ಬಿಎಸ್‌ವೈ ಪ್ರವಾಸಕ್ಕೆ ಗ್ರೀನ್ ಸಿಗ್ನಲ್, ವಿದಾಯ ಹೇಳಿದ ಆಲ್ರೌಂಡರ್; ಆ.30ರ ಟಾಪ್ 10 ಸುದ್ದಿ!
ಗಣೇಶ ಹಬ್ಬದ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ರಾಜ್ಯ ಪ್ರವಾಸ ಮಾಡಲು ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಮೈಸೂರು ಅತ್ಯಾಚಾರ ಆರೋಪಿಗಳು 6 ಅಲ್ಲ 7 ಮಂದಿ ಅನ್ನೋ ಸ್ಫೋಟಕ ಮಾಹಿತಿ ಬಹಿರಂಗವಾಗಿದೆ. ಇತ್ತ ಟೀಂ ಇಂಡಿಯಾ ಆಲ್ರೌಂಡರ್ ವಿದಾಯ ಘೋಷಿಸಿದ್ದಾರೆ. ಶ್ರದ್ಧ ಕಪೂರ್ ಮದುವೆ, ಟೆಸ್ಲಾಗೆ ಆಮದು ಸುಂಕ ವಿನಾಯಿತಿ ಸೇರಿದಂತೆ ಆಗಸ್ಟ್ 30ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.
ಬಿಎಸ್‌ವೈ ಪ್ರವಾಸಕ್ಕೆ ಬಿಜೆಪಿ ಅಡ್ಡಿ ಇಲ್ಲ: ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟನೆ!
ಬರುವ ಗಣೇಶ ಹಬ್ಬದ ಬಳಿಕ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆರಂಭಿಸಲು ಉದ್ದೇಶಿಸಿರುವ ರಾಜ್ಯ ಪ್ರವಾಸಕ್ಕೆ ಪಕ್ಷದಿಂದ ಯಾವುದೇ ರೀತಿಯ ಆಕ್ಷೇಪ ಅಥವಾ ವಿರೋಧ ಇಲ್ಲ ಎಂದು ಬಿಜೆಪಿ ಉಸ್ತುವಾರಿ ಅರುಣ್ ಸಿಂಗ್ ಸ್ಪಷ್ಟಪಡಿಸಿದ್ದಾರೆ.
ಮೈಸೂರು ಗ್ಯಾಂಗ್‌ರೇಪ್: ಅತ್ಯಾಚಾರ ಮಾಡಿದ್ದು 6 ಅಲ್ಲ, 7 ಮಂದಿ!
ಜನಾಕ್ರೋಶಕ್ಕೆ ಕಾರಣವಾಗಿದ್ದ ಮೈಸೂರಿನ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತ ಐದು ಮಂದಿ ಆರೋಪಿಗಳು ಪೊಲೀಸರ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ. ಆ.24ರಂದು ಮೈಸೂರಿನ ಚಾಮುಂಡಿಬೆಟ್ಟದ ತಪ್ಪಲಿನ ಲಲಿತಾದ್ರಿಪುರ ಬಳಿಯ ನಿರ್ಜನ ಪ್ರದೇಶದಲ್ಲಿ ತಾವು ನಡೆಸಿದ ರಾಕ್ಷಸಿ ಕೃತ್ಯದ ವಿವರವನ್ನು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ ಟೀಂ ಇಂಡಿಯಾ ಆಲ್ರೌಂಡರ್..!
