ವಕ್ಫ್ ವಿರುದ್ಧ ಹೋರಾಟ ಮಾಡಲು ಹೋದವರಿಗೆ ಬಿಜೆಪಿಯಿಂದಲೇ ವಿರೋಧ!

ಬೀದರ್‌ನ ಧರ್ಮಾಪುರ ಗ್ರಾಮದಲ್ಲಿ ವಕ್ಫ್ ಮಂಡಳಿಯ ವಿರುದ್ಧ ಹೋರಾಟ ನಡೆಸುತ್ತಿದ್ದ ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದ ಹೋರಾಟಕ್ಕೆ ಸ್ಥಳೀಯ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಬೆಂಬಲಿಗರು ವಿರೋಧ ವ್ಯಕ್ತಪಡಿಸಿದ್ದಾರೆ.

BJP Activist clash in anti-Wakf protest led by MLA Basanagouda Patil Yatnal sat

ಬೀದರ್ (ನ.25): ರಾಜ್ಯದಲ್ಲಿ ವಕ್ಫ್ ಮಂಡಳಿಯಿಂದ ರೈತರ ಭೂಮಿಯ ದಾಖಲೆಗಳಲ್ಲಿ ವಕ್ಫ್ ಹೆಸರನ್ನು ಸೇರ್ಪಡೆ ಮಾಡಲಾಗಿತ್ತು. ಇದರ ಬೆನ್ನಲ್ಲಿಯೇ ಬಿಜೆಪಿ ಶಾಸಕ ಬಸವನಗೌಡ ಪಾಟೀಲ್ ಯತ್ನಾಳ್ ಅವರ ನೇತೃತ್ವದಲ್ಲಿ ವಿಜಯಪುರದಲ್ಲಿ ದೊಡ್ಡ ಮಟ್ಟದ ಅಹೋರಾತ್ರಿ ಧರಣಿ ನಡೆಸಲಾಯಿತು. ಇದರ ಬೆನ್ನಲ್ಲಿಯೇ ಇತ್ತೀಚೆಗೆ ಬಿಜೆಪಿಯಿಂದ ಬೆಂಗಳೂರಿನಲ್ಲಿ ಒಂದು ದಿನದ ಹೋರಾಟ ಮಾಡಲಾಯಿತು. ಇದೀಗ ವಕ್ಫ್ ಮಂಡಳಿಯ ವಿರುದ್ಧ ಬೀದರ್‌ನ ಧರ್ಮಾಪುರ ಗ್ರಾಮದಲ್ಲಿ ಹೋರಾಟ ಮಾಡುತ್ತಿದ್ದ ಬಿಜೆಪಿ ಕಾರ್ಯಕರ್ತರ ಮೇಲೆ ಕೈ-ಕೈ ಮಿಲಾಯಿಸಿ ಹೊರಗೆ ಕಳಿಸಿದ್ದಾರೆ.

ವಕ್ಫ್ ವಿರುದ್ಧ ಹೋರಾಟ ಮಾಡಿದವರು ಹಾಗೂ ವಿರೋಧ ಮಾಡಿದ ಎರಡೂ ಕಡೆಯವರು ಬಿಜೆಪಿ ಕಾರ್ಯಕರ್ತರೇ ಎಂಬುದು ಇಲ್ಲಿನ ಘಟನೆಯ ಸ್ವಾರಸ್ಯಕರ ಸಂಗತಿಯಾಗಿದೆ. ಇದೇನಿದು ಬಿಜೆಪಿ ಕಾರ್ಯಕರ್ತರ ವಕ್ಫ್ ವಿರುದ್ಧ ಹೋರಾಟಕ್ಕೆ ಬಿಜೆಪಿ ಕಾರ್ಯಕರ್ತರೇ ಅಡ್ಡಿಪಡಿಸುತ್ತಿದ್ದಾರೆ ಎಂಬುದು ನೋಡುಗರ ಆಶ್ಚರ್ಯಕ್ಕೆ ಕಾರಣವಾಗಿದೆ. ಆದರೆ, ಇಲ್ಲಿ ಬಿಜೆಪಿಯಲ್ಲಿ ಎರಡು ಬಣಗಳ ನಡುವಿನ ಆಂತರಿಕ ಕೆಸರೆರಚಾಟ ಇದೀಗ ವಕ್ಫ್ ವಿರುದ್ಧ ಹೋರಾಟದ ಮೇಲೆ ಕಪ್ಪು ಛಾಯೆ ಮೂಡುವಂತೆ ಮಾಡಿದೆ. ಇದು ಆಡಳಿತಾರೂಢ ಕಾಂಗ್ರೆಸ್ ಸರ್ಕಾರಕ್ಕೆ ಲಾಭವಾಗುವುದು ಖಚಿತವಾಗಿದೆ. ಈಗಾಗಲೇ ರಾಜ್ಯಾದ್ಯಂತ ವಕ್ಫ್ ವಿರುದ್ಧ ರೈತರು, ವಿಪಕ್ಷಗಳಿಂದ ಹೋರಾಟ ಮಾಡಿದ ಫಲವಾಗಿ ಸರ್ಕಾರದಿಂದ ವಕ್ಫ್ ಮಂಡಳಿಯಿಂದ ಯಾವುದೇ ನೋಟೀಸ್ ನೀಡದಂತೆ ಆದೇಶ ಹೊರಡಿಸಲಾಗಿದೆ. ಆದರೆ, ಈಗಾಗಲೇ ರೈತರ ಪಹಣಿಗಳಲ್ಲಿ ವಕ್ಫ್ ಆಸ್ತಿ ಎಂದು ನಮೂದು ಮಾಡಿದ್ದನ್ನು ತೆಗೆದು ಹಾಕುವಂತೆ ಹೋರಾಟ ಮಾಡಲಾಗುತ್ತಿದೆ.

