ಆದಿತ್ಯ ಠಾಕ್ರೆ ಗೆದ್ದರು ವರ್ಲಿ: ಬಿಜೆಪಿಗೆ ಉದ್ಧವ್ ಕೇಳಿದರು ಮಾತಾಡಲು ಯಾವಾಗ ಬರ್ಲಿ?
ಮುಂಬೈ ವರ್ಲಿ ಕ್ಷೇತ್ರದಲ್ಲಿ ಜಗಯಭೇರಿ ಬಾರಿಸಿದ ಆದಿತ್ಯ ಠಾಕ್ರೆ| ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಪುತ್ರ ಆದಿತ್ಯ ಠಾಕ್ರೆ | ಚುನಾವಣಾ ಗೆಲುವಿನ ಬಳಿಕ ಪತ್ರಿಕಾಗೋಷ್ಠಿ ಉದ್ಧೇಶಿಸಿ ಮಾತನಾಡಿದ ಆದಿತ್ಯ ಠಾಕ್ರೆ| ತಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನೆತಗೆ ಕೃತಜ್ಞತೆ ಸಲ್ಲಿಸಿದ ಆದಿತ್ಯ ಠಾಕ್ರೆ| 50-50 ಫಾರ್ಮುಲಾ ಅಡಿಯಲ್ಲಿ ಸರ್ಕಾರ ರಚನೆಗೆ ಉದ್ಧವ್ ಠಾಕ್ರೆ ಆಗ್ರಹ|
ಮುಂಬೈ(ಅ.24): ಮಹತ್ವದ ಬೆಳವಣಿಗೆಯೊಂದರಲ್ಲಿ ಮುಂಬೈನ ವರ್ಲಿ ಕ್ಷೇತ್ರದಲ್ಲಿ ಶಿವಸೇನೆ ಅಭ್ಯರ್ಥಿ ಆದಿತ್ಯ ಠಾಕ್ರೆ ಜಯಭೇರಿ ಭಾರಿಸಿದ್ದಾರೆ. ಇದೇ ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿದಿದ್ದ ಆದಿತ್ಯ, ಮೊದಲ ಪ್ರಯತ್ನದಲ್ಲೇ ಗೆಲುವು ದಾಖಲಿಸಿರುವುದು ವಿಶೇಷ.
ಹರಿಯಾಣದ ಕುಮಾರಸ್ವಾಮಿ ಆಗ್ತಾರಾ ದುಷ್ಯಂತ್: ದೋಸ್ತಿ ಬಯಸಿದೆ ಕಾಂಗ್ರೆಸ್!
ಶಿವಸೇನೆ'ಮಹಾ'ಬೇಡಿಕೆ: ಸಾಧ್ಯನಾ ಆದಿತ್ಯ ಠಾಕ್ರೆ ಸಿಎಂ ಆಗೋಕೆ?
ಚುನಾವಣಾ ಗೆಲುವಿನ ಬಳಿಕ ಪತ್ರಿಕಾಗೋಷ್ಠಿ ಉದ್ಧೇಶಿಸಿ ಮಾತನಾಡಿದ ಆದಿತ್ಯ ಠಾಕ್ರೆ, ತಮ್ಮನ್ನು ಗೆಲ್ಲಿಸಿದ ಕ್ಷೇತ್ರದ ಜನೆತಗೆ ಕೃತಜ್ಞತೆ ಸಲ್ಲಿಸಿದರು. ಕ್ಷೇತ್ರದ ಜನರ ಆಶೋತ್ತರಗಳಿಗೆ ಸ್ಪಂದಿಸುವ ಭರವಸೆ ನೀಡಿದರು.
ಹರಿಯಾಣ, ಮಹಾರಾಷ್ಟ್ರ ಸದ್ಯದ ಬಲಾಬಲ: ಇದು ಚುನಾವಣಾ ರಣರಂಗದ ಕುತೂಹಲ!
ನನಗೆ ಸಿಎಂ ಪಟ್ಟ ಕೊಡುವ ಪಕ್ಷಕ್ಕೆ ಬೆಂಬಲ: ಚೌಟಾಲಾ ಒಲಿಸಲು ಬಿಜೆಪಿ-ಕಾಂಗ್ರೆಸ್ ಹಂಬಲ!
ಕಳೆದ 9 ವರ್ಷಗಳ ತಮ್ಮ ಸಾರ್ವಜನಿಕ ಜೀವನದಲ್ಲಿ ಮಾಧ್ಯಮಗಳು ಪ್ರಮುಖ ಪಾತ್ರವಹಿಸಿದ್ದು, ಮುಂದೆಯೂ ತಮಗೆ ಮಾರ್ಗದರ್ಶನ ಮಾಡುವಂತೆ ಆದಿತ್ಯ ಠಾಕ್ರೆ ಮಾದ್ಯಮಗಳಲ್ಲಿ ಮನವಿ ಮಾಡಿದರು.
ಖಟ್ಟರ್ ಕರೆಸಿಕೊಂಡ ಶಾ, ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸುಭಾಷ್ ಭರಾಲಾ ರಾಜೀನಾಮೆ!
ಬಿಎಸ್‌ವೈ ನೀರು ಕೊಡ್ತಿನಿ ಎಂದಿದ್ದ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು!
ಇದಕ್ಕೂ ಮೊದಲು ಮಾತನಾಡಿದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ, ಚುನಾವಣೆಗೂ ಮೊದಲು ಆದ ಒಪ್ಪಂದದಂತೆ 50-50 ಫಾರ್ಮುಲಾ ಮೇಲೆ ಸರ್ಕಾರ ರಚನೆಗೆ ಮುಂದಾಗುವಂತೆ ಬಿಜೆಪಿಗೆ ಆಗ್ರಹಿಸಿದ್ದಾರೆ.
ಆದಿತ್ಯ ಠಾಕ್ರೆಗೆ ಮುಖ್ಯಮಂತ್ರಿ ಪಟ್ಟ ಕೇಳುತ್ತಿರುವ ಶಿವಸೇನೆ, 50-50 ಫಾರ್ಮುಲಾ ಅಡಿಯಲ್ಲಿ ಉಪಮುಖ್ಯಮಂತ್ರಿ ಪಟ್ಟವನ್ನಾದರೂ ದಕ್ಕಿಸಿಕೊಳ್ಳುವುದು ಖಚಿತ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹರಿಯಾಣ ನಮ್ದು ಅಂತಿದ್ದಾರೆ ಖಟ್ಟರ್: ಮೀಟ್ ಆಗಲು ಹೋದರು ಗವರ್ನರ್!