ಮೇ.31ರಿಂದ ದೆಹಲಿ ಅನ್‌ಲಾಕ್, ವೈಬ್ರೇಟ್‌ಗೆ ಸನ್ನಿ ಅಡಿಕ್ಟ್; ಮೇ.28ರ ಟಾಪ್ 10 ಸುದ್ದಿ!
12-18 ವರ್ಷದವರಿಗೂ ದೇಶೀ ಕೋವಿಡ್ ಲಸಿಕೆ ಸುರಕ್ಷಿತ ಅನ್ನೋ ಮಾಹಿತಿ ಹೊರಬಿದ್ದಿದೆ. ಪಾಸಿಟೀವ್ ರೇಟ್ ಶೇ.1.5ಕ್ಕೆ ಇಳಿಕೆಯಾಗಿರುವ ಕಾರಣ ದೆಹಲಿಯಲ್ಲಿ ಮೇ.31ರಿಂದ ಅನ್‌ಲಾಕ್ ಆರಂಭಗೊಳ್ಳಲಿದೆ. ತಿಂಗಳಲ್ಲಿ 14ನೇ ಬಾರಿ ತೈಲ ದರ ಏರಿಕೆಯಾಗಿದೆ. ಸನ್ನಿ ಲಿಯೋನ್ ರಹಸ್ಯ ಬಯಲು, ವೀರ ಸಾವರ್ಕರ್ ಸ್ಮರಿಸಿದ ಪ್ರಧಾನಿ ಮೋದಿ ಸೇರಿದಂತೆ ಮೇ.28ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
12-18 ವರ್ಷದವರಿಗೂ ದೇಶೀ ಕೋವಿಡ್ ಲಸಿಕೆ ಸುರಕ್ಷಿತ...
ಗುಜರಾತ್‌ನ ಅಹಮದಾಬಾದ್ ಮೂಲದ ಝೈಡಸ್ ಕ್ಯಾಡಿಲಾದ ಕೋವಿಡ್ ಲಸಿಕೆ 12 ವರ್ಷ ಮಕ್ಕಳೂ ಸೇರಿದಂತೆ ಎಲ್ಲರಿಗೂ ಸುರಕ್ಷಿತ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಶಾರ್ವಿಲ್ ಪಟೇಲ್ ತಿಳಿಸಿದ್ದಾರೆ.
ಗ್ಯಾಂಗ್ ರೇಪ್: ಬಾಂಗ್ಲಾದೇಶದಿಂದ ಅಕ್ರಮ ವಲಸೆ, ಬೆಂಗ್ಳೂರಲ್ಲಿ ಆಧಾರ್ ಕಾರ್ಡ್ ಪಡೆದಿದ್ದ ಕಾಮುಕ...
ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಮಹಜರ್‌ಗೆ ಕರೆದೊಯ್ದ ವೇಳೆ ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ಘಟನೆ ನಿನ್ನೆ(ಗುರುವಾರ) ನಗರದ ಕೆ. ಚನ್ನಸಂದ್ರದ ಕನಕನಗರದಲ್ಲಿ ನಡೆದಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್ ಮಲ್ವಿನ್ ಹಾಗೂ ಸಬ್‌ಇನ್ಸ್‌ಪೆಕ್ಟರ್ ಅರವಿಂದ್ ಅವರು ಫೈರಿಂಗ್ ಮಾಡಿದ್ದಾರೆ.
ಕುಸ್ತಿಪಟು ಸುಶೀಲ್ ಕುಮಾರ್ ನಡೆಸಿದ್ದ ಹಲ್ಲೆಯ ಫೋಟೋಗಳು ವೈರಲ್..!...
ಕುಸ್ತಿಪಟು ಸಾಗರ್ ರಾಣಾ ಸಾವಿನ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ದಿಗ್ಗಜ ಕುಸ್ತಿಪಟು ಸುಶೀಲ್ ಕುಮಾರ್‌ಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಯುವ ಕುಸ್ತಿಪಟು ಸಾಗರ್ ರಾಣಾ ಅವರಿಗೆ ಸುಶೀಲ್ ಹಲ್ಲೆ ನಡೆಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ
ಪಾಸಿಟೀವ್ ರೇಟ್ ಶೇ.1.5ಕ್ಕೆ ಇಳಿಕೆ; ದೆಹಲಿಯಲ್ಲಿ ಮೇ.31ರಿಂದ ಅನ್‌ಲಾಕ್ ಆರಂಭ!...
ದೇಶದಲ್ಲಿನ ಕೊರೋನಾ ಪ್ರಕರಣ ಸಂಖ್ಯೆ ಇಳಿಕೆಯಾಗುತ್ತಿದೆ. ಇದರಲ್ಲಿ ಪ್ರಮುಖವಾಗಿ ದೆಹಲಿಯಲ್ಲಿ ಇದೀಗ ಕೊರೋನಾ ನಿಯಂತ್ರಣಕ್ಕೆ ಬಂದಿದೆ. ದೆಹಲಿಯಲ್ಲಿ ಕೊರೋನಾ ಪಾಸಿಟೀವ್ ರೇಟ್ ಶೇಕಡಾ 1.5ಕ್ಕೆ ಇಳಿಕೆಯಾಗಿದೆ. ಇದರ ಬೆನ್ನಲ್ಲೇ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ದೆಹಲಿಯಲ್ಲಿ ಮೇ.31ರಿಂದ ಅನ್‌ಲಾಕ್ ಪ್ರಕ್ರಿಯೆ ಆರಂಭವಾಗಲಿದೆ ಎಂದು ಘೋಷಿಸಿದ್ದಾರೆ.
