ನವದೆಹಲಿ(ಅ.25): ದೇಶದ ವಿವಿಧ ರಾಜ್ಯಗಳ ವಿಧಾನಸಭೆಗೆ ನಡೆದ ಉಪ ಚುನಾವಣೆ ಫಲಿತಾಂಶ ಹೊರ ಬಿದಿದ್ದು, ಬಿಜೆಪಿ-ಕಾಂಗ್ರೆಸ್ ಹಾಗೂ ಪ್ರಾದೇಶಿಕ ಪಕ್ಷಗಳಿಗೆ ಸಿಹಿ-ಕಹಿ ಅನುಭವವಾಗಿದೆ.

ಹರಿಯಾಣದ ಕುಮಾರಸ್ವಾಮಿ ಆಗ್ತಾರಾ ದುಷ್ಯಂತ್: ದೋಸ್ತಿ ಬಯಸಿದೆ ಕಾಂಗ್ರೆಸ್!

ಶಿವಸೇನೆ'ಮಹಾ'ಬೇಡಿಕೆ: ಸಾಧ್ಯನಾ ಆದಿತ್ಯ ಠಾಕ್ರೆ ಸಿಎಂ ಆಗೋಕೆ?

ಉತ್ತರಪ್ರದೇಶ(11), ಗುಜರಾತ್(06), ಬಿಹಾರ(05). ಕೇರಳ(05), ಅಸ್ಸಾಂ(04), ಪಂಜಾಬ್(04), ಸಿಕ್ಕಿಂ(03), ರಾಜಸ್ಥಾನ(02), ಹಿಮಾಚಲಪ್ರದೇಶ(02), ತಮಿಳುನಾಡು(02), ಅರುಣಾಚಲಪ್ರದೇಶ(01), ಮಧ್ಯಪ್ರದೇಶ(01), ಓಡಿಶಾ(01), ಪಾಂಡಿಚೇರಿ(01), ಮೇಘಾಲಯ(01), ತೆಲಂಗಾಣ(01), ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆದಿದೆ.

ಹರಿಯಾಣ, ಮಹಾರಾಷ್ಟ್ರ ಸದ್ಯದ ಬಲಾಬಲ: ಇದು ಚುನಾವಣಾ ರಣರಂಗದ ಕುತೂಹಲ!

ನನಗೆ ಸಿಎಂ ಪಟ್ಟ ಕೊಡುವ ಪಕ್ಷಕ್ಕೆ ಬೆಂಬಲ: ಚೌಟಾಲಾ ಒಲಿಸಲು ಬಿಜೆಪಿ-ಕಾಂಗ್ರೆಸ್ ಹಂಬಲ!

ಉತ್ತರ ಪ್ರದೇಶದ 11 ಕ್ಷೇತ್ರಗಳ ಪೈಕಿ ಬಿಎಜಪಿ ಮತ್ತು ಅಪ್ನಾದಳ ಮೈತ್ರಿಕೂಟ 8 ಸ್ಥಾನಗಳಲ್ಲಿ ಜಯಗಳಿಸಿದ್ದರೆ, ಸಮಾಜವಾದಿ ಪಕ್ಷ 3 ಕ್ಷೇತ್ರಗಳಲ್ಲಿ ಜಯಗಳಿಸಿದೆ. ಗಂಗೋ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋತಿದ್ದು, ಇದಕ್ಕೆ ಚುನಾವಣಾ ಆಯೋಗದ ಪಕ್ಷಪಾತ ಧೋರಣೆಯೇ ಕಾರಣ ಎಂದು ಪ್ರಿಯಾಂಕಾ ಗಾಂಧಿ ವಾದ್ರಾ ಆರೋಪಿಸಿದ್ದಾರೆ.

ಖಟ್ಟರ್ ಕರೆಸಿಕೊಂಡ ಶಾ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುಭಾಷ್ ಭರಾಲಾ ರಾಜೀನಾಮೆ!

ಬಿಎಸ್‌ವೈ ನೀರು ಕೊಡ್ತಿನಿ ಎಂದಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು!

