ಕೇಂದ್ರದಿಂದ ಬಡವರಿಗೆ ಉಚಿತ ಆಹಾರ, ಕೊರೋನಾ 2ನೇ ಅಲೆ ಅತೀ ಭೀಕರ; ಏ.23ರ ಟಾಪ್ 10 ಸುದ್ದಿ!
ಬಡವರಿಗೆ 2 ತಿಂಗಳು ಅಕ್ಕಿ, ಆಹಾರ ಧಾನ್ಯ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಮುಖ್ಯಮಂತ್ರಿಗಳ ಜೊತೆ ಸಭೆ ನಡೆಸಿದ ಪ್ರಧಾನಿ ಮೋದಿ. ಇತ್ತ 1700 ಡೋಸ್ ಲಸಿಕೆ ಕದ್ದ ಕಳ್ಳ ಬ್ಯಾಗ್ ವಾಪಸ್ ಮಾಡಿದ ಪ್ರಾಮಾಣಿಕತೆ ಮೆರೆದಿದ್ದಾನೆ. ವೃದ್ಧರಿಗೆ ಉಬರ್ ಉಚಿತ ರೈಡ್, ನೆಟ್ಟಿಗರ ಟೀಕೆಗೆ ನಟಿ ತಿರುಗೇಟು ಸೇರಿದಂತೆ ಏಪ್ರಿಲ್ 23ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಕೊರೋನಾ ಸಂಕಷ್ಟ; ಬಡವರಿಗೆ 2 ತಿಂಗಳು ಉಚಿತ ಆಹಾರ ಧಾನ್ಯ ಘೋಷಿಸಿದ ಕೇಂದ್ರ ಸರ್ಕಾರ!...
ಕೊರೋನಾ 2ನೇ ಅಲೆ ಮೀತಿ ಮೀರಿರುವ ಕಾರಣ ಹಲವು ರಾಜ್ಯಗಳಲ್ಲಿ ಅಗತ್ಯ ಹಾಗೂ ತುರ್ತು ಸೇವೆ ಹೊರತು ಪಡಿಸಿ ಉಳಿದೆಲ್ಲಾ ಸೇವೆಗಳು ಬಂದ್ ಆಗಿದೆ. ಹೀಗಾಗಿ ಕೇಂದ್ರ ಸರ್ಕಾರ ಒಬ್ಬ ವ್ಯಕ್ತಿಗಳೆ ತಿಂಗಳಿಗೆ 5 ಕೆಜಿ ಅಕ್ಕಿ, ಆಹಾರ ಧಾನ್ಯಗಳನ್ನು 2 ತಿಂಗಳವರೆಗೆ ಉಚಿತವಾಗಿ ನೀಡುವುದಾಗಿ ಕೇಂದ್ರ ಘೋಷಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಭೆ; ಆಕ್ಸಿಜನ್, ಲಸಿಕೆ ಕೊರತೆ ಸೇರಿ ಸಮಸ್ಯೆಗೆ ಮೋದಿ ಸೂತ್ರ!...
ಕೊರೋನಾ ವೈರಸ್ ಮೀತಿ ಮೀರುತ್ತಿರುವ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶದ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ಸಭೆ ನಡೆಸಿದ್ದಾರೆ. ಕೊರೋನಾ ನಿಯಂತ್ರಣ, ಆಕ್ಸಿಜನ್, ಲಸಿಕೆ ಕೊರತೆ ಸೇರಿದಂತೆ ಹಲವು ವಿಚಾರಗಳ ಕುರಿತು ಚರ್ಚೆ ನಡೆಸಿದ್ದಾರೆ. ಸಭೆಯಲ್ಲಿ ಮೋದಿ ಮಹತ್ವದ ಸೂಚನೆ ನೀಡಿದ್ದಾರೆ.
1700 ಡೋಸ್ ಲಸಿಕೆ ಕದ್ದ ಬ್ಯಾಗ್ ವಾಪಸ್ ಮಾಡಿದ ಪ್ರಾಮಾಣಿಕ ಕಳ್ಳ!...