ಬೀದರ್ ಜಿಲ್ಲೆಯ ಧರ್ಮಾಪುರ ಗ್ರಾಮದಲ್ಲಿ ಸ್ಥಳೀಯ ಶಾಸಕ ಡಾ. ಶೈಲೇಂದ್ರ ಬೆಲ್ದಾಳೆ ಬೆಂಬಲಿಗರು, ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಬೆಂಬಲಿಗರ ಮಧ್ಯ ಗಲಾಟೆ ನಡೆದಿದೆ. ವಕ್ಫ್ ವಿರುದ್ಧ ಬಿಜೆಪಿ ರೆಬೆಲ್ಸ್ ತಂಡದಿಂದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೃತೃತ್ವದಲ್ಲಿ ಶಿವಮೊಗ್ಗ ಕುಮಾರ ಬಂಗಾರಪ್ಪ ಸೇರಿದಂತೆ ಹಲವು ನಾಯಕರು ಬೆಳಗಾವಿಯಿಂದ ಬೀದರ್‌ವರೆಗೆ ಹೋರಾಟ ಮಾಡುತ್ತಿದ್ದಾರೆ. ಆದರೆ, ಧರ್ಮಾಪುರ ಗ್ರಾಮದಲ್ಲಿ ಸ್ಥಳೀಯ ಶಾಸಕ ಡಾ. ಶೈಲೇಂದ್ರ ಬೆಂಬಲಿಗರು ಈ ಹೋರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ವಕ್ಫ್ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ ಕಾರ್ಯಕರ್ತರು ಹಾಗೂ ಶಾಸಕ ಶೈಲೇಂದ್ರ ಬೆಲ್ದಾಳ ಅವರ ಬೆಂಬಲಿಗರು ಕೈ-ಕೈ ಮಿಲಾಯಿಸುವ ಹಂತಕ್ಕೆ ತಲುಪಿದ್ದಾರೆ.

ಇದನ್ನೂ ಓದಿ: ಹಳೆಯ ಮನೆ ರಿಪೇರಿ ಮಾಡುವ ಪ್ಲಂಬರ್‌ಗೆ ಸಿಕ್ತು ನಿಧಿ; ಕೆಜಿಗಟ್ಟಲೆ ಚಿನ್ನದ ನಾಣ್ಯ ಲಭ್ಯ!

ಇದರಿಂದ ವಕ್ಫ್ ವಿರುದ್ಧ ಬಿಜೆಪಿ ಕಾರ್ಯಕರ್ತರ ನಡುವೆಯೇ ಜಗಳ ಉಂಟಾಗಿದೆ. ಈ ವೇಳೆ ಡಾ. ಶೈಲೇಂದ್ರ ಅವರ ಕಾರ್ಯಕರ್ತರು, ಇಲ್ಲಿ ಶಾಸಕ ಯತ್ನಾಳ ಅವರು ವಕ್ಫ್ ವಿರುದ್ಧ ಹೋರಾಟ ಮಾಡುವುದಾಗಿ ಯಾರಿಗೂ ಮಾಹಿತಿ ನೀಡಿಲ್ಲ. ಇದು ಬಿಜೆಪಿ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬ ತಪ್ಪು ಮಾಹಿತಿ ರವಾನೆ ಆಗುತ್ತದೆ. ಸ್ಥಳೀಯ ಶಾಸಕರು, ಮುಖಂಡರು, ಕಾರ್ಯಕರ್ತರಿಗೆ ಯಾರಿಗೂ ಮಾಹಿತಿ ನೀಡದೇ ಹೋರಾಟ ಮಾಡಲಾಗುತ್ತಿದೆ ಎಂದು ಯತ್ನಾಳ ಹೋರಾಟಕ್ಕೆ ಬಿಜೆಪಿ ಕಾರ್ಯಕರ್ತರಿಂದಲೇ ಭಾರಿ ವಿರೋಧ ವ್ಯಕ್ತವಾಗಿದೆ. ಬೀದರ್ ತಾಲೂಕಿನ ಧರ್ಮಾಪುರ ಗ್ರಾಮದಲ್ಲಿ ಬಿಜೆಪಿ V/S ಬಿಜೆಪಿ ಗಲಾಟೆ ನಡೆದಿದೆ. ಜೊತೆಗೆ, ಯತ್ನಾಳ ವಿರುದ್ಧ ಸ್ಥಳೀಯ ಬಿಜೆಪಿ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಪ್ರಾಚ್ಯವಸ್ತು ಸಂಗ್ರಹಕ್ಕೆ ಭರ್ಜರಿ ರೆಸ್ಪಾನ್ಸ್, ಒಂದೇ ದಿನ ಲಕ್ಕುಂಡಿಯಲ್ಲಿ 1050 ಪುರಾತನ ವಸ್ತು ಪತ್ತೆ!

Latest Videos
Follow Us:
Download App:
  • android
  • ios