ಬ್ಯಾಗ್ ಕಳ್ಳತನ ಮಾಡಿದ್ದ ಕಳ್ಳನಿಗೆ ಜ್ಞಾನೋದಯ/ ಕೊರೋನಾ  ಲಸಿಕೆ ಇದೆ ಎಂದು ಮನಗಂಡು ಪೊಲೀಸ್ ಠಾಣೆಗೆ ವಾಪಸ್/ ಠಾಣೆ ಹೊರಗಿನ ಟೀ ಶಾಪ್ ಗೆ ಕೊಟ್ಟು ನಡೆದ/ಕೊರೋನಾ  ಮತ್ತು ಕಳ್ಳತನ

ಹರ್ಯಾಣ(ಏ. 22) ಹರ್ಯಾಣದಿಂದ ವಿಚಿತ್ರ ಪ್ರಕರಣವೊಂದು ವರದಿಯಾಗಿದೆ. ಹರಿಯಾಣದ ಜಿಂದ್‌ನಲ್ಲಿ 1,700 ಡೋಸ್ ಕೊರೋನಾ ಲಸಿಕೆ ಕದ್ದು ಪರಾರಿಯಾಗಿದ್ದವ ಬ್ಯಾಗ್ ಹಿಂದಕ್ಕೆ ತಂದುಕೊಟ್ಟಿದ್ದಾನೆ.

ಚೀಲ ಹಿಂದಕ್ಕೆ ಕೊಟ್ಟಿದ್ದು ಅಲ್ಲದೆ ಕ್ಷಮೆ ಕೇಳಿ ಚೀಟಿಯೊಂದನ್ನು ಬರೆದಿದ್ದಾನೆ. "ಕ್ಷಮಿಸಿ, ಇದು ಕರೋನಾಗೆ ಔಷಧಿಗಳೆಂದು ನನಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾನೆ.

ಮನೆ ಮುಂದೆ ಕಾರು ನಿಲ್ಲಿಸುವ ಬೆಂಗಳೂರಿಗರೇ ಎಚ್ಚರ!

ಜಿಂದ್ ಜನರಲ್ ಆಸ್ಪತ್ರೆಯಿಂದ ಕಳ್ಳ ಚೀಲ ಕಳ್ಳತನ ಮಾಡಿದ್ದ.ಪೊಲೀಸರು ಆರೋಪಿಯ ಹುಡುಕಾಟವನ್ನು ಶುರು ಮಾಡಿದ್ದರು. ಗುರುವಾರ ಮಧ್ಯಾಹ್ನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಹೊರಗಿನ ಟೀ ಶಾಪ್ ಗೆ ಮೆಡಿಸಿನ್ ಇದ್ದ ಬ್ಯಾಗನ್ನು ಕಳ್ಳ ತಲುಪಿಸಿದ್ದಾನೆ. ಪೊಲೀಸರಿಗೆ ಇದು ಆಹಾರದ ಪೊಟ್ಟಣ ತಲುಪಿಸಿ ಎಂದು ಕೊಟ್ಟು ಹೋಗಿದ್ದಾನೆ.

ಹರ್ಯಾಣದಲ್ಲಿಯೂ ಕೊರೋನಾ ಅಬ್ಬರ ಮುಂದುವರಿದಿದ್ದು ಎಲ್ಲ ಅಂಗಡಿಗಳನ್ನು ಸಂಜೆ ಆರಕ್ಕೆ ಕ್ಲೋಸ್ ಮಾಡಲು ಸೂಚಿಸಲಾಗಿದೆ. ಕರ್ನಾಟಕದಲ್ಲಿಯೂ ಕಟ್ಟುನಿಟ್ಟಿನ ಕ್ರಮ ತೆಗೆದುಕೊಂಡಿದ್ದು ವಾಣಿಜ್ಯ ಚಟುವಟಿಕೆಗಳಿಗೆ ಬ್ರೇಕ್ ಹಾಕಲಾಗಿದೆ. 

Scroll to load tweet…