ನವದೆಹಲಿ(ಮೇ.05): ಮಾರುತಿ ಸುಜುಕಿ ತನ್ನ ಎಲ್ಲಾ ಡೀಸೆಲ್ ಕಾರಿಗೆ ಗುಡ್‌ಬೈ ಹೇಳಿದೆ. ಕೇವಲ ಪೆಟ್ರೋಲ್ ಕಾರು ಮಾತ್ರ ಲಭ್ಯವಿದೆ. ಈಗಾಗಲೇ ಮಾರುತಿ ಬ್ರೆಜಾ ಡೀಸೆಲ್ ಕಾರು ಪೆಟ್ರೋಲ್ ಕಾರಾಗಿ ಪರಿವರ್ತನೆಗೊಂಡಿದೆ. ಎಪ್ರಿಲ್ ಆರಂಭದಲ್ಲಿ ಬಿಡುಗಡೆಯಾಗಬೇಕಿದ್ದ ಮಾರುತಿ ಸುಜುಕಿ ಎಸ್ ಕ್ರಾಸ್ ಪೆಟ್ರೋಲ್ ಕಾರು ಕೊರೋನಾ ವೈರಸ್ ಲಾಕ್‌ಡೌನ್ ಕಾರಣ ವಿಳಂಬವಾಗಿದೆ. ಇದೀಗ ಲಾಕ್‌ಡೌನ್ ಸಡಿಲಿಕೆಯಾದ ಕಾರಣ ಜೂನ್ ಆರಂಭದಲ್ಲಿ ಅಂದರೆ ಮುಂದಿನ ತಿಂಗಳು ನೂತನ ಎಸ್ ಕ್ರಾಸ್ ಪೆಟ್ರೋಲ್ ಕಾರು ಬಿಡುಗಡೆಯಾಗಲಿದೆ.

ಮೇ.15 ರಿಂದ ದಾಟ್ಸನ್ ರೆಡಿ ಗೋ ಕಾರಿನ ಬುಕಿಂಗ್ ಆರಂಭ; ಕಡಿಮೆ ಬೆಲೆ, ಹಲವು ವಿಶೇಷತೆ!.

2020ರ ಆಟೋ ಎಕ್ಸ್ಪೋದಲ್ಲಿ ನೂತನ ಮಾರುತಿ ಸುಜುಕಿ ಎಸ್ ಕ್ರಾಸ್ ಕಾರನ್ನು ಅನಾವರಣ ಮಾಡಲಾಗಿತ್ತು. ಆದರೆ ಆಟೋ ಎಕ್ಸ್ಪೋ ಬಳಿಕ ಕೊರೋನಾ ವೈರಸ್ ಆರ್ಭಟವೇ ಹೆಚ್ಚಾಗಿತ್ತು. ಇದೀಗ ನಿಧಾನವಾಗಿ ಆಟೋಮೊಬೈಲ್ ಇಂಡಸ್ಟ್ರಿ ಮತ್ತೆ ಕಾರ್ಯ ಆರಂಭಿಸಿವೆ. ಹೀಗಾಗಿ ಮಾರುತಿ ಸುಜುಕಿ ಎಸ್ ಕ್ರಾಸ್ ಡೀಸೆಲ್ ಕಾರನ್ನು ಇದೀಗ ಪೆಟ್ರೋಲ್ ಕಾರಾಗಿ ಪರಿವರ್ತಿಸಿದೆ. ಇಷ್ಟೇ ಅಲ್ಲ ಹೆಚ್ಚುವರಿ ಫೀಚರ್ಸ್ ಹಾಗೂ ಕೆಲ ಹೊಸತನಗಳೊಂದಿಗೆ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ.

ಲಾಕ್‌ಡೌನ್‌ನಲ್ಲೂ ದಾಖಲೆ ಬರೆದ ನ್ಯೂ ಜನರೇಶನ್ ಕ್ರೆಟಾ ಕಾರು!.

ನೂತನ ಎಸ್ ಕ್ರಾಸ್ ಪೆಟ್ರೋಲ್ ಕಾರು 1.5 ಲೀಟರ್ ಎಂಜಿನ್ ಹೊಂದಿದ್ದು, 106ps ಪವರ್ ಹಾಗೂ  138nm ಪೀಕ್ ಟಾರ್ಕ್ ಉತ್ಪಾದಿಸ ಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಹಾಗೂ ಆಟೋಮ್ಯಾಟಿಕ್ ಟ್ರಾನ್ಸ್‌ಮಿಶನ್ ಹೊಂದಿದೆ.  ಇನ್ನು ಮಾರುತಿ ಸುಜುಕಿ ಡೀಸೆಲ್ ಎಸ್ ಕ್ರಾಸ್ ಕಾರಿನ ಬೆಲೆ 8.81 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ)ನಿಂದ ಆರಂಭಗೊಳ್ಳುತ್ತಿದ್ದು, ಟಾಪ್ ಮಾಡೆಲ್ ಬೆಲೆ 11.44 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). ಆದರೆ ಪೆಟ್ರೋಲ್ ಕಾರಿನ ಬೆಲೆ ಇದಕ್ಕಿಂತ ಕಡಿಮೆ ಇರಲಿದೆ.