ಕೊರೋನಾ ತಡೆಯುವ ನಿಟ್ಟಿನಲ್ಲಿ ಮಹಾರಾಷ್ಟ್ರ ಸರ್ಕಾರವು ಕರ್ಫ್ಯೂ ವಿಧಿಸಿದ್ದು, ಇದು ಚಲನಚಿತ್ರ ಶೂಟಿಂಗ್‌ಗಳನ್ನು ಸ್ಥಗಿತಗೊಳಿಸಿದೆ. ತನ್ನ ವಾಹನಗಳನ್ನು ಯಾವುದೇ ಉಪಯೋಗವಿಲ್ಲದೆ ನಿಲ್ಲಿಸಿದ್ದರಿಂದ, ವ್ಯಾನಿಟಿ ವ್ಯಾನ್ ಮಾಲೀಕ ಕೇತನ್ ರಾವಲ್ ಅವರು ಕೋವಿಡ್ -19 ಕರ್ತವ್ಯದಲ್ಲಿ ಮುಂಬೈ ಪೊಲೀಸರ ಬಳಕೆಗಾಗಿ ತಮ್ಮ ವ್ಯಾನ್‌ಗಳನ್ನು ನೀಡಿದ್ದಾರೆ.

ಪ್ರಸ್ತುತ ಅರ್ಧ ಡಜನ್ ವ್ಯಾನಿಟಿ ವ್ಯಾನ್‌ಗಳು ಫ್ರಂಟ್‌ಲೈನ್ ಪೊಲೀಸರ ಸೇವೆಯಲ್ಲಿವೆ. ರಣವೀರ್ ಸಿಂಗ್ ಅವರ ಸರ್ಕಸ್, ಆಲಿಯಾ ಭಟ್ ಅವರ ಗಂಗುಬಾಯಿ ಕಥಿಯಾವಾಡಿ ಮತ್ತು ಅಕ್ಷಯ್ ಕುಮಾರ್ ಅವರ ರಕ್ಷಾ ಬಂಧನ್ ಚಿತ್ರಗಳ ಸೆಟ್ಗಳಲ್ಲಿ ಬಳಸಿದ ವ್ಯಾನ್ಗಳನ್ನು ನೀಡಲಾಗಿದೆ.

ಎದೆ ಸೀಳು ತೋರಿಸಿದ ನಟಿ: 'ನೀವ್ ಟ್ರೋಲ್ ಮಾಡಿದ್ರೆ ನಾನ್ ವಿಡಿಯೋ ತೆಗೀತೀನಿ ಅನ್ಕೊಂಡ್ರಾ'?

ನಾನು ರೋಹಿತ್ ಶೆಟ್ಟಿಯ ಸರ್ಕಸ್, ಸಂಜಯ್ ಲೀಲಾ ಭನ್ಸಾಲಿ ಅವರ ಗಂಗುಬಾಯಿ ಕಥಿಯಾವಾಡಿ ಮತ್ತು ಆನಂದ್ ಎಲ್ ರಾಯ್ ಅವರ ರಕ್ಷಾ ಬಂಧನ್ ನಿಂದ ವ್ಯಾನ್ಗಳನ್ನು ಮುಂಬೈ ಪೊಲೀಸರ ಸೇವೆಗಾಗಿ ನೀಡಿದ್ದೇನೆ ಎಂದು ಹೇಳಿದ್ದಾರೆ. ಮುಂಬೈ ಪೊಲೀಸರ ಸೇವೆಗಾಗಿ ಹೆಚ್ಚಿನ ಸಂಖ್ಯೆಯ ವ್ಯಾನಿಟಿ ವ್ಯಾನ್‌ಗಳನ್ನು ನೀಡಿದ್ದೇನೆ. ಅವರು ಮುಂಚೂಣಿ ಕೆಲಸಗಾರರು. ಕಳೆದ ವರ್ಷ ನಾವು ಅದನ್ನು ಕ್ಷೇತ್ರ ಕರ್ತವ್ಯದಲ್ಲಿರುವ ಮತ್ತು ವಿಶ್ರಾಂತಿ ಪಡೆಯಬೇಕಾದ ಮಹಿಳಾ ಅಧಿಕಾರಿಗಳಿಗೆ ನೀಡಿದ್ದೆವು ಎಂದಿದ್ದಾರೆ.

ಕೊರೋನಾದಿಂದಾಗಿ ಕೆಲಸದಿಂದ ಹೊರಗುಳಿದಿರುವ ಕಲಾವಿದರಿಗೆ ಪಡಿತರ ಮತ್ತು ಇತರ ಸಹಾಯವನ್ನೂ ಇವರು ನೀಡುತ್ತಿದ್ದಾರೆ. ಕೋವಿಡ್ -19 ಎರಡನೇ ಅಲೆಯಲ್ಲಿ ಹೆಚ್ಚು ಅಪಾಯ ಎದುರಿಸಿದ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಸೇರಿದೆ. ಕೆಲವು ಸೆಲೆಬ್ರಿಟಿಗಳು ಅಭಿಮಾನಿಗಳಿಗೆ ಮನೆಯಲ್ಲಿಯೇ ಇರಬೇಕೆಂದು ಕೇಳಿಕೊಂಡಿದ್ದಾರೆ. ಅಗತ್ಯವಿರುವವರಿಗೆ ಸಹಾಯ ಮಾಡಲು ಪ್ರಿಯಾಂಕಾ ಚೋಪ್ರಾ, ಸೋನಮ್ ಕಪೂರ್ ಮತ್ತು ಶ್ರದ್ಧಾ ಕಪೂರ್ ಸೇರಿ ಹಲವರು ಮುಂದೆ ಬಂದಿದ್ದಾರೆ.