ಬಯಲಾಯ್ತು ಚೀನಾ ಮಾಡಿದ ಎಡವಟ್ಟು, 22ರ ಯುವತಿಗೆ ಸೌಂದರ್ಯ ಬಿಕ್ಕಟ್ಟು ; ಮೇ.5ರ ಟಾಪ್ 10 ಸುದ್ದಿ!
ಲಾಕ್‌ಡೌನ್ ಸಡಿಲಿಕೆಯಾದ ಬೆನ್ನಲ್ಲೇ ಊರಿಗೆ ತೆರಳುವ ಕಾರ್ಮಿಕರ ಸಂಖ್ಯೆ ಹೆಚ್ಚಾಗುತ್ತಿದೆ. ಇದೀಗ ಕಾರ್ಮಿಕರಲ್ಲಿ ಸಿಎಂ ಯಡಿಯೂರಪ್ಪ ವಿಶೇಷ ಮನವಿ ಮಾಡಿದ್ದಾರೆ. ಕೊರೋನಾ ವೈರಸ್ ಕುರಿತು ಅಧ್ಯಯನ ಮಾಡಿದ್ದ ಚೀನಾ ಒಬ್ಬರಿಂದ ಒಬ್ಬರಿಗೆ ಹರಡುತ್ತೆ ಅನ್ನೋ ವಿಚಾರವನ್ನು ಮುಚ್ಚಿಟ್ಟು ಆತೀ ದೊಡ್ಡ ಎಡವಟ್ಟುು ಮಾಡಿದೆ. ಲಾಕ್‌ಡೌನ್ ಕಾರಣ ಮಾಡಲಾಗಿದ್ದ ಸಾಲ ಮರುಪಾವತಿ ಅವದಿ ಮತ್ತೆ ವಿಸ್ತರಣೆಯಾಗುವು ಸಾಧ್ಯತೆ ಇದೆ. ಅಭಿಮಾನಿಗಳ ಜೊತೆ ಕನೆಕ್ಟ್ ಆಗಿದ್ದಾರೆ ರಚಿತಾ ರಾಮ್, 120 ದೇಶಗಳಿಗೆ ಔಷದ ರಫ್ತು ಮಾಡಿದ ಭಾರತ ಸೇರಿದಂತೆ ಮೇ.05ರ ಟಾಪ್ 10 ಸುದ್ದಿ ಇಲ್ಲಿವೆ.
ನಿಮ್ಮ ಕೆಲಸಗಳು ಮತ್ತೆ ಆರಂಭವಾಗುತ್ತೆ, ಊರುಗಳಿಗೆ ಹಿಂತಿರುಗಬೇಡಿ: ಸಿಎಂ ಮನವಿ
'ಕಾರ್ಮಿಕರಿಗೆ ಉದ್ಯೋಗ ಒದಗಿಸಿ ಕೊಟ್ಟಿದ್ದೇವೆ. ಅವರಿಗೆ ಅನುಕೂಲವಾಗುವ ಎಲ್ಲಾ ವ್ಯವಸ್ಥೆಯನ್ನೂ ಮಾಡುತ್ತೇವೆ. ನೀವು ಎಲ್ಲೆಲ್ಲಿ ಕೆಲಸ ಮಾಡುತ್ತಿದ್ದಿರೋ ಅಲ್ಲೆಲ್ಲಾ ನಿಮಗೆ ಸೂಕ್ತ ಸೌಕರ್ಯ ಒದಗಿಸಿ ಕೊಡುವ ಜವಾಬ್ದಾರಿ ಸರ್ಕಾರದ್ದಿದೆ. ನಾವು ಕೈಗಾರಿಕೋದ್ಯಮಿಗಳ ಜೊತೆ ಮಾತನಾಡಿದ್ದೇವೆ. ಯಾರೂ ಕೂಡಾ ನಿಮ್ಮ ನಿಮ್ಮ ಊರುಗಳಿಗೆ ಹೋಗುವ ಪ್ರಯತ್ನ ಮಾಡಬೇಡಿ. ಇಲ್ಲಿಯೇ ಉಳಿದು ನಿಮ್ಮ ನಿಮ್ಮ ಕೆಲಸಗಳನ್ನು ಹಿಂದಿನಂತೆಯೇ ಮುಂದುವರೆಸಬೇಕು. ನಿಮಗೇನೇ ತೊಂದರೆ ಇದ್ದರೂ ಅದನ್ನು ಬಗೆಹರಿಸುವ ಭರವಸೆ ನೀಡುತ್ತಿದ್ದೇನೆ' ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಮಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಕೊರೋನಾದಿಂದ ಸಾವು, ತಿಂಗಳ ಬಳಿಕ ಜೀವಂತವಾದಳು!
