Asianet Suvarna News Asianet Suvarna News

ಕಾಂಗ್ರೆಸ್ ಪಕ್ಷಕ್ಕೆ ಆರ್ಥಿಕ ಮುಗ್ಗಟ್ಟು, ರಾಜ್ಯದ ಕೋವಿಡ್ ಕೇಸ್ ದುಪ್ಪಟ್ಟು;ಆ.14ರ ಟಾಪ್ 10 ಸುದ್ದಿ!

ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಕಾಂಗ್ರೆಸ್ ಇದೀಗ ನಾಯಕರಿಗೆ ರೈಲು ಬಳಸಲು ಸೂಚನೆ ನೀಡಿದೆ. ಆ.14ನ್ನು ವಿಭಜನೆ ಭಯಾನಕತೆಯ ಸ್ಮರಣಾ ದಿನವಾಗಿ ಆಚರಿಸಲಾಗುತ್ತದೆ ಎಂದು ಮೋದಿ ಘೋಷಿಸಿದ್ದಾರೆ. ಅತೃಪ್ತ ಶಾಸಕರ ಇಬ್ಬರಿಗೆ ಮಂತ್ರಿಗಿರಿ ನೀಡಲು ಬೊಮ್ಮಾಯಿ ನಿರ್ಧರಿಸಿದ್ದಾರೆ. ಇತ್ತ ರಾಜ್ಯದಲ್ಲಿ ಕೋವಿಡ್ ಕೇಸ್ ಹೆಚ್ಚಳಕ್ಕೆ ಟಫ್ ರೂಲ್ಸ್, ಒಟಿಟಿಯಲ್ಲಿ ಕೆಜಿಎಫ್ ಸೇರಿದಂತೆ ಆಗಸ್ಟ್ 14ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Congress financial crisis to Karnataka Coronavirus case top 10 News of August 15 ckm
Author
Bengaluru, First Published Aug 14, 2021, 5:13 PM IST

ಹೆಚ್ಚಾಯ್ತು ಪಕ್ಷದ ಖರ್ಚು: ವಿಮಾನ ಇಲ್ಲ, ಇನ್ನು ರೈಲಲ್ಲೇ ಹೋಗ್ರಪ್ಪ ಎಂದ ಕಾಂಗ್ರೆಸ್

Congress financial crisis to Karnataka Coronavirus case top 10 News of August 15 ckm

ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಕಾಂಗ್ರೆಸ್ ಈಗ ಮಿತವ್ಯಯ ಜಪ ಪಠಿಸುತ್ತಿದೆ. ವಾರ್ಷಿಕ 50 ಸಾವಿರ ರು.ಗಳನ್ನು ಪಕ್ಷಕ್ಕೆ ದೇಣಿಗೆ ನೀಡುವಂತೆ ಸೂಚನೆ ನೀಡಿದೆ. ಹಣಕಾಸಿನ ಮುಗ್ಗಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯದರ್ಶಿಗಳಿಂದ ಹಿಡಿದು ಪ್ರಧಾನ ಕಾರ್ಯದರ್ಶಿಗಳವರೆಗೆ ಎಲ್ಲರಿಗೂ ಮಿತವ್ಯಯ ಸೂತ್ರವನ್ನು ಪಕ್ಷ ಪ್ರಕಟಿಸಿದೆ. ಸಮೀಪದ ಸ್ಥಳಗಳಿಗೆ ರೈಲುಗಳಲ್ಲಿ ಪ್ರಯಾಣಿಸುವಂತೆ ಹಾಗೂ ಅದು ಸಾಧ್ಯವಾಗದೇ ಇದ್ದರೆ ಕಡಿಮೆ ದರದ ವಿಮಾನ ಟಿಕೆಟ್ ಗಳನ್ನು ಬಳಸುವಂತೆ ತಿಳಿಸಲಾಗಿದೆ.

ಆ.14 ವಿಭಜನೆ ಭಯಾನಕತೆಯ ಸ್ಮರಣಾ ದಿನವಾಗಿ ಆಚರಣೆ: ಮೋದಿ

Congress financial crisis to Karnataka Coronavirus case top 10 News of August 15 ckm

ಭಾನುವಾರ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದೆ. ಶನಿವಾರ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿಭಜನೆಯ ಭಯಾನಕತೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಆ.14ನ್ನು ವಿಭಜನೆ ಭಯಾನಕತೆಯ ಸ್ಮರಣಾ ದಿನವಾಗಿ ಆಚರಿಸಲಾಗುತ್ತದೆ ಎಂದಿದ್ದಾರೆ. ವಿಭಜನೆಯ ಸಂದರ್ಭ ಜನರ ತ್ಯಾಗಗಳು, ಕಷ್ಟಗಳು, ಹೋರಾಟಗಳ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ರಮೇಶ್ ಜಾರಕಿಹೊಳಿ ಹಾಗೂ ಮತ್ತೋರ್ವ ಶಾಸಕಗೆ ಶೀಘ್ರ ಮಂತ್ರಿಗಿರಿ

