ಬದುಕಿದ್ದವರಿಗೆ ಚಿಕಿತ್ಸೆ ಚಿಂತೆ, ಸತ್ತವರಿಗೆ ಚಿತಾಗಾರದ ಚಿಂತೆ, 2 ನೇ ಅಲೆಯ ಭೀಕರತೆ ಇದು!

ಕೋವಿಡ್ 2 ನೇ ಅತ್ಯಂತ ಭಯಾನಕ ಹಾಗೂ ಭೀಕರವಾಗಿದೆ. ಸೋಂಕು ವೇಗವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆ ತಂದರೆ ಆಕ್ಸಿಜನ್ ಇಲ್ಲದೇ, ಬೆಡ್ ಸಿಗದೇ, ಚಿಕಿತ್ಸೆ ಸಿಗದೇ ಅಲ್ಲಲ್ಲಿಯೇ ಸಾವನ್ನಪ್ಪುತ್ತಿರುವ ದೃಶ್ಯ ಮನ ಕಲಕುತ್ತದೆ. 

First Published Apr 23, 2021, 4:15 PM IST | Last Updated Apr 23, 2021, 4:15 PM IST

ಬೆಂಗಳೂರು (ಏ. 23): ಕೋವಿಡ್ 2 ನೇ ಅತ್ಯಂತ ಭಯಾನಕ ಹಾಗೂ ಭೀಕರವಾಗಿದೆ. ಸೋಂಕು ವೇಗವಾಗಿ ಹರಡುತ್ತಿದ್ದು, ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಸೋಂಕಿತರನ್ನು ಆಸ್ಪತ್ರೆಗೆ ಕರೆ ತಂದರೆ ಆಕ್ಸಿಜನ್ ಇಲ್ಲದೇ, ಬೆಡ್ ಸಿಗದೇ, ಚಿಕಿತ್ಸೆ ಸಿಗದೇ ಅಲ್ಲಲ್ಲಿಯೇ ಸಾವನ್ನಪ್ಪುತ್ತಿರುವ ದೃಶ್ಯ ಮನ ಕಲಕುತ್ತದೆ. ಯಾವಾಗ ಇದೆಕ್ಕೆಲ್ಲಾ ಮುಕ್ತಿ ಸಿಗುತ್ತೆ ಎಂದು ಪ್ರಾರ್ಥಿಸುವಂತಾಗುತ್ತದೆ. ತಂದೆಯನ್ನು ಕಳೆದುಕೊಂಡ ಮಗಳು, ಕಂದಮ್ಮನನ್ನು ಕಳೆದುಕೊಂಡ ತಾಯಿ, ಪತಿಯನ್ನು ಕಳೆದುಕೊಂಡ ಪತ್ನಿ... ಹೀಗೆ ಒಬ್ಬೊಬ್ಬರದ್ದು ಒಂದೊಂದು ಗೋಳು... ಇದ್ದವರಿಗೆ ಚಿಕಿತ್ಸೆ ಚಿಂತೆಯಾದರೆ, ಸತ್ತವರಿಗೆ ಸುಡುಗಾಡಿನ ಚಿಂತೆ ಅನ್ನುವ ಹಾಗಾಗಿದೆ.