ಶಿವಸೇನೆ'ಮಹಾ'ಬೇಡಿಕೆ: ಸಾಧ್ಯನಾ ಆದಿತ್ಯ ಠಾಕ್ರೆ ಸಿಎಂ ಆಗೋಕೆ?
ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಕಾರ್ಯ ಆರಂಭ| ನಿರೀಕ್ಷೆಯಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಮುನ್ನಡೆ| ಮಹಾರಾಷ್ಟ್ರದಲ್ಲಿ ಏಕಾಂಗಿಯಾಗಿ ಉತ್ತಮ ಪ್ರದರ್ಶನ ತೋರುವಲ್ಲಿ ಬಿಜೆಪಿ ವಿಫಲ| ನಿರೀಕ್ಷೆಗೂ ಮೀರಿ ಉತ್ತಮ ಪ್ರದರ್ಶನ ತೋರುತ್ತಿರುವ ಶಿವಸೇನೆ| ಮಹಾರಾಷ್ಟ್ರ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಬಿಗಿಗೊಳಿಸಿದ ಶಿವಸೇನೆ| ಆದಿತ್ಯ ಠಾಕ್ರೆಗೆ ಮುಖ್ಯಮಂತ್ರಿ ಪಟ್ಟ ಕಟ್ಟಲು ಶಿವಸೇನೆ ಸಿದ್ಧತೆ| ಶಿವಸೇನೆ ಪಟ್ಟಿಗೆ ಹೈರಾಣಾದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ|
ಮುಂಬೈ(ಅ.24): ತೀವ್ರ ಕುತೂಹಲ ಮೂಡಿಸಿರುವ ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆಗೆ ಮತ ಎಣಿಕೆ ಕಾರ್ಯ ಆರಂಭವಾಗಿದೆ. ನಿರೀಕ್ಷೆಯಂತೆ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ ಮುನ್ನಡೆ ಸಾಧಿಸಿದ್ದು, ಹರಿಯಾಣದಲ್ಲಿ ಮಾತ್ರ ಆಡಳಿತಾರೂಢ ಬಿಜೆಪಿ ನಿರೀಕ್ಷಿತ ಪ್ರದರ್ಶನ ತೋರಲು ವಿಫಲವಾದಂತಿದೆ.
ಹರಿಯಾಣದ ಕುಮಾರಸ್ವಾಮಿ ಆಗ್ತಾರಾ ದುಷ್ಯಂತ್: ದೋಸ್ತಿ ಬಯಸಿದೆ ಕಾಂಗ್ರೆಸ್!
ಒಟ್ಟು 288 ಸೀಟುಗಳ ಮಹಾರಾಷ್ಟ್ರ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ-ಶಿವಸೇನೆ ಮೈತ್ರಿಕೂಟ 161 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದು, ಕಾಂಗ್ರೆಸ್-ಎನ್‌ಸಿಪಿ ಕೇವಲ 96 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ. ಇತರರು 27 ಕ್ಷೇತ್ರಗಳಲ್ಲಿ ಮುಂದಿದ್ದಾರೆ.
ಆದರೆ ಮಹಾರಾಷ್ಟ್ರದಲ್ಲಿ ಬಿಜೆಪಿ ನಿರೀಕ್ಷಿತ ಸಾಧನೆ ಮಾಡಲಾಗಿಲ್ಲ. ಸದ್ಯದ ಮಾಹಿತಿ ಪ್ರಕಾರ ಬಿಜೆಪಿ ಕೇವಲ 99 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಮಿತ್ರಪಕ್ಷ ಶಿವಸೇನೆ 60 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಆದಿತ್ಯ ಠಾಕ್ರೆ ಬೆಂಬಲಿಸಿ ನಟ ಸಂಜಯ್ ದತ್ ವಿಡಿಯೋ ಟ್ವೀಟ್!
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಶಿವಸೇನೆ ತನ್ನ ಪಟ್ಟನ್ನು ಮತ್ತಷ್ಟು ಬಿಗಿಗೊಳಿಸಿದೆ. ಶೀವಸೇನೆ ಯುವ ನಾಯಕ ಆದಿತ್ಯ ಠಾಕ್ರೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಬೇಕು ಎಂದು ಮಹಾರಾಷ್ಟ್ರದ ಜನತೆ ಬಯಸುತ್ತಿದ್ದು, ಅವರೇ ಸಿಎಂ ಆಗಲಿದ್ದಾರೆ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಅದರಂತೆ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಕೂಡ ಆದಿತ್ಯ ಠಾಕ್ರೆಗೆ ಪಟ್ಟ ಕಟ್ಟಲು ಉತ್ಸುಕರಾಗಿದ್ದು, ಶಿವಸೇನೆ ಉತ್ತಮ ಪ್ರದರ್ಶನದಿಂದಾಗಿ ಪುತ್ರ ಸಿಎಂ ಆಗುವ ಭರವಸೆಯಲ್ಲಿದ್ದಾರೆ.
ಮಹಾರಾಷ್ಟ್ರದ ಮುಂದಿನ ಮುಖ್ಯಮಂತ್ರಿ ಆದಿತ್ಯ ಠಾಕ್ರೆ?
ಮಹಾರಾಷ್ಟ್ರದಲ್ಲಿ ಉತ್ತಮ ಪ್ರದರ್ಶನ ತೋರುವ ಭರವಸೆಯಲ್ಲಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ತಮ್ಮ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆ ಕಂಡು ನಿರಾಸೆಗೊಂಡಿದ್ದಾರೆ ಎನ್ನಲಾಗಿದೆ.
ಶಿವಸೇನೆ ಮುಖ್ಯಮಂತ್ರಿ ಪಟ್ಟಕ್ಕಾಗಿ ಪಟ್ಟು ಹಿಡಿದಿರುವುದು ಅಮಿತ್ ಶಾ ಅವರಿಗೆ ಮತ್ತಷ್ಟು ಟೆನ್ಶನ್ ಹೆಚ್ಚಲು ಕಾರಣವಾಗಿದೆ. ಇದೇ ವೇಳೆ ಆಡಳಿತಾರೂಢ ಮೈತ್ರಿ ಪಕ್ಷಗಳ ಮುನ್ನಡೆ ಗ್ರಾಫ್ ಇಳಿಕೆಯಾಗುತ್ತಿದ್ದು, ವಿಪಕ್ಷಗಳ ಮೈತ್ರಿಕೂಟದ ಮುನ್ನಡೆ ಗ್ರಾಫ್ ಏರುತ್ತಿದೆ. ಇದೂ ಕೂಡ ಬಿಜೆಪಿಯ ಉದ್ವೇಗವವನ್ನು ಹೆಚ್ಚಿಸಿದೆ.
ಸೀಟು ಹಂಚಿಕೆ ಬಿಕ್ಕಟ್ಟಿನ ಮಧ್ಯೆ ಮತ್ತೊಮ್ಮೆ ನಾನೇ ಎಂದ ಮಾಹಾ ಸಿಎಂ