ಕೊರೋನಾ ಅಟ್ಟಹಾಸಕ್ಕೆ ಅನೇಕ ಕಡೆ ವೈದ್ಯರೂ ಕೂಡಾ ಗೊಂದಲಕ್ಕೀಡಾಗುತ್ತಿದ್ದು, ಮೃತರ ಗುರುತಿಸುವಲ್ಲಿ ಎಡವುತ್ತಿದ್ದಾರೆ. ಇತ್ತೀಚೆಗಷ್ಟೇ ದಕ್ಷಿಣ ಅಮೆರಿಕದ ಇಕ್ವೆಡಾರ್‌ನಲ್ಲಿ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ ಎಂಬ ಹಿನ್ನೆಲೆ ಕುಟುಂಬ ಅಂತಿಮ ಸಂಸ್ಕಾರಕ್ಕೆ ಬೇಕಾದ ಎಲ್ಲಾ ವ್ಯವಸ್ಥೆ ಮಾಡಿ, ಕ್ರಿಯೆಗಳನ್ನೂ ನೆರವೇರಿಸಿತ್ತು. ಆದರೆ ಒಂದು ತಿಂಗಳ ಬಳಿಕ ಆ ಮಹಿಳೆ ಜೀವಂತವಾಗಿ ಮನೆಗೆ ಮರಳಿದ್ದಾರೆ.
ಚೀನಾ ಮಾಡಿದ ಒಂದು ಎಡವಟ್ಟು ವಿಶ್ವದಾದ್ಯಂತ ಇಷ್ಟೊಂದು ಅವಾಂತರ ಸೃಷ್ಟಿಸಿತಾ?
ಕೊರೊನಾ ವಿಶ್ವದಾದ್ಯಂತ ಅಟ್ಟಹಾಸ ಮೆರೆಯುತ್ತಿದೆ. ಇಡೀ ವಿಶ್ವವೇ ಸ್ಥಬ್ಧವಾಗಿದೆ. ಈ ಸೋಂಕು ಒಬ್ಬರಿಂದ ಹತ್ತಾರು ಜನರಿಗೆ ಬಹಳ ಸುಲಭವಾಗಿ ಹರಡುತ್ತದೆ. 9 ಮಂದಿಯಿಂದ ಸುಮಾರು 250 ಮಂದಿಗೆ ಹರಡಿದೆ. ಕೊರೋನಾ ಜನಕ ಚೀನಾ ಇದೊಂದು ಸಾಂಕ್ರಾಮಿಕ ರೋಗ. ಒಬ್ಬರಿಂದ ಒಬ್ಬರಿಗೆ ಹರಡುತ್ತದೆ ಎಂಬುದನ್ನು ಮುಚ್ಚಿಟ್ಟಿತ್ತು. ತನಗೇನೂ ಗೊತ್ತಿಲ್ಲ ಎಂಬಂತೆ ಮಗುಮ್ಮಾಗಿ ಇದ್ದಿದ್ದೇ ಇಷ್ಟೊಂದು ಅವಾಂತರಗಳು ಸೃಷ್ಟಿಯಾಗಲು ಕಾರಣವಾಯ್ತು.
ರಚಿತಾ ರಾಮ್ ಸುದ್ದೀನೇ ಇಲ್ವಲ್ಲಾ? ಲವ್ವಲ್ಲಿ ಬಿದ್ದಿದ್ದಾರಾ ಅವರು?
