Asianet Suvarna News Asianet Suvarna News

ಜಿಯೋಫೋನ್ ನೆಕ್ಸ್ಟ್ ಫೋನ್ ಹೇಗಿದೆ? ಬೆಲೆ ಎಷ್ಟಿದೆ?

ರಿಲಯನ್ಸ್ ಕಂಪನಿಯ ಬಹು ನಿರೀಕ್ಷೆಯ ಜಿಯೋಫೋನ್ ನೆಕ್ಸ್ಟ್ ಈ ಗಣೇಶ ಹಬ್ಬಕ್ಕೆ ಲಾಂಚ್ ಆಗಲಿದೆ. ಈ ವಿಷಯವನ್ನು ರಿಲಯನ್ಸ್ ಕಂಪನಿಯ ಮುಖ್ಯಸ್ಥ ಮುಕೇಶ್ ಅಂಬಾನಿ ಈ ಹಿಂದೆಯೇ ಘೋಷಿಸಿದ್ದಾರೆ. ಇದೀಗ ಈ  ಫೋನ್‌ನ ವಿಶೇಷತೆಗಳು ಲೀಕ್ ಆಗಿದ್ದು, ಕುತೂಹಲ ಮೂಡಿದೆ.

JioPhone Next specification and other information leaked
Author
Bengaluru, First Published Aug 14, 2021, 12:45 PM IST

ಜಿಯೋ ಟೆಲಿಕಾಂ ನೆಟ್ವರ್ಕ್ ಮೂಲಕ ಭಾರತದಲ್ಲಿ ಕ್ರಾಂತಿಯನ್ನೇ ಸೃಷ್ಟಿಸಿರುವ ರಿಲಯನ್ಸ್ ಕಂಪನಿ ಅಗ್ಗದ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್ ಅನ್ನು ಗೂಗಲ್ ಜತೆಗೂಡಿ ಬಿಡುಗಡೆ ಮಾಡಲಿದೆ. ಆದರೆ, ಫೋನ್ ಹೇಗಿರಲಿದೆ? ಯಾವೆಲ್ಲ ಫೀಚರ್‌ಗಳಿವೆ ಎಂಬಿತ್ಯಾದಿ ಪ್ರಶ್ನೆಗಳಿದ್ದವು. 

ಈ ಪ್ರಶ್ನೆಗಳಿಗೆ ಉತ್ತರ ಸಿಗುವ ಸಮಯ ಬಂದಿದೆ. ಯಾಕೆಂದರೆ, ಗೂಗಲ್ ಜತೆಗೂಡಿ ರಿಲಯನ್ಸ್ ಉತ್ಪಾದಿಸಲಿರುವ ಜಿಯೋಫೋನ್ ನೆಕ್ಸ್ಟ್‌ ಎಂಟ್ರಿ ಲೇವಲ್ ಸ್ಮಾರ್ಟ್‌ಫೋನ್‌ ಬಗೆಗಿನ ಒಂದಿಷ್ಟು ಮಾಹಿತಿಗಳು ಸೋರಿಕೆಯಾಗಿವೆ. ಜೂನ್ ತಿಂಗಳಲ್ಲಿ ರಿಯಲನ್ಸ್ ಕಂಪನಿಯು ಗೂಗಲ್ ಜತೆಗೂಡಿ ಸ್ಮಾರ್ಟ್‌ಫೋನ್ ಉತ್ಪಾದಿಸುತ್ತಿರುವುದಾಗಿ ಘೋಷಿಸಿತ್ತು. ಈ ಫೋನ್ ಸೆಪ್ಟೆಂಬರ್ ತಿಂಗಳಲ್ಲಿ ಲಾಂಚ್ ಆಗುವ ಸಾಧ್ಯತೆ ಇದೆ.

ನೋಕಿಯಾ ಸಿ20 ಪ್ಲಸ್ ಲಾಂಚ್, ಒಮ್ಮೆ ಚಾರ್ಜ್ ಮಾಡಿದ್ರೆ 2 ದಿನ ಬರುತ್ತೆ!