ಬ್ಯಾಗ್ ಕಳ್ಳತನ ಮಾಡಿದ್ದ ಕಳ್ಳನಿಗೆ ಜ್ಞಾನೋದಯ/ ಕೊರೋನಾ ಲಸಿಕೆ ಇದೆ ಎಂದು ಮನಗಂಡು ಪೊಲೀಸ್ ಠಾಣೆಗೆ ವಾಪಸ್/ ಠಾಣೆ ಹೊರಗಿನ ಟೀ ಶಾಪ್ ಗೆ ಕೊಟ್ಟು ನಡೆದ/ ಕೊರೋನಾ ಮತ್ತು ಕಳ್ಳತನ
ಕೊರೋನಾ ನಂತರದಲ್ಲಿ ಬ್ಯಾಕ್ ಟು ಬೇಸಿಕ್ಸ್: ಅಮೆರಿಕ-ಭಾರತದ 2030 ಯೋಜನೆ...
ಸುಸ್ಥಿರ ಜೀವನಶೈಲಿ ಮತ್ತು ಬ್ಯಾಕ್ ಟು ಬೇಸಿಕ್ಸ್ನ ಮಾರ್ಗದರ್ಶಿ ತತ್ವಶಾಸ್ತ್ರವು ಕೊರೋನಾ ನಂತರದ ನಮ್ಮ ಆರ್ಥಿಕ ಕಾರ್ಯತಂತ್ರದ ಪ್ರಮುಖ ಆಧಾರಸ್ತಂಭವಾಗಿರಬೇಕು ಎಂದ ಮೋದಿ | ಭಾರತ - ಅಮೆರಿಕದ ಮಹತ್ವದ ಯೋಜನೆ
IPL 2021: ಆರ್‌ಸಿಬಿ ಪರ 6 ಸಾವಿರ ರನ್, ಕಿಂಗ್ ಕೊಹ್ಲಿ ಸಾಧನೆಗೆ ಮತ್ತೊಂದು ಗರಿ...
ಐಪಿಎಲ್ ಇತಿಹಾಸದಲ್ಲಿ 6 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ದಾಖಲೆಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ.
ಎದೆ ಸೀಳು ತೋರಿಸಿದ ನಟಿ: 'ನೀವ್ ಟ್ರೋಲ್ ಮಾಡಿದ್ರೆ ನಾನ್ ವಿಡಿಯೋ ತೆಗೀತೀನಿ ಅನ್ಕೊಂಡ್ರಾ'?...
ರಿಯಾಲಿಟಿ ಟೆಲಿವಿಷನ್ ನಟಿ ದಿವ್ಯಾ ಅಗರ್ವಾಲ್, ಎಂಟಿವಿ ಸ್ಪ್ಲಿಟ್ಸ್‌ವಿಲ್ಲಾ ಮತ್ತು ಏಸ್ ಆಫ್ ಸ್ಪೇಸ್‌ನಂತಹ ಕಾರ್ಯಕ್ರಮಗಳ ಮೂಲಕ ಫೇಮಸ್ ಆಗಿದ್ದಾರೆ. ಅವರ ಹೊಸ ಇನ್‌ಸ್ಟಾಗ್ರಾಮ್ ರೀಲ್ಸ್ ವೀಡಿಯೊವನ್ನು ಟೀಕಿಸಿದ ಟ್ರೋಲ್‌ಗಳ ವಿರುದ್ಧ ವಾಗ್ದಾಳಿ ನಡೆಸಿದ್ದು ಈಗ ಸುದ್ದಿಯಲ್ಲಿದ್ದಾರೆ.
ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ಶೀಘ್ರ ಭಾರತ ನಂ.1: ಕೇಂದ್ರ ಸಚಿವ ಗಡ್ಕರಿ...
ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಮೈಲುಗಲ್ಲು ಸ್ಥಾಪಿಸುತ್ತಾ ಹೊರಟಿದೆ. ಈ ಹಿಂದಿನ ಐದಾರು ವರ್ಷಗಳಿಗೆ ಹೋಲಿಸಿದರೆ ಎಲೆಕ್ಟ್ರಿಕ್ ವಾಹನಗಳ ಬಳಕೆಯ ಪ್ರಮಾಣವೂ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಮುಂದಿನ ಕೆಲವೇ ದಿನಗಳಲ್ಲಿ ಭಾರತವು ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯಲ್ಲಿ ಭಾರತ ನಂ.1 ಸ್ಥಾನಕ್ಕೇರಲಿದೆ ಎಂದು ಕೇಂದ್ರ ಸಚಿವ ಗಡ್ಕರಿ ಅಭಿಪ್ರಾಯಪಟ್ಟಿದ್ದಾರೆ.
ನಟ, ನಟಿಯರ ವ್ಯಾನಿಟಿ ವ್ಯಾನ್ ಕೊರೋನೋ ಡ್ಯೂಟಿಯ ಪೊಲೀಸರಿಗೆ ನೀಡಿದ ಉದ್ಯಮಿ...
ಕೊರೋನಾ ತಡೆಯುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ಕರ್ಫ್ಯೂ ವಿಧಿಸಿದ್ದು, ಇದು ಚಲನಚಿತ್ರ ಶೂಟಿಂಗ್‌ಗಳನ್ನು ಸ್ಥಗಿತಗೊಳಿಸಿದೆ. ತನ್ನ ವಾಹನಗಳನ್ನು ಯಾವುದೇ ಉಪಯೋಗವಿಲ್ಲದೆ ನಿಲ್ಲಿಸಿದ್ದರಿಂದ, ವ್ಯಾನಿಟಿ ವ್ಯಾನ್ ಮಾಲೀಕ ಕೇತನ್ ರಾವಲ್ ಅವರು ಕೋವಿಡ್ -19 ಕರ್ತವ್ಯದಲ್ಲಿ ಮುಂಬೈ ಪೊಲೀಸರ ಬಳಕೆಗಾಗಿ ತಮ್ಮ ವ್ಯಾನ್‌ಗಳನ್ನು ನೀಡಿದ್ದಾರೆ.
ಬದುಕಿದ್ದವರಿಗೆ ಚಿಕಿತ್ಸೆ ಚಿಂತೆ, ಸತ್ತವರಿಗೆ ಚಿತಾಗಾರದ ಚಿಂತೆ, 2 ನೇ ಅಲೆಯ ಭೀಕರತೆ ಇದು!...
ಕೋವಿಡ್ 2 ನೇ ಅತ್ಯಂತ ಭಯಾನಕ ಹಾಗೂ ಭೀಕರವಾಗಿದೆ. ಸೋಂಕು ವೇಗವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆ ತಂದರೆ ಆಕ್ಸಿಜನ್ ಇಲ್ಲದೇ, ಬೆಡ್ ಸಿಗದೇ, ಚಿಕಿತ್ಸೆ ಸಿಗದೇ ಅಲ್ಲಲ್ಲಿಯೇ ಸಾವನ್ನಪ್ಪುತ್ತಿರುವ ದೃಶ್ಯ ಮನ ಕಲಕುತ್ತದೆ.
ಕೊರೋನಾ ಕಾಲ : ವೃದ್ಧರಿಗೆ ಉಬರ್ ಉಚಿತ ರೈಡ್ ಘೋಷಣೆ...
ಕೊರೋನಾ ಮಹಾಮಾರಿ ಏರುತ್ತಲೇ ಇದೆ. ಜನರು ಸೋಂಕಿನಿಂದ ಹೈರಾಣಾಗಿದ್ದಾರೆ. ಇದೇ ವೇಳೆ ಆ್ಯಪ್ ಆಧಾರಿತ ಸಾರಿಗೆ ಸಂಸ್ಥೆ ಉಬರ್ ಉಚಿತ ರೈಡ್‌ಗಳನ್ನು ಘೋಷಿಸಿದೆ.