Congress financial crisis to Karnataka Coronavirus case top 10 News of August 15 ckm

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸಂಪುಟದಲ್ಲಿ ರಮೇಶ್‌ ಜಾರಕಿಹೊಳಿ ಹಾಗೂ ಶ್ರೀಮಂತ ಪಾಟೀಲ್‌ ಅವರಿಗೆ ಅತಿ ಶೀಘ್ರದಲ್ಲೇ ಸ್ಥಾನ ಸಿಗಲಿದೆ ಎಂದು ಅರಬಾವಿ ಶಾಸಕ ಹಾಗೂ ಕೆಎಂಎಫ್‌ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದರು.

ಇವರೇ ನೋಡಿ ಸಾರ್ವಕಾಲಿಕ ಟಾಪ್ 10 ದಿಗ್ಗಜ ಎಡಗೈ ಕ್ರಿಕೆಟಿಗರು..!

Congress financial crisis to Karnataka Coronavirus case top 10 News of August 15 ckm

ಆಗಸ್ಟ್‌ 13ರನ್ನು ವಿಶ್ವ ಎಡಚರ ದಿನವನ್ನಾಗಿಯೂ ಆಚರಿಸಲಾಗುತ್ತದೆ. ವಿಶ್ವ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ ಸಾರ್ವಕಾಲಿಕ ಟಾಪ್ 10 ದಿಗ್ಗಜ ಎಡಗೈ ಕ್ರಿಕೆಟಿಗರ ಕಿರುಪರಿಚಯವನ್ನು ಏಷ್ಯಾನೆಟ್‌ ಕನ್ನಡ.ಕಾಂ ನಿಮ್ಮ ಮುಂದಿಡುತ್ತಿದೆ ನೋಡಿ.

ಕೊರೋನಾ: ಓಟಿಟಿಯಲ್ಲಿ ಬಿಡುಗಡೆ ಆಗುತ್ತಾ ಕೆಜಿಎಫ್ ಚಾಪ್ಟರ್ 2?

Congress financial crisis to Karnataka Coronavirus case top 10 News of August 15 ckm

ಕಳೆದೆರಡು ವರ್ಷಗಳಿಂದ ಓಟಿಟಿಗಳ ಹವಾ ಹೆಚ್ಚಾಗಿದೆ. ಕೊರೋನಾದಿಂದ ಸ್ಟಾರ್ ಸಿನಿಮಾಗಳು ಕೂಡ ಓಟಿಟಿಯಲ್ಲಿ ಬಿಡುಗಡೆ ಮಾಡಿದ್ದಾರೆ. ಸದ್ಯ ಕೆಜಿಎಫ್ ಚಾಪ್ಟರ್ 2 ಬಿಡುಗಡೆಗೂ ಓಟಿಟಿಯಿಂದ ಭರ್ಜರಿ ಆಫರ್ ಬಂದಿದೆ ಎನ್ನಲಾಗಿದೆ. ಆದರೆ ಕೆಜಿಎಫ್ ಚಿತ್ರತಂಡ ಯಾವ ನಿರ್ಧಾರ ಕೈಗೊಂಡಿದೆ? ಈ ವಿಡಿಯೋ ನೋಡಿ.

ಜಿಯೋಫೋನ್ ನೆಕ್ಸ್ಟ್ ಫೋನ್ ಹೇಗಿದೆ? ಬೆಲೆ ಎಷ್ಟಿದೆ?

Congress financial crisis to Karnataka Coronavirus case top 10 News of August 15 ckm

ರಿಲಯನ್ಸ್ ಕಂಪನಿಯ ಬಹು ನಿರೀಕ್ಷೆಯ ಜಿಯೋಫೋನ್ ನೆಕ್ಸ್ಟ್ ಈ ಗಣೇಶ ಹಬ್ಬಕ್ಕೆ ಲಾಂಚ್ ಆಗಲಿದೆ. ಈ ವಿಷಯವನ್ನು ರಿಲಯನ್ಸ್ ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಈ ಹಿಂದೆಯೇ ಘೋಷಿಸಿದ್ದಾರೆ. ಇದೀಗ ಈ  ಫೋನ್‌ನ ವಿಶೇಷತೆಗಳು ಲೀಕ್ ಆಗಿದ್ದು, ಕುತೂಹಲ ಮೂಡಿದೆ.

ಅಂಚೆ ಇಲಾಖೆ ಈ ಯೋಜನೆಯಲ್ಲಿ ಹೂಡಿಕೆ ಮಾಡಿದ್ರೆ ಸಿಗಲಿದೆ ದುಪ್ಪಟ್ಟು ಹಣ!