ಪ್ರತಿಯೊಬ್ಬ ನಟ, ನಟಿಯರೂ ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳೊಂದಿಗೆ ಕನೆಕ್ಟ್ ಆಗುತ್ತಿದ್ದಾರೆ. ಮನೆಯಲ್ಲಿ ಬಂಧಿಯಾಗಿದ್ದರೂ ತಾವೇನು ಮಾಡುತ್ತಿದ್ದೇವೆ ಎಂಬುವುದರ ಕ್ಷಣ ಕ್ಷಣದ ಮಾಹಿತಿಯನ್ನು ಅವರೇ ರಿವೀಲ್ ಮಾಡುತ್ತಿದ್ದಾರೆ.
ಸಾಲ ಮರುಪಾವತಿ ಅವಧಿ ಮತ್ತೆ ವಿಸ್ತರಣೆ?...
ಕೊರೋನಾ ಕಂಟಕದಿಂದ ದೇಶವ್ಯಾಪಿ ಲಾಕ್‌ಡೌನ್ ಹೇರಲಾಗಿದೆ. ಸದ್ಯಕ್ಕೀಗ ಕೊಂಚ ಸಡಿಲಿಕೆ ನೀಡಲಾಗಿದೆಯಾದರೂ, ಆರೋಗ್ಯದ ಜೊತೆಗೆ ಆರ್ಥಿಕ ಸಂಕಷ್ಟ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಿರುವಾಗ ಸಾಲ ಮರುಪಾವತಿ ಮತ್ತೆ ವಿಸ್ತರಣೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಸುಂದರಿಯಾಗಲು 2 ವರ್ಷದಲ್ಲಿ 20 ಸರ್ಜರಿ: 22ರ ಯುವತಿ ಮುಖವೀಗ ವಿಕಾರ!
ಬುಲ್ಗೇರಿಯಾದ 22 ವರ್ಷದ ಆಂಡ್ರಿಯಾ ಎಮಿಲೋವಾ ಇವಾನೋಲಾಗೆ ತನ್ನ ತುಟಿಗಳು ದೊಡ್ಡದಾಗಿ, ದಪ್ಪವಾಗಿರಬೇಕೆಂಬ ಆಸೆ ಇತ್ತು. ಇದಕ್ಕಾಗಿ ಆಕೆ ನೀರಿನಂತೆ ಹಣ ವ್ಯಯಿಸಿದ್ದಾಳೆ. ಕೇವಲ ಎರಡು ವರ್ಷದಲ್ಲಿ ಇಪ್ಪತ್ತು ಸರ್ಜರಿಗಳನ್ನು ಮಾಡಿಸಿಕೊಂಡಿರುವ ಆಕೆ, ತನ್ನ ತುಟಿಗಳನ್ನು ದಪ್ಪ ಹಾಗೂ ದೊಡ್ಡದಾಗಿಸಿಕೊಂಡಿದ್ದಾಳೆ. ಇಷ್ಟಾದರೂ ಆಂಡ್ರಿಯಾ ಸಂತೋಷವಾಗಿಲ್ಲ. ಆಕೆಗೆ ಇನ್ನೂ ದೊಡ್ಡ ತುಟಿಗಳು ಬೇಕಂತೆ. ಇದಕ್ಕಾಗಿ ಮುಂದೆಯೂ ಸರ್ಜರಿ ಮಾಡಿಸಿಕೊಳ್ಳುವ ಯೋಚನೆಯಲ್ಲಿದ್ದಾಳೆ. ಎರಡು ವರ್ಷದಲ್ಲಿ ಆಂಡ್ರಿಯಾ ಲುಕ್ ಹೇಗೆ ಬದಲಾಗಿದೆ? ಇಲ್ಲಿದೆ ಒಂದು ಝಲಕ್
ಜೂನ್ ಆರಂಭದಲ್ಲಿ ಮಾರುತಿ S ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆ!
