ಪತನದತ್ತ BSY ಸರ್ಕಾರ, ಅಂಬಿ ಮನೆಯಲ್ಲಿ ಯಶ್ ಪುತ್ರಿ ಐರಾ; ಇಲ್ಲಿವೆ ಅ.9ರ ಟಾಪ್ 10 ಸುದ್ದಿ!
ಬಿಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಪತನದತ್ತ ಸಾಗುತ್ತಿದೆಯಾ? ರಾಜ್ಯ ರಾಜಕೀಯದಲ್ಲಿ ಹರಿದಾಡುತ್ತಿರುವ ಭವಿಷ್ಯ BSY ನಿದ್ದೆಗೆಡಿಸಿದೆ. ಹೀಗಾಗಿ ಅನರ್ಹರ ಬಿಕ್ಕಟ್ಟು ಶಮನಕ್ಕೆ ಯಡಿಯೂರಪ್ಪ ರಣತಂತ್ರ ರೂಪಿಸಿದ್ದಾರೆ. ಯಶ್ ಹಾಗೂ ರಾಧಿಕ ಪುತ್ರಿ ಐರಾ ಇದೀಗ ಬೆಂಗಳೂರಿನಲ್ಲಿರುವ ರೆಬೆಲ್ ಸ್ಟಾರ್ ಅೆಂಬರೀಷ್ ಮನೆಗೆ ಭೇಟಿ ನೀಡಿ ಸುದ್ದಿಯಾಗಿದ್ದಾರೆ. ಸಾಕು ನಾಯಿ ಕದ್ದೊಯ್ದ Zomato ಡೆಲಿವರಿ ಬಾಯ್, ಹಾರ್ದಿಕ್ ಪಾಂಡ್ಯಗೆ ಜಹೀರ್ ತಿರುಗೇಟು ಸೇರಿದಂತೆ ಅ.9 ರಂದು ಓದುಗರ ಗಮನಸೆಳೆದ ಟಾಪ್ 10 ಸುದ್ದಿ ಇಲ್ಲಿವೆ.
1) ಶರತ್ ಬಚ್ಚೇಗೌಡ ಸೇರಿ ಟಿಕೆಟ್ ಕೇಳಿದವರಿಗೆಲ್ಲ ದೊಡ್ಡ ದೊಡ್ಡ ಹುದ್ದೆ ಗಿಫ್ಟ್ ಕೊಟ್ಟ BSY
ಅನರ್ಹ ಶಾಸಕರಿಗೆ ತಲೆನೋವಾಗಿದ್ದ ಸಮಸ್ಯೆಗೆ ಸಿಎಂ ಪರಿಹಾರ ನೀಡಿದ್ದಾರೆ. ಟಿಕೆಟ್ ಬೇಕೆಂದು ಗಂಟು ಬಿದ್ದಿದ್ದ ಬಿಜೆಪಿ ನಾಯಕರಿಗೆ ಸಿಎಂ ವಿವಿಧ ಹುದ್ದೆ ನೀಡಿದ್ದಾರೆ. ಮೂವರು ಮಾಜಿ ಶಾಸಕರು ಸೇರಿ 8 ನಾಯಕರಿಗೆ ನಿಗಮ ಮಂಡಳಿ ಹುದ್ದೆ ನೀಡಲಾಗಿದೆ. ಎಂ.ಟಿ.ಬಿ.ನಾಗರಾಜ್ ವಿರುದ್ಧ ಸಿಡಿದೆದ್ದಿದ್ದ ಶರತ್ ಬಚ್ಚೇಗೌಡಗೆ ಅವರಿಗೆ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷಗಿರಿ ನೀಡಲಾಗಿದ್ದು ಡ್ಯಾಮೇಜ್ ಕಂಟ್ರೋಲ್ ಮಾಡಲಾಗಿದೆ.
2) ಸಾಕು ನಾಯಿ ಕದ್ದೊಯ್ದ Zomato ಡೆಲಿವರಿ ಬಾಯ್, ಹಿಂದಿರುಗಿಸು ಅಂದ್ರೆ ಹೀಗನ್ನೋದಾ?