ಏಕದಿನ ಕ್ರಿಕೆಟ್‌ನಲ್ಲಿ ಭಾರತ ಪರ ವೈಯುಕ್ತಿಕ ಶ್ರೇಷ್ಠ ಬೌಲಿಂಗ್ ಪ್ರದರ್ಶನದ ದಾಖಲೆ ಹೊಂದಿರುವ ಟೀಂ ಇಂಡಿಯಾ ಆಲ್ರೌಂಡರ್ ಸ್ಟುವರ್ಟ್ ಬಿನ್ನಿ ಅಂತಾರಾಷ್ಟ್ರೀಯ ಹಾಗೂ ಪ್ರಥಮ ದರ್ಜೆ ಕ್ರಿಕೆಟ್‌ಗೆ ದಿಢೀರ್ ವಿದಾಯ ಘೋಷಿಸಿದ್ದಾರೆ. 1983ರ ವಿಶ್ವಕಪ್ ವಿಜೇತ ತಂಡದ ಸದಸ್ಯ ರೋಜರ್ ಬಿನ್ನಿ ಪುತ್ರ ಸ್ಟುವರ್ಟ್ ಬಿನ್ನಿ ದೇಶಿ ಹಾಗೂ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತನ್ನದೇ ಆದ ಛಾಪು ಮೂಡಿಸಿದ್ದಾರೆ. ಭಾರತ ಪರ ಮೂರು ಮಾದರಿಯ ಕ್ರಿಕೆಟ್ ಪಂದ್ಯವನ್ನಾಡಿದ್ದ ಬಿನ್ನ ಕ್ರಿಕೆಟ್ ವೃತ್ತಿ ಬದುಕಿಗೆ ತೆರೆ ಬಿದ್ದಿದೆ.
ಹೋಟೆಲಿನ ಬಾತ್ ರೂಮಿನಲ್ಲಿ ಅವಿತಿದ್ದ ಸೆಲೆಬ್ರಿಟಿ ಡ್ರಗ್ಸ್ ಜಾಲದ ರೂವಾರಿ ಅರೆಸ್ಟ್
ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಜಾಲದ ನಂಟಿನ ಜಾಡು ಹಿಡಿದು ಹೊರಟಿರುವ ಪೊಲೀಸರು ಸೋಮವಾರ ಮಾಡೆಲ್ ಸೋನಿಯಾ ಅಗರ್ವಾಲ್‌ನನ್ನು ಬಂಧಿಸಿದ್ದಾರೆ.
ಶ್ರದ್ಧಾ ಕಪೂರ್ ಮದುವೆನಾ? ಹಿಂಟ್ ನೀಡಿದ್ದಾರೆ ನಟಿಯ ಅಪ್ತರು!
ಬಾಲಿವುಡ್‌ನ ನಟಿ ಶಕ್ತಿ ಕಪೂರ್ ಪುತ್ರಿ ಶ್ರದ್ಧಾ ಕಪೂರ್ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ ಎಂಬ ಸುದ್ದಿ ಇದೆ. ಅಂದಹಾಗೆ, ಶ್ರದ್ಧಾ ತನ್ನ ವೈಯಕ್ತಿಕ ಜೀವನವನ್ನು ಬಹಳ ರಹಸ್ಯವಾಗಿಡುತ್ತಾರೆ. ಇತ್ತೀಚೆಗೆ, ಶ್ರದ್ಧಾ ಶೀಘ್ರದಲ್ಲೇ ಖ್ಯಾತ ಛಾಯಾಗ್ರಾಹಕ ರೋಹನ್ ಶ್ರೇಷ್ಠಾ ಅವರನ್ನು ವಿವಾಹವಾಗಲಿದ್ದಾರೆ ಎಂಬ ವದಂತಿಗಳಿವೆ. ಈ ಬಗ್ಗೆ ಶ್ರದ್ಧಾರ ಅಪ್ತರೂ ಕೂಡು ಸುಳಿವು ನೀಡಿದ್ದಾರೆ.
ಭಾರಿ ವಿರೋಧದ ನಡುವೆ ಟೆಸ್ಲಾಗೆ ಆಮದು ಸುಂಕ ವಿನಾಯಿತಿ ನೀಡಲು ಮುಂದಾದ ಕೇಂದ್ರ!
