ಸಂಕಷ್ಟದಲ್ಲಿ ಗ್ರಾಹಕರ ನೆರವಿಗೆ ಸ್ಕೋಡಾ; ಸರ್ವೀಸ್, ವಾರೆಂಟಿ ಜುಲೈ 31ರ ವರೆಗೆ ವಿಸ್ತರಣೆ!
- ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್ ವಿಸ್ತರಣೆ
- ಕೊರೋನಾ ಕಾರಣ ಗ್ರಾಹಕರ ನೆರವಿಗೆ ನಿಂತ ಸ್ಕೋಡಾ ಇಂಡಿಯಾ
- ವಾರೆಂಟಿ, ಸರ್ವೀಸ್ ಸೇರಿದಂತೆ ಹಲವು ಪ್ಲಾನ್ ವಿಸ್ತರಿಸಿದ ಸ್ಕೋಡಾ
ಬೆಂಗಳೂರು(ಮೇ.28): ಕೊರೋನಾ ವೈರಸ್ ಕಾರಣ ಭಾರತದ ಬಹುತೇಕ ರಾಜ್ಯಗಳಲ್ಲಿ ಲಾಕ್‌ಡೌನ್ ಹೇರಲಾಗಿದೆ. ಹೀಗಾಗಿ ಅಗತ್ಯ ಹಾಗೂ ತುರ್ತು ಸೇವೆ ಹೊರತು ಪಡಿಸಿದರೆ ಇತರೆ ಕಾರಣಕ್ಕೆ ಹೊರಗೆ ಹೋಗುವಂತಿಲ್ಲ. ಹೀಗಾಗಿ ವಾಹನಗಳು ಪಾರ್ಕಿಂಗ್‌ನಿಂದ ತೆಗೆಯುವಂತಿಲ್ಲ. ಕೊರೋನಾ ಕಾರಣ ಸಂಕಷ್ಟದಲ್ಲಿರುವ ಗ್ರಾಹಕರಿಗೆ ಸ್ಕೋಡಾ ಇಂಡಿಯಾ ನೆರವಾಗಿದೆ. ಸ್ಕೋಡಾ ತನ್ನ ಹಲವು ಸರ್ವೀಸ್ ಸಂಬಂಧಿತ ಸೇವೆಗಳನ್ನು ವಿಸ್ತರಿಸಿದೆ.
ಕ್ರೆಟಾ, ಸೆಲ್ಟೋಸ್ ಪ್ರತಿಸ್ಪರ್ಧಿ; ಬರುತ್ತಿದೆ ಸ್ಕೋಡಾ ಕುಶಾಕ್ SUV ಕಾರು!.
ಕೊರೋನಾ ಸಂಕಷ್ಟದ ಸಮಯದಲ್ಲಿ ಗ್ರಾಹಕರಿಗೆ ನಿರಂತರ ಬೆಂಬಲ ನೀಡುವ ಸಲುವಾಗಿ ಸ್ಕೋಡಾ ಇಂಡಿಯಾ ವಾರಂಟಿ, ನಿಗದಿತ ಮೇಂಟೆನೆನ್ಸ್ ಮತ್ತು ಸೂಪರ್ ಕೇರ್ ಮೇಂಟೆನೆನ್ಸ್ ಪ್ಲಾನ್‌ಗಳನ್ನು 2021 ಜುಲೈ 31 ರ ವರೆಗೆ ವಿಸ್ತರಿಸಲು ನಿರ್ಧರಿಸಿದೆ.
ರೋಡ್‌ಸೈಡ್ ನೆರವು ಯೋಜನೆಗಳನ್ನು ಸ್ಕೋಡಾ ಇಂಡಿಯಾ ವಿಸ್ತರಿಸಿದೆ. ಏಫ್ರಿಲ್ ಮತ್ತು ಮೇಯಲ್ಲಿ ಅವಧಿಗೆ ಕೊನೆಗೊಳ್ಳಲಿರುವ ಪ್ಲಾನ್‌ಗಳನ್ನುಇದೀಗ 2021 ಜೂನ್ 30 ರ ವರೆಗೆ ವಿಸ್ತರಣೆಯಾಗಲಿವೆ ಎಂದು ಸ್ಕೋಡಾ ಅಟೋ ಇಂಡಿಯಾ ಬ್ರಾಂಡ್ ನಿರ್ದೇಶಕ ಝಾಕ್ ಹಾಲಿಸ್ ಹೇಳಿದ್ದಾರೆ.