IPL 2021: ಆರ್‌ಸಿಬಿ ಪರ 6 ಸಾವಿರ ರನ್, ಕಿಂಗ್ ಕೊಹ್ಲಿ ಸಾಧನೆಗೆ ಮತ್ತೊಂದು ಗರಿ
ಐಪಿಎಲ್ ಇತಿಹಾಸದಲ್ಲಿ 6 ಸಾವಿರ ರನ್ ಬಾರಿಸಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ದಾಖಲೆಗೆ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ ಪಾತ್ರರಾಗಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಮುಂಬೈ(ಏ.23): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕ ವಿರಾಟ್ ಕೊಹ್ಲಿ, ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯದಲ್ಲಿ 6,000 ರನ್ ಬಾರಿಸುವ ಮೂಲಕ ಐಪಿಎಲ್‌ನಲ್ಲಿ ಈ ಸಾಧನೆ ಮಾಡಿದ ಮೊದಲ ಕ್ರಿಕೆಟಿಗ ಎನ್ನುವ ದಾಖಲೆ ಬರೆದಿದ್ದಾರೆ.
ಇಲ್ಲಿನ ವಾಂಖೇಡೆ ಮೈದಾನದಲ್ಲಿ ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯಕ್ಕೂ ಮುನ್ನ ಕೊಹ್ಲಿ 195 ಪಂದ್ಯಗಳನ್ನಾಡಿ 5,949 ರನ್ ಬಾರಿಸಿದ್ದರು. ಐಪಿಎಲ್‌ನ 188ನೇ ಇನಿಂಗ್ಸ್‌ನಲ್ಲಿ ಕೊಹ್ಲಿ 51 ರನ್ ಬಾರಿಸುತ್ತಿದ್ದಂತೆಯೇ 6 ಸಾವಿರ ರನ್ ಬಾರಿಸಿದ ದಾಖಲೆ ನಿರ್ಮಿಸಿದ್ದಾರೆ. ಅಂದಹಾಗೆ ಕೊಹ್ಲಿ ಇದೇ ಪಂದ್ಯದಲ್ಲಿ ತಮ್ಮ ವೃತ್ತಿಜೀವನದ 40ನೇ ಐಪಿಎಲ್ ಅರ್ಧಶತಕವನ್ನು ಪೂರೈಸಿದರು.
ಚೊಚ್ಚಲ ಆವೃತ್ತಿಯ ಐಪಿಎಲ್ ಟೂರ್ನಿಯಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಪ್ರತಿನಿಧಿಸುತ್ತಾ ಬಂದಿರುವ ವಿರಾಟ್ ಕೊಹ್ಲಿ ಹಲವಾರು ಬಾರಿ ಏಕಾಂಗಿಯಾಗಿ ತಂಡಕ್ಕೆ ಗೆಲುವು ತಂದಿಟ್ಟಿದ್ದಾರೆ. ಕಳೆದ 13 ಆವೃತ್ತಿಗಳಿಂದಲೂ ಐಪಿಎಲ್ ಗೆಲ್ಲಲು ವಿಫಲವಾಗಿರುವ ಆರ್‌ಸಿಬಿ ಈ ಬಾರಿ ಸಾಕಷ್ಟು ಬಲಿಷ್ಠವಾಗಿ ಗುರುತಿಸಿಕೊಂಡಿದ್ದು, ಆಡಿದ ಮೊದಲ 4 ಪಂದ್ಯಗಳಲ್ಲಿ ಭರ್ಜರಿ ಗೆಲುವು ಸಾಧಿಸಿದೆ.
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಪರ ವಿರಾಟ್ ಕೊಹ್ಲಿಯ ಸಾಧನೆಯ ಅಂಕಿ-ಅಂಶ ಇಲ್ಲಿದೆ ನೋಡಿದೆ
ಪಂದ್ಯ: 196
ಇನಿಂಗ್ಸ್: 188
ರನ್‌ಗಳು: 6004*
ಗರಿಷ್ಠ ಸ್ಕೋರ್: 113
ಬ್ಯಾಟಿಂಗ್ ಸರಾಸರಿ: 38.24
ಸ್ಟ್ರೈಕ್‌ರೇಟ್: 130.63
ಶತಕ: 5
ಅರ್ಧಶತಕ: 40
ಬೌಂಡರಿ: 517
ಸಿಕ್ಸರ್: 203
(* ರಾಜಸ್ಥಾನ ರಾಯಲ್ಸ್ ವಿರುದ್ದದ ಪಂದ್ಯ ಮುಕ್ತಾಯದ ವೇಳೆಗೆ| 22-04-2021)