ಶ್ವದ ಅತೀ ದೊಡ್ಡ ಎಲೆಕ್ಟ್ರಿಕ್ ಕಾರು ತಯಾರಿಕಾ ಕಂಪನಿ ಟೆಸ್ಲಾ ಭಾರತ ಪ್ರವೇಶಕ್ಕೆ ಭರ್ಜರಿ ತಯಾರಿ ನಡೆಯತ್ತಿದೆ. ಇದರ ನಡುವೆ ಟೆಸ್ಲಾ ಕೇಂದ್ರ ಸರ್ಕಾರಕ್ಕೆ ವಿಶೇಷ ಮನವಿ ಮಾಡಿತ್ತು. ಭಾರತದಲ್ಲಿ ಕೈಗೆಟುಕುವ ಬೆಲೆಗೆ ಎಲೆಕ್ಟ್ರಿಕ್ ಕಾರು ಮಾರಾಟಕ್ಕೆ ಆಮದು ಸುಂಕ ಕಡಿತಗೊಳಿಸಬೇಕು ಎಂದಿತ್ತು. ಈ ಮನವಿಗೆ ಭಾರತೀಯ ಕಂಪನಿಗಳಿಂದ ಭಾರಿ ವಿರೋಧ ವ್ಯಕ್ತವಾಗಿತ್ತು. ಆದರೆ ಕೇಂದ್ರ ಸರ್ಕಾರ ಅಮೆರಿಕ ಬ್ರ್ಯಾಂಡ್ ಭಾರತದಲ್ಲಿ ಆರಂಭಕ್ಕೆ ಟೆಸ್ಲಾ ಮನವಿ ಪುರಸ್ಕರಿಸುವ ಸಾಧ್ಯತೆ ಇದೆ ಎಂಬ ಮಾಹಿತಿಗಳು ಲಭ್ಯವಾಗಿದೆ.
ಪ್ಯಾರಾಲಿಂಪಿಕ್ಸ್ ಪದಕ ವಿಜೇತರಿಗೆ ಪ್ರಧಾನಿ ಮೋದಿ ಅಭಿನಂದನೆ
ಟೋಕಿಯೋ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಸೋಮವಾರ(ಆ.30) ಒಂದು ಚಿನ್ನ ಸೇರಿ ಬರೋಬ್ಬರಿ 4 ಪದಕಗಳನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಾಲ್ಕು ಪದಕ ಗೆದ್ದ ಭಾರತೀಯ ಪ್ಯಾರಾಥ್ಲೀಟ್‌ಗಳ ಜತೆ ಪ್ರಧಾನಿ ನರೇಂದ್ರ ಮೋದಿ ಮಾತನಾಡಿ ಅಭಿನಂದನೆ ಸಲ್ಲಿಸಿದ್ದಾರೆ.
ಕೃಷ್ಣ ನಿಂದ ಕಂಸನ ಸಂಹಾರ: ಕೃಷ್ಣಾಷ್ಟಮಿ ಆಚರಣೆ ಹಿಂದಿನ ಆಶಯವೇನು?
ಶಿಷ್ಟರ ರಕ್ಷಣೆ ಮತ್ತು ದುಷ್ಟರ ಹರಣ ಮಾಡಿ, ಮಾನವಕುಲದ ಕಲ್ಯಾಣಕ್ಕಾಗಿ ವಿಷ್ಣುವಿನ ಹತ್ತು ಅವತಾರಗಳಲ್ಲೊಂದಾಗಿ, ಭಾದ್ರಪದ ಮಾಸ ಕೃಷ್ಣ ಪಕ್ಷದ ಅಷ್ಟಮಿಯ ಮಧ್ಯರಾತ್ರಿ ರೋಹಿಣಿ ನಕ್ಷತ್ರದಲ್ಲಿ ವಸುದೇವ, ದೇವಕಿಯರ ಮಗನಾಗಿ ಭೂಮಿಯ ಮೇಲೆ ಅವತರಿಸಿದವನು ಶ್ರಿಕೃಷ್ಣ.
ಮುಳ್ಳು ಹಂದಿಯ ಬೇಟೆಯಾಡಲು ಬಂದ ಚಿರತೆ, ಪ್ರತಿದಾಳಿಗೆ ಹೆದರಿ ಪರಾರಿ!
ಇಲ್ಲೊಂದು ಕಡೆ ಚಿರತೆಯೊಂದು ಮುಳ್ಳು ಹಂದಿಯ ಮೇಲೆ ದಾಳಿ ಮಾಡಿತ್ತು. ಈ ವೇಳೆ ಧೈರ್ಯಗೆಡದ ಮುಳ್ಳು ಹಂದು ತನ್ನ ಮುಳ್ಳುಗಳಿಂದ ತನ್ನನ್ನು ತಾನು ರಕ್ಷಿಸಿಕೊಂಡಿದೆ.