ತಿಂಗಳಲ್ಲಿ 14ನೇ ಬಾರಿ ತೈಲ ದರ ಏರಿಕೆ : ಪೆಟ್ರೋಲ್ 100 ರು.
- ಮೇ ತಿಂಗಳೊಂದರಲ್ಲೇ 14 ಬಾರಿ ತೈಲ ದರ ಏರಿಕೆ
- ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳಿಂದ ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ
- ರಾಜಸ್ಥಾನ ರಾಜಧಾನಿ ಜೈಪುರದಲ್ಲೂ ಪೆಟ್ರೋಲ್ 100ರ ಗಡಿ ದಾಟಿದೆ.
ನವದೆಹಲಿ (ಮೇ.28): ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಮತ್ತೆ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಕ್ರಮವಾಗಿ 24 ಪೈಸೆ ಮತ್ತು 29 ಪೈಸೆ ಏರಿಕೆ ಮಾಡಿವೆ.
ಈ ಮೂಲಕ ಮೇ ತಿಂಗಳೊಂದರಲ್ಲೇ 14 ಬಾರಿ ತೈಲ ದರ ಏರಿಕೆಯಾದಂತಾಗಿದೆ. ಇದರಿಂದಾಗಿ ಬೆಂಗಳೂರಿನಲ್ಲಿ ಪೆಟ್ರೋಲ್, ಡೀಸೆಲ್ ದರ ಕ್ರಮವಾಗಿ 96.55 ರು. ಮತ್ತು 89.39 ರು. ತಲುಪಿದೆ.
ಕೊರೋನಾ ಅಬ್ಬರದ ಮಧ್ಯೆ FDI ಏರಿಕೆ, ಈವರೆಗಿನ ಗರಿಷ್ಠ!
ಮಹಾರಾಷ್ಟ್ರದ ಥಾಣೆಯಲ್ಲಿ ಪೆಟ್ರೋಲ್ ಬೆಲೆ 100.06 ರು., ಡೀಸೆಲ್ ಬೆಲೆ 91.99ಕ್ಕೆ ತಲುಪಿದೆ. ಮುಂಬೈನಲ್ಲಿ 99.94ರು. ಗೆ ಏರಿಕೆಯಾಗಿದೆ.
ಇನ್ನು ರಾಜಸ್ಥಾನ ರಾಜಧಾನಿ ಜೈಪುರದಲ್ಲೂ ಪೆಟ್ರೋಲ್ 100ರ ಗಡಿ ದಾಟಿದೆ.