ಆ.14 ವಿಭಜನೆ ಭಯಾನಕತೆಯ ಸ್ಮರಣಾ ದಿನವಾಗಿ ಆಚರಣೆ: ಮೋದಿ

  • ಆ.14 ವಿಭಜನೆಯ ಭಯಾನಕ ನೆನಪಿನ ದಿನವಾಗಿ ಆಚರಣೆ
  • ಪ್ರಧಾನಿ ನರೇಂದ್ರ ಮೋದಿ ಟ್ವೀಟ್
August 14 will be observed as Partition Horrors Remembrance Day tweets PM Modi dpl

ದೆಹಲಿ(ಆ.14): ಭಾನುವಾರ ಭಾರತ 75ನೇ ಸ್ವಾತಂತ್ರ್ಯ ದಿನಾಚರಣೆ ಆಚರಿಸಲಿದೆ. ಶನಿವಾರ ಟ್ವೀಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ವಿಭಜನೆಯ ಭಯಾನಕತೆಯನ್ನು ಎಂದೂ ಮರೆಯಲು ಸಾಧ್ಯವಿಲ್ಲ. ಆ.14ನ್ನು ವಿಭಜನೆ ಭಯಾನಕತೆಯ ಸ್ಮರಣಾ ದಿನವಾಗಿ ಆಚರಿಸಲಾಗುತ್ತದೆ ಎಂದಿದ್ದಾರೆ. ವಿಭಜನೆಯ ಸಂದರ್ಭ ಜನರ ತ್ಯಾಗಗಳು, ಕಷ್ಟಗಳು, ಹೋರಾಟಗಳ ನೆನಪಿನಲ್ಲಿ ಈ ದಿನವನ್ನು ಆಚರಿಸಲಾಗುತ್ತದೆ ಎಂದು ಮೋದಿ ಹೇಳಿದ್ದಾರೆ.

ವಿಭಜನೆಯ ನೋವುಗಳನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಬುದ್ಧಿಹೀನರ ದ್ವೇಷ ಮತ್ತು ಹಿಂಸೆಯಿಂದಾಗಿ ನಮ್ಮ ಲಕ್ಷಾಂತರ ಸಹೋದರಿಯರು ಮತ್ತು ಸಹೋದರರು ಸ್ಥಳಾಂತರಗೊಂಡರು. ಅನೇಕರು ತಮ್ಮ ಜೀವಗಳನ್ನು ಕಳೆದುಕೊಂಡರು. ನಮ್ಮ ಜನರ ಹೋರಾಟ ಮತ್ತು ತ್ಯಾಗದ ನೆನಪಿಗಾಗಿ, ಆಗಸ್ಟ್ 14 ಅನ್ನು ವಿಭಜನೆಯ ಭಯಾನಕ ಸ್ಮರಣೆಯ ದಿನವನ್ನಾಗಿ ಆಚರಿಸಲಾಗುತ್ತದೆ ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ. ವಿಭಜನೆಯ ಭಯಾನಕ ಸ್ಮರಣೆಯ ದಿನವು ಸಾಮಾಜಿಕ ವಿಭಜನೆಯ ಕಹಿ ತೆಗೆದುಹಾಕುವ ಅಗತ್ಯವನ್ನು ನಮಗೆ ನೆನಪಿಸಲಿ. ಏಕತೆ, ಸಾಮಾಜಿಕ ಸಾಮರಸ್ಯ ಮತ್ತು ಮಾನವ ಸಬಲೀಕರಣದ ಮನೋಭಾವವನ್ನು ಬಲಪಡಿಸುವುದು ಇದರ ಉದ್ದೇಶ ಎಂದಿದ್ದಾರೆ.

ಭಾರತ ಆಚರಿಸುತ್ತಿರುವುದು 74 ಅಥವಾ 75ನೇ ಸ್ವಾತಂತ್ರ್ಯ ದಿನಾಚರಣೆ? ಗೊಂದಲಕ್ಕೆ ಇಲ್ಲಿದೆ ಉತ್ತರ!

ಭಾರತವು 75 ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಿದೆ. ಪ್ರಧಾನಿ ಪ್ರತಿ ವರ್ಷ ಕೆಂಪು ಕೋಟೆಯಿಂದ ಧ್ವಜವನ್ನು ಹಾರಿಸಿ ದೇಶವನ್ನು ಉದ್ದೇಶಿಸಿ ಮಾತನಾಡುತ್ತಾರೆ. ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಮುಂಚಿತವಾಗಿ, ದೇಶದ ಅಧ್ಯಕ್ಷರು ದೂರದರ್ಶನದಲ್ಲಿ ರಾಷ್ಟ್ರಕ್ಕೆವನ್ನು ಉದ್ದೇಶಿಸಿ ಮಾತನಾಡುತ್ತಾರೆ.

ಅಖಂಡ ಭಾರತ ದಿವಸ

ಆ.14ನ್ನು ಅಖಂಡ ಭಾರತ ದಿವಸ ಎಂದೂ ಆಚರಿಸಲಾಗುತ್ತದೆ. ದೇಶದ ಐಕ್ಯತೆಯನ್ನು ಸಾರುವ ಹಿನ್ನೆಲೆಯಲ್ಲಿ ಈ ದಿನವನ್ನು ಆಚರಿಸಲಾಗುತ್ತಿದ್ದು, ಈ ಕಲ್ಪನೆಯನ್ನು ಮೊದಲ ಹುಟ್ಟುಹಾಕಿದ್ದು ಚಾಣಕ್ಯ. ಅಖಂಡ ಭಾರತದಲ್ಲಿ ಎಲ್ಲ ರಾಜ್ಯಗಳು ಇದೇ ಆಡಳಿತದಲ್ಲಿ ಆಳಲ್ಪಡುತ್ತದೆ ಎಂದು ಅವರು ಸ್ಪಷ್ಟವಾಗಿ ವಿವರಿಸಿದ್ದಾರೆ. ಈ ಕಲ್ಪನೆ ಸಿಂಧೂ ನಾಗರಿಕತೆಯಷ್ಟೇ ಹಳೆಯದು. ಸಾವರ್ಕರ್ ಅವರು ಇದರ ಪ್ರತಿಪಾದಕ. ಸ್ವಾತಂತ್ರ್ಯ ಹೋರಾಟಗಾರ ಹಿಂದೂ ಮಹಾಸಭಾದ ಮುಖಂಡ ವೀರ ಸಾವರ್ಕರ್ ಅವರು ಈ ಕಲ್ಪನೆಯನ್ನು ಬಲವಾಗಿ ಪ್ರತಿಪಾದಿಸಿದ್ದರು. ಕಾಶ್ಮೀರದಿಂದ-ರಾಮೇಶ್ವರ, ಹಿಂದೂ,ಬೌದ್ಧ, ಜೈನ, ಸಿಖ್, ಸಾಂಸ್ಕೃತಿಕ ಮತ್ತು ಧಾರ್ಮಿಕ, ರಾಜಕೀಯತೆಯ ಏಕತೆಯನ್ನು ಅವರು ಒತ್ತಿ ಹೇಳಿದ್ದರು,

Latest Videos
Follow Us:
Download App:
  • android
  • ios