ಕೊರೋನಾ ವೈರಸ್ ಹಾಗೂ ಭಾರತದಲ್ಲಿನ ಲಾಕ್‌ಡೌನ್ ಕಾರಣ ಆಟೋಮೊಬೈಲ್ ಕಂಪನಿಗಳು ಎಪ್ರಿಲ್ ತಿಂಗಳಲ್ಲಿ ಶೂನ್ಯ ಫಲಿತಾಂಶ ಕಂಡಿದೆ. ಇದೀಗ ಲಾಕ್‌ಡೌನ್ ಭಾಗಶಃ ಸಡಿಲಿಕೆಯಾಗಿದೆ. ಹೀಗಾಗಿ ಕೆಲ ವಾಹನ ಕಂಪನಿಗಳು ಕಾರ್ಯರಂಭಗೊಂಡಿದೆ. ಇದರ ಬೆನ್ನಲ್ಲೇ ಮಾರುತಿ ಸುಜುಕಿ ತನ್ನು ಎಸ್ ಕ್ರಾಸ್ ಪೆಟ್ರೋಲ್ ಕಾರನ್ನು ಮುಂದಿನ ತಿಂಗಳು ಬಿಡುಗಡೆ ಮಾಡಲು ನಿರ್ಧರಿಸಿದೆ.
ಕರ್ನಾಟಕ ಪೊಲೀಸ್ ಇಲಾಖೆಯ ಖಾಲಿ ಹುದ್ದೆಗೆ ಅರ್ಜಿ ಆಹ್ವಾನ; ಆಸಕ್ತರಿಗೆ ಸುವರ್ಣವಕಾಶ!
ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ಕರ್ನಾಕ ಪೊಲೀಸ್ ತಮ್ಮ ಮಹತ್ತರ ಜವಾಬ್ದಾರಿ ನಡುವೆ ಇಲಾಖೆಯಲ್ಲಿ ಖಾಲಿ ಇರುವ ಪೊಲೀಸ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಆಸಕ್ತರಿಗೆ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸೇವೆ ಸಲ್ಲಿಸಲು ಇದು ಸುವರ್ಣವಕಾಶವಾಗಿದೆ.
ಫೆಡರಲ್ ಕೋರ್ಟ್ ಜಡ್ಜ್ ಆಗಿ ಭಾರತೀಯ ಮೂಲದ ಸರಿತಾ ನಾಮನಿರ್ದೇಶನ ಮಾಡಿದ ಟ್ರಂಪ್!
ಕೊರೋನಾ ವಿರುದ್ಧಧ ಹೋರಾಟ, ಚೀನಾ ಹಾಗೂ ವಿಶ್ವಸಂಸ್ಥೆ ವಿರುದ್ಧ ಸಮರಗಳ ನಡುವೆ ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತೀಯರಿಗೆ ಸುಹಿ ಸುದ್ದಿ ನೀಡಿದ್ದಾರೆ. ನ್ಯೂಯಾರ್ಕ್ ಫೆಡರಲ್ ಕೋರ್ಟ್ ನ್ಯಾಯಮೂರ್ತಿಯಾಗಿ ಭಾರತೀಯ ಮೂಲಕ ಸರಿತಾ ಕೋಮತಿರೆಡ್ಡಿಯನ್ನು ನಾಮನಿರ್ದೇಶನ ಮಾಡಲಾಗಿದೆ.
ಭಾರತವೀಗ ಇಡೀ ವಿಶ್ವದ ಔಷಧಾಲಯ: ಪ್ರಧಾನಿ ಮೋದಿ!...
ಕೊರೋನಾ ವಿಚಾರ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರು ಅಲಿಪ್ತ ನೀತಿ ದೇಶಗಳ ನಾಯಕರೊಂದಿಗೆ ಸೋಮವಾರ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಅವರು, ಮಾನವ ಕುಲ ಈಗ ಭಾರೀ ದೊಡ್ಡ ತೊಂದರೆಯಲ್ಲಿದೆ. ಇದರ ವಿರುದ್ದ ಆಲಿಪ್ತ ನೀತಿ ಹೊಂದಿರುವ ರಾಷ್ಟ್ರಗಳು ಹೋರಾಟ ಮಾಡುತ್ತಿದೆ. ಭಾರತ ಈ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದು, 120 ದೇಶಗಳಿಗೆ ಔಷಧಗಳನ್ನು ರಫ್ತು ಮಾಡುವ ಮೂಲಕ ಭಾರತ ‘ವಿಶ್ವದ ಔಷಧಾಲಯ’ವಾಗಿ ಮಾರ್ಪಟ್ಟಿದೆ ಎಂದಿದ್ದಾರೆ.