು ಗುರುತಿಸಿಕೊಂಡಿದ್ದಾರೆ. ಲಾಕ್‌ಡೌನ್‌ನಿಂದ ಚಿತ್ರೀಕರಣ, ಕಾರ್ಯಕ್ರಮಗಳು ರದ್ದಾದ ಕಾರಣ ಜೀವನ ನಡೆಸಲು ರವಿ ಮನೆ-ಮನೆಗೂ ಹೋಗಿ ತರಕಾರಿ ಮಾರುತ್ತಿದ್ದಾರೆ. 

ಎಲ್ಲಿ ಮಾಯವಾದ್ರು 'ಮಾರಿ ಕಣ್ಣು ಹೋರಿ ಮ್ಯಾಲೆ' ನಿರ್ದೇಶಕ ಕುಮಾರ್; ಹುಡುಕಾಡುತ್ತಿದೆ ಚಿತ್ರರಂಗ! .

'ನಮ್ಮದು  ತುಂಬಾ ದೊಡ್ಡ ಕುಟುಂಬ ಅವರನ್ನು ಸಾಕಲು ನಾನು ದುಡಿಯಲೇಬೇಕು. ಮೊದಲು  ಮೊಟ್ಟೆ ಅಂಗಡಿ ತೆರೆದೆ  ಆದರೆ ಅದರಿಂದ ಬರುವ ಹಣ ಸಾಲುತ್ತಿಲ್ಲವೆಂದು ತರಕಾರಿ ಮಾರಾಟ ಮಾಡುತ್ತಿರುವೆ ' ಎಂದು ಹೇಳಿದ್ದಾರೆ.

ರವಿ ಕುಮಾರ್‌ 30ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಮನೆಯಲ್ಲಿ 11 ಸದಸ್ಯರು ಇರುವ ಕಾರಣ ದುಡಿಯಲು ರವಿ ಕುಮಾರ್‌ ಕಷ್ಟ ಪಡುತ್ತಿದ್ದಾರೆ.

ಕ್ವಾರಂಟೈನ್‌ನಲ್ಲಿ ಸಿಕ್ಸ್‌ ಪ್ಯಾಕ್ಸ್‌ ಮಾಡಿದ 'ನಾಗಿಣಿ' ತ್ರಿಶೂಲ್ ಅಲಿಯಾಸ್‌ ನಿನಾದ್ ಲುಕ್‌ ನೋಡಿ!

ಸ್ವಾಭಿಮಾನದಿಂದ ಬದುಕಬೇಕು ಅನಿವಾರ್ಯತೆಗಳು ಎದುರಾದರೇ ಒಳ್ಳೇಯ ಮಾರ್ಗದಲ್ಲಿ ಯಾವ ಕೆಲಸವಾದರೂ ಸರಿ ಮಾಡುವುದಕ್ಕೆ ರೆಡಿಯಾಗಿರಬೇಕು ಎನ್ನುವುದನ್ನು ಊಬರ್ ಕಾರ್ ಚಲಾಯಿಸುವ ಮೂಲಕ ಸ್ಯಾಂಡಲ್ ವುಡ್ ನಟ ಶಂಕರ್ ಅಶ್ವಥ್ ಅವರು ನಮಗೆಲ್ಲಾ  ಮಾದರಿಯಾಗಿದ್ದನ್ನು ನಾವಿಲ್ಲಿ ಸ್ಮರಿಸಬಹುದು .

Latest Videos
Follow Us:
Download App:
  • android
  • ios