ನ್ಯೂಯಾರ್ಕ್(ಮೇ.05): ಭಾರತೀಯ ಮೂಲದ, ಅಮೆರಿಕಾ ನಿವಾಸಿ ಅಟಾರ್ನಿ ಸರಿತಾ ಕೋಮತಿರೆಡ್ಡಿಯನ್ನು ನ್ಯೂಯಾರ್ಕ್ ಫೆಡರಲ್ ಕೋರ್ಟ್ ಜಡ್ಜ್ ಆಗಿ ಅಮೆರಿಕಾ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ನಾಮನಿರ್ದೇಶನಗೊಳಿಸಿದ್ದಾರೆ. ಸೋಮವಾರ(ಮೇ.04) ರಂದು ಟ್ರಂಪ್, ಸರಿತಾ ಕೋಮತಿರೆಡ್ಡಿ ಹೆಸರನ್ನು ಅಂತಿಮಗೊಳಿಸಿ ಅಮೆರಿಕಾ ಸೆನೆಟ್‌ಗೆ ಕಳುಹಿಸಿದ್ದಾರೆ ಎಂದು ವೈಟ್ ಹೌಸ್ ಸ್ಪಷ್ಟಪಡಿಸಿದೆ. 

ವುಹಾನ್‌ನಿಂದ ಜನ್ಮ ತಾಳಿದ ಕೊರೋನಾ; ಚೀನಾ ಕುತಂತ್ರಕ್ಕೆ ಸಾಕ್ಷಿ ಇದೆ ಎಂದ ಟ್ರಂಪ್!

ಪ್ರಾಸಿಕ್ಯೂಟರ್ ಆಗಿರುವ ಸರಿತಾ ಕೋಮತಿರೆಡ್ಡಿ ಪ್ರತಿಷ್ಠಿತ ಕೊಲಂಬಿಯಾ ಲಾ ಸ್ಕೂಲ್‌ನಲ್ಲಿ ಉಪನ್ಯಾಸಕಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಸದ್ಯ  ಯನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಅಟಾರ್ನಿ ಕಚೇರಿಯಲ್ಲಿ ಜನರಲ್ ಕ್ರೈಂ‌ನ ಡೆಪ್ಯೂಟಿ ಚೀಫ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2018-19ರಲ್ಲಿ ಸರಿತಾ ಕೋಮತಿರೆಡ್ಡಿ ಇಂಟರ್‌ನ್ಯಾಷನಲ್ ನಾರ್ಕೊಟಿಕ್ಸ್ ಹಾಗೂ ಮನಿ ಲಾಂಡರಿಂಗ್‌ನ ಹಂಗಾಮಿ ಡೆಪ್ಯೂಟಿ ಚೀಫ್ ಆಫಿ ಕಾರ್ಯನಿರ್ವಹಿಸಿದ್ದಾರೆ. 

ಅಮೆರಿಕ ವೈರಸ್‌ ತಂಡಕ್ಕೆ ವುಹಾನ್‌ ಭೇಟಿ ಅವಕಾಶಕ್ಕೆ ಚೀನಾ ನಕಾರ!

2016 ರಿಂದ 2019ರ ವರೆಗೆ ಕಂಪ್ಯೂಟರ್ ಹ್ಯಾಕಿಂಗ್ ಇಂಟೆಲೆಕ್ಚುವಲ್ ಪ್ರಾಪರ್ಟಿ ಕಾರ್ಡಿನೇಟರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಹಾರ್ವರ್ಡ್ ಲಾ ಸ್ಕೂಲ್‌ನಲ್ಲಿ ಕಾನೂನು ಪದವಿ ಪಡೆದಿರುವ ಸರಿತಾ ಕೋಮತಿ ರೆಡ್ಡಿ ಆರಂಭದಲ್ಲಿ ಕವಾಂಗ್ ಕೋರ್ಟ್‌ನಲ್ಲಿ ಕ್ಲರ್ಕ್ ಆಗಿ ಕಾರ್ಯನಿರ್ವಹಿಸಿದ್ದರು. 2020ರ  ಫೆಬ್ರವರಿ 12ರಲ್ಲಿ ಡೋನಾಲ್ಡ್ ಟ್ರಂಪ್ ಸರಿತಾ ಕೋಮತಿರೆಡ್ಡಿಯವರನ್ನು ನ್ಯೂಯಾರ್ಕ್ ಫೆಡರಲ್ ಕೋರ್ಟ್‌ಗೆ ನಾಮನಿರ್ದೇಶನ ಮಾಡುವುದಾಗಿ ಹೇಳಿದ್ದರು.