ಸ್ವಾತಂತ್ರ್ಯ ಸೇನಾನಿ ವೀರ ಸಾವರ್ಕರ್‌ ಸ್ಮರಿಸಿದ ಪ್ರಧಾನಿ ಮೋದಿ

* ಸ್ವಾತಂತ್ರ್ಯ ವೀರ ಸಾವರ್ಕರ್ ಗೆ ಪ್ರಧಾನಿ ನಮನ
* ರಾಷ್ಟ್ರೀಯವಾದಿ, ದಾರ್ಶನಿಕ ವೀರ್ ಸಾವರ್ಕರ್
* ಕವಿ, ಬರಹಗಾರರಾಗಿ   ಹೆಸರು ಮಾಡಿದ್ದವರು
* ದೇಶಪ್ರೇಮದ ಜ್ಯೋತಿ ಬೆಳಗಿದವರು

PM Modi pays tributes to Veer Savarkar on his birth anniversary mah

ನವದೆಹಲಿ(ಮೇ 28)  ಸ್ವಾತಂತ್ರ್ಯ ಸೇನಾನಿ, ಬರಹಗಾರ, ಕವಿ, ರಾಷ್ಟ್ರೀಯವಾದಿ, ದಾರ್ಶನಿಕ ವೀರ ಸಾವರ್ಕರ್ ಅವರಿಗೆ ಪ್ರಧಾನಿ ಮೋದಿ ನಮನ ಸಲ್ಲಿಸಿದ್ದಾರೆ.

ಸ್ವಾತಂತ್ರ್ಯ ಹೋರಾಟದ ಮಹಾನ್ ಸೇನಾನಿ, ರಾಷ್ಟ್ರಭಕ್ತ ಸಾವರ್ಕರ್ ಅವರಿಗೆ ನಮನ ಸಲ್ಲಿಸುತ್ತಿದ್ದೇನೆ ಎಂದು ಪ್ರಧಾನಿ ತಿಳಿಸಿದ್ದಾರೆ.  ಪ್ರತಿಯೊಬ್ಬ ರಾಷ್ಟ್ರೀಯವಾದಿಗಳ ಹೃದಯ ಮತ್ತು ಮನಸ್ಸಿನಲ್ಲಿ ವೀರ ಸಾವರ್ಕರ್ ಸ್ಥಾನ ಪಡೆದಿದ್ದಾರೆ ಎಂದಿದ್ದಾರೆ.

ಪರ-ವಿರೋಧ ಎಲ್ಲವೂ ಇದೆ, ಸಾವರ್ಕರ್  ಬಗ್ಗೆ ತಿಳಿಯಬೇಕಾದದ್ದು

ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ನಮನ ಸಲ್ಲಿಸಿದ್ದಾರೆ.  ಸಾವರ್ಕರ್ 1883 ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದರು. ನಾಸಿಕ್  ಜಿಲ್ಲೆಯಲ್ಲಿ ಹುಟ್ಟಿದ  ವಿ.ಡಿ.ಸಾವರ್ಕರ್ ಸ್ವಾತಂತ್ರ್ಯವೀರ ಸಾವರ್ಕರ್ ಅಥವಾ ಸಾವರ್ಕರ್ ಎಂದೇ ಭಾರತದಾದ್ಯಂತ ಜನಪ್ರಿಯ.  

ಹಿಂದೂ ಮಹಾಸಭಾವನ್ನು ಮುನ್ನಡೆಸಿಕೊಂಡು ಹೋಗಿ ಹಿಂದುತ್ವವನ್ನು ಜನಪ್ರಿಯಗೊಳಿಸಿದರು. 1966ರ ಫೆಬ್ರವರಿ 26ರಂದು ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು. ಸಾವರ್ಕಕರ್  ಕವಿ ಮತ್ತು ಬರಹಗಾರರಾಗಿಯೂ ಹೆಸರು ಪಡೆದುಕೊಂಡಿದ್ದಾರೆ. 

 

 

 

Latest Videos
Follow Us:
Download App:
  • android
  • ios