ಹೆಚ್ಚಾಯ್ತು ಪಕ್ಷದ ಖರ್ಚು: ವಿಮಾನ ಇಲ್ಲ, ಇನ್ನು ರೈಲಲ್ಲೇ ಹೋಗ್ರಪ್ಪ ಎಂದ ಕಾಂಗ್ರೆಸ್
- ಕಾಂಗ್ರೆಸ್‌ಗೆ ಆರ್ಥಿಕ ಸಂಕಷ್ಟ : ವೆಚ್ಚ ಕಡಿತಕ್ಕೆ ಸೂಚನೆ
- ಮಿತ ವ್ಯಯ: ವಿಮಾನಗಳ ಬದಲು ರೈಲು ಸೇವೆಗಳನ್ನೇ ಹೆಚ್ಚಾಗಿ ಬಳಸಿ ಭತ್ಯೆ, ಇತರ ಖರ್ಚು ಕಡಿತ
ನವದೆಹಲಿ(ಆ.14): ಹಣಕಾಸಿನ ಮುಗ್ಗಟ್ಟು ಎದುರಿಸುತ್ತಿರುವ ಕಾಂಗ್ರೆಸ್ ಈಗ ಮಿತವ್ಯಯ ಜಪ ಪಠಿಸುತ್ತಿದೆ. ವಾರ್ಷಿಕ 50 ಸಾವಿರ ರು.ಗಳನ್ನು ಪಕ್ಷಕ್ಕೆ ದೇಣಿಗೆ ನೀಡುವಂತೆ ಸೂಚನೆ ನೀಡಿದೆ. ಹಣಕಾಸಿನ ಮುಗ್ಗಟ್ಟು ಎದುರಾಗಿರುವ ಹಿನ್ನೆಲೆಯಲ್ಲಿ ಪಕ್ಷದ ಕಾರ್ಯದರ್ಶಿಗಳಿಂದ ಹಿಡಿದು ಪ್ರಧಾನ ಕಾರ್ಯದರ್ಶಿಗಳವರೆಗೆ ಎಲ್ಲರಿಗೂ ಮಿತವ್ಯಯ ಸೂತ್ರವನ್ನು ಪಕ್ಷ ಪ್ರಕಟಿಸಿದೆ. ಸಮೀಪದ ಸ್ಥಳಗಳಿಗೆ ರೈಲುಗಳಲ್ಲಿ ಪ್ರಯಾಣಿಸುವಂತೆ ಹಾಗೂ ಅದು ಸಾಧ್ಯವಾಗದೇ ಇದ್ದರೆ ಕಡಿಮೆ ದರದ ವಿಮಾನ ಟಿಕೆಟ್ ಗಳನ್ನು ಬಳಸುವಂತೆ ತಿಳಿಸಲಾಗಿದೆ.
ಕಾರ್ಯದರ್ಶಿಗಳಿಗೆ 1,400 ಕಿ.ಮೀ.ವರೆಗಿನ ರೈಲ್ವೆ ಟಿಕೆಟ್ ನೀಡಲಾಗುವುದು ಹಾಗೂ ಪ್ರಯಾಣದ ದೂರ 1,400 ಕಿ.ಮೀ.ಗಿಂತ ಹೆಚ್ಚಿದ್ದರೆ, ಪ್ರಯಾಣಕ್ಕೆ ಕಡಿಮೆ ದರದ ವಿಮಾನ ಟಿಕೆಟ್ ದರವನ್ನು ಮಾತ್ರ ನೀಡಲಾಗುವುದು. ಒಂದು ವೇಳೆ ರೈಲಿನ ದರ ವಿಮಾನದ ದರಕ್ಕಿಂತ ಜಾಸ್ತಿ ಆಗಿ ದ್ದರೆ ತಿಂಗಳಿಗೆ 2 ಬಾರಿ ವಿಮಾನ ಟಿಕೆಟ್ ದರ ನೀಡಲಾಗುವುದು. ವಿಮಾನದ ಪ್ರಯಾಣಕ್ಕಾಗಿ ಪಕ್ಷದ ಹಣವನ್ನು ಬಳಸುವ ಬದಲು, ಸಂಸದರು ತಮಗೆ ನೀಡಲಾಗುವ ವಿಮಾನಯಾನ ಸೌಲಭ್ಯ ಬಳಕೆ ಮಾಡಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.
20ಕ್ಕೆ ವಿಪಕ್ಷ ನಾಯಕರ ಜತೆ ಸೋನಿಯಾ ಸಭೆ
ಇದೇ ವೇಳೆ ಕಾರ್ಯದರ್ಶಿಗಳಿಗೆ ನೀಡುವ 12,000 ರು. ಮತ್ತು ಪ್ರಧಾನ ಕಾರ್ಯ ದರ್ಶಿಗಳಿಗೆ ನೀಡುವ 15,000 ರು. ಭತ್ಯೆಯನ್ನು ಕಡಿತಗೊಳಿಸಲು ತೀರ್ಮಾನಿಸಲಾಗಿದೆ. ಅಲ್ಲ ದೇ ಪ್ರತಿ ಕಾಂಗ್ರೆಸ್ ಸಂಸದ ಪ್ರತಿ ವರ್ಷ 50 ಸಾವಿರ ರು. ದೇಣಿಗೆ ನೀಡಬೇಕು ಮತ್ತು ತಮ್ಮ ಇಬ್ಬರು ಬೆಂಬಲಿಗರಿಂದ ತಲಾ 4 ಸಾವಿರ ರು. ದೇಣಿಗೆ ಸಂಗ್ರಹಿಸಿ ಕೊಡುವಂತೆ ಸೂಚಿಸಲಾಗಿದೆ ಎಂದು ಕಾಂಗ್ರೆಸ್ ಖಜಾಂಜಿ ಪವನ್ ಬನ್ಸಲ್ ತಿಳಿಸಿದ್ದಾರೆ.
ಯಾವೆಲ್ಲ ವೆಚ್ಚ ಕಡಿತ ?
- ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿಕೊಂಡಿರುವ ಕಾಂಗ್ರೆಸ್ ಪಕ್ಷದಿಂದ ವೆಚ್ಚ ಕಡಿತದ ಮೊರೆ
- ಸಂಸದರು, ಪಕ್ಷದ ಕಾರ್ಯದರ್ಶಿಗಳ ಅನಾವಶ್ಯಕ ವೆಚ್ಚಗಳ ಕಡಿವಾಣಕ್ಕೆ ನಿರ್ಧಾರ
- ಸಂಸದರಿಂದ ವಾರ್ಷಿಕ 50 ಸಾವಿರ, ತಮ್ಮ ಬೆಂಬಲಿಗರಿಂದ 4,000 ದೇಣಿಗೆ ಸಂಗ್ರಹ ಗುರಿ
- ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳಿಗೆ ನೀಡಲಾಗುವ ಭತ್ಯೆ ಕಡಿತಕ್ಕೂ ತೀರ್ಮಾನ
- ಪ್ರಧಾನ ಕಾರ‌್ಯದರ್ಶಿಗಳು, ಕಾರ್ಯದರ್ಶಿಗಳಿಗೆ 1400 ಕಿ.ಮೀ ದೂರಕ್ಕೆ ರೈಲ್ವೆ ಟಿಕೆಟ್‌ಗೆ ಹಣ
- ಥಿ ಪಕ್ಷದ ಸಂಸದರು ಸರ್ಕಾರ ನೀಡುವ ವಿಮಾನ ಸೌಲಭ್ಯವನ್ನೇ ಬಳಕೆ ಮಾಡಿಕೊಳ್ಳಿ