ಕೊರೋನಾ ಕಾಲ : ವೃದ್ಧರಿಗೆ ಉಬರ್‌ ಉಚಿತ ರೈಡ್‌ ಘೋಷಣೆ

ಕೊರೋನಾ ಮಹಾಮಾರಿ ಏರುತ್ತಲೇ ಇದೆ. ಜನರು ಸೋಂಕಿನಿಂದ ಹೈರಾಣಾಗಿದ್ದಾರೆ. ಇದೇ ವೇಳೆ ಆ್ಯಪ್‌ ಆಧಾರಿತ ಸಾರಿಗೆ ಸಂಸ್ಥೆ ಉಬರ್‌ ಉಚಿತ ರೈಡ್‌ಗಳನ್ನು ಘೋಷಿಸಿದೆ.

Uber announces free rides For Old Age people to get covid vaccine snr

 ಮಂಗಳೂರು (ಏ.23) :  ವೃದ್ಧರಿಗೆ ಮತ್ತು ಅಸಹಾಯಕರಿಗೆ ಕೋವಿಡ್‌-19 ನಿರೋಧಕ ಲಸಿಕೆ ಪಡೆಯಲು ಸಾಧ್ಯವಾಗಲು ಆ್ಯಪ್‌ ಆಧಾರಿತ ಸಾರಿಗೆ ಸಂಸ್ಥೆ ಉಬರ್‌ ಉಚಿತ ರೈಡ್‌ಗಳನ್ನು ಘೋಷಿಸಿದೆ.

ಮಂಗಳೂರು, ಬೆಂಗಳೂರು ಸೇರಿದಂತೆ ದೇಶದ 19 ನಗರಗಳಲ್ಲಿ ಉಬರ್‌ ಮೂಲಕ ವೃದ್ಧರು ಮತ್ತು ದುರ್ಬಲರು ಸಮೀಪದ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆಗಳನ್ನು ಪಡೆಯಬಹುದು. 

ಇದು ಸಂಪೂರ್ಣವಾಗಿ ಉಚಿತವಾಗಿರುತ್ತದೆ. ಸಹಾಯವಾಣಿ ಸಂಖ್ಯೆ 1800-180-1253 ಮೂಲಕ ಉಚಿತ ರೈಡ್‌ ಬುಕ್‌ ಮಾಡಬಹುದು ಎಂದು ಉಬರ್‌ ಪ್ರಕಟಣೆ ತಿಳಿಸಿದೆ.

ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಸಭೆ; ಆಕ್ಸಿಜನ್, ಲಸಿಕೆ ಕೊರತೆ ಸೇರಿ ಸಮಸ್ಯೆಗೆ ಮೋದಿ ಸೂತ್ರ! .

ಈಗಾಗಲೇ ದೇಶದಲ್ಲಿ ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲಿದೆ. ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಈಗಾಗಲೇ 45 ವರ್ಷ ಮೇಲಿನವರಿಗೆ ಉಚಿತ ಲಸಿಕಾ ಅಭಿಯಾನ ನಡೆಯುತ್ತಿದೆ. ಮೇ.1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಲಾಗುತ್ತಿದೆ. 

ನೆಟ್ಟಿಗರ ಮನಗೆದ್ದ ಮ್ಯಾಜಿಕ್ ಕ್ಯಾಬ್... ಅಂಥಾ ವಿಶೇಷತೆ ಇದರಲ್ಲಿ ಏನಿದೆ?

ರಾಜ್ಯ ಸರ್ಕಾರ ಕೊರೋನಾ ತಡೆಯುವ ನಿಟ್ಟಿನಲ್ಲಿ ಲಸಿಕಾ ಕಾರ್ಯ ಚುರುಕುಗೊಳಿಸಲು ಸಾಕಷ್ಟು ಪ್ರಯತ್ನ ನಡೆಸುತ್ತಿದೆ. 

Latest Videos
Follow Us:
Download App:
  • android
  • ios