ಆನ್‌ಲೈನ್‌ನಲ್ಲಿ ಸೋರಿಕೆಯಾಗಿರುವ ಮಾಹಿತಿ ಪ್ರಕಾರ, ಜಿಯೋಫೋನ್ ನೆಕ್ಸ್ಟ್ ಸ್ಮಾರ್ಟ್‌ಫೋನ್, ಆಂಡ್ರಾಯ್ಡ್ 11 ಒಎಸ್‌ನಿಂದ ರನ್ ಆಗಲಿದೆ. ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಸಿಂಗಲ್ ಕ್ಯಾಮೆರಾ ಇರಬಹುದು. ಎಚ್‌ಡಿ ಡಿಸ್‌ಪ್ಲೇ ಇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಈ ಫೋನ್ ಮಾಡೆಲ್ LS-5701-J ನಂಬರ್ ಹೊಂದಿದೆ. ಗೂಗಲ್‌ನ ಗೋ ಎಡಿಷನ್ ಆಂಡ್ರಾಯ್ಡ್ 11 ಒಎಸ್, 720x1,440 ಪಿಕ್ಸೆಲ್ ಪ್ರದರ್ಶಕ, ಕ್ವಾಲಕಾಂ QM215 ಎಸ್ಒಸಿ ಅನ್ನು ಈ ಸ್ಮಾರ್ಟ್‌ಫೋನ್ ಒಳಗೊಂಡಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

ಇದು 64-ಬಿಟ್, ಕ್ವಾಡ್ ಕೋರ್ ಮೊಬೈಲ್ ಪ್ರೊಸೆಸರ್ ಜೊತೆಗೆ ಕ್ವಾಲಕಾಮ್ ಅಡ್ರಿನೊ 308 ಜಿಪಿಯು ಹೊಂದಿದೆ. ಇದನ್ನು ಕಡಿಮೆ-ಮಟ್ಟದ ಸಾಧನಗಳಿಗಾಗಿ ವಿನ್ಯಾಸಗೊಳಿಸಲಾಗಿದೆ ಮತ್ತು ಅಂತರ್ನಿರ್ಮಿತ ಕ್ವಾಲಕಾಮ್ ಸ್ನಾಪ್‌ಡ್ರಾಗನ್ X5 LTE ಮೋಡೆಮ್‌, ಬ್ಲೂಟೂತ್ v4.2, GPS, 1080ಪಿ ವಿಡಿಯೋ ರೆಕಾರ್ಡಿಂಗ್, ಎಲ್‌ಡಿಪಿಆರ್ 3 ರ್ಯಾಮ್, ಮತ್ತು ಇಎಂಎಂಸಿ 4.5 ಸ್ಟೋರೇಜ್ ಹೊಂದಿರುವ ಸಾಧ್ಯತೆ ಇದೆ.

ಸದ್ದಿಲ್ಲದೇ ಲಾಂಚ್ ಆದ ವಿವೋ ವೈ12ಜಿ ಸ್ಮಾರ್ಟ್‌ಫೋನ್

ಇಷ್ಟೆಲ್ಲ ಫೀಚರ್‌ಗಳ ಜೊತೆಗೆ, ಜಿಯೋಫೋನ್‌ ನೆಕ್ಸ್ಟ್ ಹಿಂಬದಿಯಲ್ಲಿ ಒಂದೇ ಕ್ಯಾಮೆರಾ ಹೊಂದಿರಬಹುದು ಎನ್ನಲಾಗುತ್ತಿದೆ. ಸಾಮಾನ್ಯವಾಗಿ ಇತ್ತೀಚಿನ ಎಲ್ಲ ಸ್ಮಾರ್ಟ್‌ಫೋನ್‌ಗಳು ಕನಿಷ್ಠ ಎರಡು ಕ್ಯಾಮೆರಾಗಳಾದರೂ ಇರುತ್ತವೆ. ಆದರೆ, ಜಿಯೋಫೋನ್‌ನೆಕ್ಸ್ಟ್ ಸ್ಮಾರ್ಟ್‌ಫೋನ್‌ನಲ್ಲಿ 13 ಮೆಗಾ ಪಿಕ್ಸೆಲ್ ಸಿಂಗಲ್ ಕ್ಯಾಮೆರಾ ಹಿಂಬದಿಯಲ್ಲಿ ಇರಲಿದೆ. ಇನ್ನು ಸೆಲ್ಫಿ ಮತ್ತು ವಿಡಿಯೋ ಕಾಲ್‌ಗೆ ನೆರವಾಗಲು 8 ಮೆಗಾ ಪಿಕ್ಸೆಲ್ ಇರಲಿದೆ ಎಂಬ ಮಾಹಿತಿ ಸೋರಿಕೆಯಾಗಿದೆ. ಸ್ನ್ಯಾಪ್‌ಚಾಟ್ ಇಂಟಿಗ್ರೇಷನ್ ಜತೆಗೆ ಗೂಗಲ್ ಕ್ಯಾಮೆರಾ ಗೋನ ಹೊಸ ವರ್ಷನ್ ಪ್ರಿ ಇನ್ಸ್‌ಟಾಲ್ ಆಗಿ ಬರಲಿದೆ. ಬೆಲೆ ಬಗ್ಗೆಯೂ ಮಾಹಿತಿಯು ಸೋರಿಕೆಯಾಗಿದ್ದು, ಭಾರತೀಯ ಮಾರುಕಟ್ಟೆಯಲ್ಲಿ ಅಂದಾಜು 4000 ಸಾವಿರ ರೂಪಾಯಿಗೆ ಈ ಫೋನ್ ಸಿಗಲಿದೆ ಎಂದು ಹೇಳಲಾಗುತ್ತಿದೆ.