ಇನ್ನು ಗುಜರಾತ್‌ನಲ್ಲಿ ಆಡಳಿತಾರೂಢ ಬಿಜೆಪೊಇ 03, ಹಾಗೂ ಕಾಂಗ್ರೆಸ್ 03 ಕ್ಷೇತತ್ರಗಳಲ್ಲಿ ಜಯಭೇರಿ ಬಾರಿಸಿವೆ. ಪ್ರಮುಖವಾಗಿ ಕಾಂಗ್ರೆಸ್ ಪಕ್ಷ ತ್ಯಜಿಸಿ ಬಿಜೆಪಿ ಸೇರಿದ್ದ ಹಿಂದುಳಿದ ವರ್ಗದ ನೇತಾರ ಅಲ್ಪೇಶ್ ಠಾಕೂರ್ ಸೋಲುಂಡಿದ್ದಾರೆ.

ರಾಧಾನ್'ಪುರ್ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಘುಭಾಯಿ ದೇಸಾಯಿ ಬಿಜೆಪಿ ಅಭ್ಯರ್ಥಿ ಅಲ್ಪೇಶ್ ಠಾಕೂರ್ ಅವರನ್ನು 3 ಸಾವಿರಕ್ಕೂ ಅಧಿಕ ಮತಗಳಿಂದ ಸೋಲಿಸಿದ್ದಾರೆ.

ಹರಿಯಾಣ ನಮ್ದು ಅಂತಿದ್ದಾರೆ ಖಟ್ಟರ್: ಮೀಟ್ ಆಗಲು ಹೋದರು ಗವರ್ನರ್!

ಆದಿತ್ಯ ಠಾಕ್ರೆ ಗೆದ್ದರು ವರ್ಲಿ: ಬಿಜೆಪಿಗೆ ಉದ್ಧವ್ ಕೇಳಿದರು ಮಾತಾಡಲು ಯಾವಾಗ ಬರ್ಲಿ?

ಬಿಹಾರ ವಿಧಾನಸಭೆಗೆ 5 ಕ್ಷೇತ್ರಗಳಲ್ಲಿ ನಡೆದ ಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ-ಜೆಡಿಯು ಮೈತ್ರಿ ಮೂರು ಕ್ಷೇತ್ರಗಳಲ್ಲಿ ಸೋಲುಂಡಿದೆ. ಕಿಶನ್‌ಗಂಜ್ ಕ್ಷೇತ್ರದಲ್ಲಿ ಅಸದುದ್ದೀನ್ ಒವೈಸಿ ನೇತೃತ್ವದ ಎಐಎಂಐಎಂ ಪಕ್ಷ ಖಾತೆ ತೆರೆದಿದೆ. ಸಮಸ್ತಿಪುರ್ ಲೋಕಸಭೆ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ರಾಮ್ ವಿಲಾಸ್ ಪಾಸ್ವಾನ್ ನೇತೃತ್ವದ ಆರ್‌ಎಲ್‌ಡಿ ಜಯಗಳಿಸಿದೆ.

ಮಹಾ ರಿಸಲ್ಟ್: ಬಿಜೆಪಿಗೆ ಹಿನ್ನಡೆ, ಆದ್ರೆ BSY ಮೊಗದಲ್ಲಿ ಮಂದಹಾಸ!

ಕೇರಳದಲ್ಲಿ ಸಿಪಿಎಂ ನೇತೃತ್ವದ ಎಡರಂಗ 3 ಹಾಗೂ ಯುಡಿಎಫ್ 2 ಕ್ಷೇತ್ರಗಳಲ್ಲಿ ಜಯ ದಾಖಲಿಸಿದೆ. ಪಂಜಾಬ್‌ನಲ್ಲಿ ಆಡಳಿತಾರೂಢ ಕಾಂಗ್ರೆಸ್ 3, ಶಿರೋಮಣಿ ಅಕಾಲಿದಳ 1 ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸಿವೆ. ಅಸ್ಸಾಂನಲ್ಲ ಇಆಡಳಿತಾರೂಡ ಬಿಜೆಪಿ 3 ಕ್ಷೇತ್ರಗಳನ್ನು ಬಾಚಿಕೊಂಡಿದೆ.

ಮಹಾರಾಷ್ಟ್ರ-ಹರಿಯಾಣ ಫೈನಲ್ ಫಲಿತಾಂಶ, ಯಾರಿಗೆ ಎಷ್ಟು?

ಮಧ್ಯಪ್ರದೇಶ, ರಾಜಸ್ಥಾನಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯ ಸಾಧಿಸಿದ್ದು, ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಅಭ್ಯರ್ಥಿಗಳು ಜಯ ದಾಖಲಿಸಿದ್ದಾರೆ.