Congress financial crisis to Karnataka Coronavirus case top 10 News of August 15 ckm

ಉಳಿತಾಯ ಮಾಡೋರಿಗೆ ಅಂಚೆ ಇಲಾಖೆ ಸುರಕ್ಷಿತ ತಾಣ ಎಂದೇ ಹೇಳಬಹುದು. ಹಾಗಾದ್ರೆ ಅಂಚೆ ಇಲಾಖೆಯ ಯಾವ ಯೋಜನೆಯಲ್ಲಿ ಹಣ ತೊಡಗಿಸಿದ್ರೆ ಉತ್ತಮ ರಿಟರ್ನ್ಸ್ ಬರುತ್ತೆ? ಇಲ್ಲಿದೆ ಮಾಹಿತಿ. 

240 ಕಿ.ಮೀ ಮೈಲೇಜ್, ಬೆಂಗಳೂರಿನ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್ ಆ.15ಕ್ಕೆ ಬಿಡುಗಡೆ!

Congress financial crisis to Karnataka Coronavirus case top 10 News of August 15 ckm

ಭಾರತದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಯಲ್ಲಿ ಸಂಚಲನ ಸೃಷ್ಟಿಯಾಗಿದೆ. ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಗ ಹಲವು ವಿಶೇಷತೆಗಳಿವೆ. ಇದರ ಜೊತೆಗೆ ದೇಶದಲ್ಲಿ ಎರಡು ಪ್ರಮುಖ ಹಾಗೂ ಭಾರಿ ಭರವಸೆ ಮೂಡಿಸಿರುವ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆಯಾಗಲಿದೆ. ಒಂದು ಓಲಾ ಎಲೆಕ್ಟ್ರಿಕ್ ಸ್ಕೂಟರ್, ಮತ್ತೊಂದು ಸಿಂಪಲ್ ಎನರ್ಜಿ ಸಂಸ್ಥೆ ಸಿಂಪಲ್ ಒನ್ ಎಲೆಕ್ಟ್ರಿಕ್ ಸ್ಕೂಟರ್.

ಪೊಲೀಸ್‌ ಹುದ್ದೆಗಾಗಿ 1.36 ನಿಮಿಷದಲ್ಲಿ 400 ಮೀ. ಓಡಿದ ಎರಡೂವರೆ ತಿಂಗಳ ಗರ್ಭಿಣಿ

Congress financial crisis to Karnataka Coronavirus case top 10 News of August 15 ckm

ಪಿಎಸ್‌ಐ ಕೆಲಸ ಗಿಟ್ಟಿಸಲೇಬೇಕೆಂಬ ಹಂಬಲದಿಂದ ಬೀದರ್‌ ಮೂಲದ ಎಂಜಿನಿಯರಿಂಗ್‌ ಪದವೀಧರೆ, ಎರಡೂವರೆ ತಿಂಗಳ ಗರ್ಭಿಣಿ ಅಶ್ವಿನಿ ಸಂತೋಷ್‌ ಕೋರೆ (24) ಓಟದ ಪರೀಕ್ಷೆಯಲ್ಲಿ 1.36 ನಿಮಿಷದಲ್ಲಿ 400 ಮೀಟರ್‌ ದೂರ ಕ್ರಮಿಸಿ ಗಮನ ಸೆಳೆದಿದ್ದಾರೆ.

3 ನೇ ಅಲೆ ಭೀತಿ: ಟಫ್ ರೂಲ್ಸ್ ಜಾರಿ ಸುಳಿವು ನೀಡಿದ ಸಿಎಂ ಬೊಮ್ಮಾಯಿ

Congress financial crisis to Karnataka Coronavirus case top 10 News of August 15 ckm

ರಾಜ್ಯದಲ್ಲಿ 3 ನೇ ಅಲೆ ಭೀತಿ ಶುರುವಾಗಿದೆ. ಮುಂಜಾಗ್ರತಾ ಕ್ರಮವಾಗಿ ಟಫ್ ರೂಲ್ಸ್ ಜಾರಿಗೆ ಸರ್ಕಾರ ಮುಂದಾಗಿದೆ. ಈ ಬಗ್ಗೆ ಸಿಎಂ ಬಸವರಾಜ ಬೊಮ್ಮಾಯಿ ಸುಳಿವು ನೀಡಿದ್ದಾರೆ. ಕೊರೋನಾ ಸ್ಫೋಟಗೊಳ್ಳುವ ಮುನ್ನ, ಸಾರ್ವಜನಿಕ ಹಿತದೃಷ್ಟಿಯಿಂದ ಟಫ್ ರೂಲ್ಸ್ ಜಾರಿ ಮಾಡುವುದಾಗಿ ಸಿಎಂ ಬೊಮ್ಮಾಯಿ ಹೇಳಿದ್ದಾರೆ. ಜೀವವೂ ಉಳಿಯಬೇಕು, ಜೀವನವೂ ನಡೆಯಬೇಕಾಗಿದೆ ಎಂದಿದ್ದಾರೆ. 

Follow Us:
Download App:
  • android
  • ios