JioPhone Next specification and other information leaked


ಮುಕೇಶ್ ಅಂಬಾನಿ ಘೋಷಣೆ
ಜೂನ್‌ನಲ್ಲಿ ನಡೆದ 44ನೇ ರಿಲಯನ್ಸ್ ಇಂಡಸ್ಟ್ರೀಸ್ ವಾರ್ಷಿಕ ಸಾಮಾನ್ಯ ಸಭೆ(ಎಜಿಎಂ)ಯಲ್ಲಿ ರಿಲಯನ್ಸ್ ಚೇರ್ಮನ್ ಮತ್ತು ಮ್ಯಾನೇಜಿಂಗ್ ಡೈರೆಕ್ಟರ್ ಮುಕೇಶ್ ಅಂಬಾನಿ ಅವರು ಗೂಗಲ್‌ನೊಂದಿಗೆ ಜಿಯೋಫೋನ್ ನೆಕ್ಸ್ಟ್ ಎಂಬ ಕೈಗೆಟುಕುವ ದರದ ಎಂಟ್ರಿ ಲೆವಲ್ ಫೋನ್ ಉತ್ಪಾದಿಸುವ ಬಗ್ಗೆ ಘೋಷಣೆ ಮಾಡಿದ್ದರು.

ಸೆಪ್ಟೆಂಬರ್ 10(ಗಣೇಶ ಹಬ್ಬ)ಕ್ಕೆ ಜಿಯೋ ಅಗ್ಗದ ದರ ಹಾಗೂ ಅತ್ಯಾಧುನಿಕ ತಂತ್ರಜ್ಞಾನದ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡುತ್ತಿದೆ. ಜಿಯೋ ಹಾಗೂ ಗೂಗಲ್ ಜಂಟಿಯಾಗಿ ಅಭಿವೃದ್ಧಿ ಪಡಿಸಿದ ಜಿಯೋಫೋನ್  ನೆಕ್ಸ್ಟ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ ಬರುತ್ತಿದೆ. ನೂತನ ಫೋನ್ ಭಾರತದಲ್ಲಿ ಮಾತ್ರವಲ್ಲ, ಇತರ ರಾಷ್ಟ್ರ ಸೇರಿದಂತೆ ವಿಶ್ವದಲ್ಲಿ ಬಿಡುಗಡೆಯಾಗುತ್ತಿದೆ. ಇದು ಅಡ್ರಾಯ್ಡ್ ಓಎಸ್‌ನ ಆಪ್ಟಿಮೈಸ್ ವರ್ಶನ್ ಆಗಿದೆ.

ಸ್ಯಾಮ್ಸಂಗ್ ಗ್ಯಾಲಕ್ಸಿ ಜೆಡ್ ಫೋಲ್ಡ್ 3, ಗ್ಯಾಲಕ್ಸಿ ಜೆಡ್ ಫ್ಲಿಪ್ 3 ಫೋನ್ ಅನಾವರಣ

ಜಿಯೋ ಹಾಗೂ ಗೂಗಲ್ ಜಂಟಿಯಾಗಿ ಅಭಿವೃದ್ಧಿಪಡಿಸಿದ ಅತ್ಯುತ್ತಮ ಸ್ಮಾರ್ಟ್‌ಫೋನ್ ಬಿಡುಗಡೆ ಕುರಿತು ಘೋಷಿಸಲು ಅತೀವ ಸಂತಸವಾಗುತ್ತಿದೆ. ನಾವು ಅಭಿವೃದ್ಧಿಪಡಿಸಿದ ಜಿಯೋಫೋನ್ ನೆಕ್ಸ್ಟ್ ಫೋನ್, ಹಲವು ವಿಶೇಷತೆ ಹೊಂದಿದೆ. ಗೂಗಲ್ ಮತ್ತು ಜಿಯೋ ಎರಡೂ ಅಪ್ಲಿಕೇಶನ್ ಬೆಂಬಲಿಸುತ್ತದೆ ಎಂದು 44ನೇ ಎಜಿಎಂ ಸಭೆಯಲ್ಲಿ ಅಂಬಾನಿ ಘೋಷಿಸಿದ್ದರು..

Follow Us:
Download App:
  • android
  • ios