ಟೆಸ್ಟ್ ಚಾಂಪಿಯನ್‌ಶಿಪ್ ಡ್ರಾ/ ಟೈ ಆದ್ರೆ ಏನಾಗುತ್ತೆ? ಕುತೂಹಲಕ್ಕೆ ತೆರೆ ಎಳೆದ ಐಸಿಸಿ...
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಐಸಿಸಿ ಟೆಸ್ಟ್ ಚಾಂಪಿಯನ್ ಫೈನಲ್ ಪಂದ್ಯದ ನಿಯಮ ಹಾಗೂ ಷರತ್ತುಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಗುರುವಾರ(ಮೇ.28) ಘೋಷಿಸಿದೆ. ಈ ಮೂಲಕ ಹಲವು ಗೊಂದಲ ಹಾಗೂ ಅನುಮಾನಗಳಿಗೆ ಐಸಿಸಿ ತೆರೆ ಎಳೆಯುವ ಪ್ರಯತ್ನ ಮಾಡಿದೆ
ಸನ್ನಿ ಲಿಯೋನ್ ರಹಸ್ಯ ಬಯಲು: ಈ ವೈಬ್ರೇಟರ್‌ಗೆ ಆಡಿಕ್ಟ್ ಆಗಿದ್ದಾರಂತೆ ನಟಿ!...
ಬಾಲಿವುಡ್ ಸುಂದರಿ ಸನ್ನಿ ಲಿಯೋನ್ ಯಾರಿಗೆ ತಾನೆ ಗೊತ್ತಿಲ್ಲ ಹೇಳಿ? ಪಡ್ಡೆ ಹುಡುಗರ ನಿದ್ದೆಗೆಡಿಸಿದ್ದಾರೆ ಈ ಚೆಲುವೆ. ಇವರಿಗೆ ಸಂಬಂಧಿಸಿದ ವಿಷಯಗಳು ವೈರಲ್ ಆಗುತ್ತಲೇ ಇರುತ್ತವೆ. ಸನ್ನಿ ಒಂದು ರಹಸ್ಯವನ್ನು ಬಹಿರಂಗ ಪಡಿಸಿದ್ದಾರೆ. ಒಂದು ಗ್ಯಾಜೆಟ್ ಆಡಿಕ್ಟ್ ಆಗಿದ್ದಾರಂತೆ.
ತಿಂಗಳಲ್ಲಿ 14ನೇ ಬಾರಿ ತೈಲ ದರ ಏರಿಕೆ : ಪೆಟ್ರೋಲ್ 100 ರು....
ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ 24 ಪೈಸೆ ಮತ್ತು 29 ಪೈಸೆ ಏರಿಕೆ ಮಾಡಿವೆ.
ಸಂಕಷ್ಟದಲ್ಲಿ ಗ್ರಾಹಕರ ನೆರವಿಗೆ ಸ್ಕೋಡಾ; ಸರ್ವೀಸ್, ವಾರೆಂಟಿ ಜುಲೈ 31ರ ವರೆಗೆ ವಿಸ್ತರಣೆ!...
ಕೊರೋನಾ ವೈರಸ್ ಕಾರಣ ಭಾರತದ ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. ಹೀಗಾಗಿ ಅಗತ್ಯ ಹಾಗೂ ತುರ್ತು ಸೇವೆ ಹೊರತು ಪಡಿಸಿದರೆ ಇತರೆ ಕಾರಣಕ್ಕೆ ಹೊರಗೆ ಹೋಗುವಂತಿಲ್ಲ. ಹೀಗಾಗಿ ವಾಹನಗಳು ಪಾರ್ಕಿಂಗ್‌ನಿಂದ ತೆಗೆಯುವಂತಿಲ್ಲ. ಕೊರೋನಾ ಕಾರಣ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಸ್ಕೋಡಾ ಇಂಡಿಯಾ ನೆರವಾಗಿದೆ. ಸ್ಕೋಡಾ ತನ್ನ ಹಲವು ಸರ್ವೀಸ್ ಸಂಬಂಧಿತ ಸೇವೆಗಳನ್ನು ವಿಸ್ತರಿಸಿದೆ
ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್ ಸ್ಮರಿಸಿದ ಪ್ರಧಾನಿ ಮೋದಿ...
ಸ್ವಾತಂತ್ರ್ಯ ಸೇನಾನಿ, ಬರಹಗಾರ, ಕವಿ, ರಾಷ್ಟ್ರೀಯವಾದಿ, ದಾರ್ಶನಿಕ ವೀರ್ ಸಾವರ್ಕರ್ ಅವರಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದ್ದಾರೆ.
ಕೊರೋನಾ ಹೆಚ್ಚಳ ಬಗ್ಗೆ ಸಚಿವ ಆತಂಕ: ಖುದ್ದು ತುಮಕೂರಿಗೆ ಸಿಎಂ ಭೇಟಿ...
ಜಿಲ್ಲೆಯಲ್ಲಿ ಕೊರೋನಾ ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಖುದ್ದು ಭೇಟಿ ನೀಡಿದರು. ಕೊರೋನಾ ಹೆಚ್ಚಳದ ಸಚಿವ ಮಾಧುಸ್ವಾಮಿ ಮಾಹಿತಿ ಮೇರೆಗೆ ಸಿಎಂ ಬಿಎಸ್‌ವೈ ಇಂದು (ಶುಕ್ರವಾರ) ತುಮಕೂರಿಗೆ ಭೇಟಿ ನೀಡಿ ಪರಿಶೀಲನಾ ಸಭೆ ನಡೆಸಿದರು.