ಮಹಾರಾಷ್ಟ್ರ ಮತ್ತು ಹರಿಯಾಣ ವಿಧಾನಸಭೆ ಚುನಾವಣಾ ಫಲಿತಾಂಶ ಪ್ರಕಟ/ ಮಹಾರಾಷ್ಟ್ರದಲ್ಲಿ ಬಿಜೆಪಿ-ಶಿವಸೇನೆ ದೋಸ್ತಿಕೂಟ ಅಧಿಕಾರಕ್ಕೆ/ ಹರಿಯಾಣದಲ್ಲಿ ಅತಂತ್ರ ವಿಧಾನಸಭೆ

ಮುಂಬೈ/ಚಂಡೀಘಢ್(ಅ.24): ತೀವ್ರ ಕುತೂಹಲ ಮೂಡಿಸಿದ್ದ ಹರಿಯಾಣ, ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಿದೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆ ಸರ್ಕಾರ ರಚಿಸುವುದು ಪಕ್ಕಾ ಆಗಿದ್ದರೆ ಹರಿಯಾಣದಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗಿದೆ.

ಹಾಗಾದರೆ ಯಾವ ಪಕ್ಷಗಳು ಎಷ್ಟು ಸೀಟು ಪಡೆದುಕೊಂಡಿವೆ? ಇಲ್ಲಿದೆ ಅಂತಿಮ ಲೆಕ್ಕ

ಮಹಾರಾಷ್ಟ್ರಚುನಾವಣಾ ಫಲಿತಾಂಶ- ಒಟ್ಟು 288 ಸ್ಥಾನಗಳು

ಸರಳ ಬಹುಮತ 145 (ಬಿಜೆಪಿ ಮತ್ತು ಶಿವಸೇನೆ ಮೈತ್ರಿಕೂಟ ಸರ್ಕಾರ ರಚಿಸುವುದು ಖಚಿತ)

* ಬಿಜೆಪಿ- 105

*ಶಿವಸೇನೆ- 56

* ಕಾಂಗ್ರೆಸ್-44

* ಎನ್ ಸಿಪಿ- 54

* ಇಂಡಿಪೆಂಡೆಂಟ್ಸ್- 13

* ಆಲ್ ಇಂಡಿಯಾ ಮಜಿಲ್ಸ್ ಇ ಇಥೆದುಲ್ ಮುಸ್ಲಿಮನ್ -2

* ಬಹುಜನ ವಿಕಾಸ್ ಆಗಡಿ- 3

* ಕಮ್ಯೂನಿಸ್ಟ್ ಪಾರ್ಟಿ(ಎಂ)- 1

* ಜನ್ ಸುರಜ್ಯ ಶಕ್ತಿ- 1

* ಕ್ರಾಂತಿಕಾರಿ ಪಾರ್ಟಿ- 1

* ಮಹಾರಾಷ್ಟ್ರ ನವನಿರ್ಮಾಣ ಸೇನಾ- 1

* ಪೆಸಂಟ್ಸ್ ಆಂಡ್ ವರ್ಕರ್ಸ್ ಪಾರ್ಟಿ- 1

* ಪ್ರಹಾರ್ ಜನಶಸಕ್ತಿ ಪಾರ್ಟಿ- 2

* ರಾಷ್ಟ್ರೀಯ ಸಮಾಜ ಪಕ್ಷ- 1

ಸಮಾಜವಾದಿ ಪಾರ್ಟಿ -2

ಸ್ವಾಭಿಮಾನಿ ಪಕ್ಷ-1

ಬೆಜೆಪಿ ಹಿನ್ನಡೆ ಕಂಡರೂ ಬಿಎಸ್ ವೈ ಮುಖದಲ್ಲಿ ಮಂದಹಾಸ

ಹರಿಯಾಣ ವಿಧಾನಸಭಾ ಫಲಿತಾಂಶ- ಒಟ್ಟು 90 ಸ್ಥಾನಗಳು 

ಸರಳ ಬಹುಮತ 46( ಅತಂತ್ರ ವಿಧಾನಸಭೆ ನಿರ್ಮಾಣ) 

*ಬಿಜೆಪಿ-40

* ಕಾಂಗ್ರೆಸ್- 31

ಜನನಾಯಕ್ ಜನತಾ ಪಾರ್ಟಿ(ಜೆಜೆಪಿ)-10

* ಸ್ವತಂತ್ರರು- 7

* ಹರಿಯಾಣ ಲೋಕಹಿತ್ ಪಾರ್ಟಿ-1

* ಇಂಡಿಯನ್ ನ್ಯಾಶನಲ್ ಲೋಕದಳ- 1