ಸಾಮಾನ್ಯವಾಗಿ ಫುಡ್ ಎಕ್ಸೆಕ್ಯುಟಿವ್ ಮನೆ ಅಥವಾ ಕಚೇರಿಗಳಿಗೆ ಫುಡ್ ಡೆಲಿವರಿ ಮಾಡುತ್ತಾರೆ. ಆದರೆ ಪುಣೆಯಲ್ಲಿ ನಡೆದ ಘಟನೆಯೊಂದು ಬಹುತೇಕ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಹೌದು ಫುಡ್ ಡೆಲಿವರಿ ಮಾಡಲು ಬಂದ ಯುವಕನೊಬ್ಬ ದಂಪತಿಯೊಂದು ಮುದ್ದಿನಿಂದ ಸಾಕಿದ್ದ ನಾಯಿಯನ್ನು ಕದ್ದೊಯ್ದಿದ್ದಾನೆ.
3) ವೋಟರ್ ಐಡಿಗೂ ಇನ್ಮುಂದೆ ಆಧಾರ್ ಲಿಂಕ್?
ಬ್ಯಾಂಕ್ ಖಾತೆ, ಗ್ಯಾಸ್, ಪಾಸ್‌ಪೋರ್ಟ್ ಹಾಗೂ ಪಾನ್ ಕಾರ್ಡ್‌ಗಳಿಗೆ ಆಧಾರ್ ನಂಬರ್ ಜೋಡಿಸುವ ಆದೇಶದ ಬಳಿಕ ಈಗ ಮತದಾನ ಗುರುತಿನ ಚೀಟಿಗೂ ಆಧಾರ್ ಲಿಂಕ್ ಮಾಡುವುದಕ್ಕೆ ಕೇಂದ್ರ ಸರ್ಕಾರ ಮುಂದಾಗಿದೆ. ಮತದಾರ ಪಟ್ಟಿಯಲ್ಲಿ ಹೊಸದಾಗಿ ನಕಲಿ ಹೆಸರು ನೋಂದಾಯಿಸಿಕೊಳ್ಳುವುದನ್ನು ತಡೆಯಲು ಹಾಲಿ ಇರುವ ಹಾಗೂ ಹೊಸ ವೋಟರ್ ಐಡಿಗಳಿಗೆ ಆಧಾರ್ ನಂಬರ್ ಜೋಡಣೆ ಮಾಡಲು ತಯಾರಿ ನಡೆಯತ್ತಿದೆ.
4) ಜೆಡಿಎಸ್‌ನಿಂದ ಇನ್ನಷ್ಟು ಶಾಸಕರು ಹೊರಬರ್ತಾರೆ: ಸಂಚಲನ ಮೂಡಿಸಿದೆ ಬಿಜೆಪಿಗನ ಹೇಳಿಕೆ!
ಜೆಡಿಎಸ್‌ನಿಂದ ಮತ್ತಷ್ಟುಶಾಸಕರು ಕೆಲವೇ ದಿನಗಳಲ್ಲಿ ಹೊರಗೆ ಬರುತ್ತಾರೆ ಎಂದು ಹೇಳುವ ಮೂಲಕ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ಹೊಸ ಬಾಂಬ್ ಸಿಡಿಸಿದ್ದಾರೆ. ಶೆಟ್ಟರ್ ಮಾತಿನ ಬೆನ್ನಲ್ಲೇ ಜೆಡಿಎಸ್ ಪಾಳಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.
5) ಸಿಕ್ಸರ್ OK, ಮುಂದಿನ ಎಸೆತ ಹಾಕಿಲ್ಲ ಯಾಕೆ? ಪಾಂಡ್ಯಗೆ ಜಹೀರ್ ತಿರುಗೇಟು!
ಮಾಜಿ ವೇಗಿ ಜಹೀರ್ ಖಾನ್‌ಗೆ ಹಾರ್ದಿಕ್ ಪಾಂಡ್ಯ ಹೇಳಿದ ಹುಟ್ಟು ಹಬ್ಬದ ಶುಭಾಶಯ ವಿವಾದ ಸೃಷ್ಟಿಸಿತ್ತು. ಪಾಂಡ್ಯ ಭಾರತ ಶ್ರೇಷ್ಠ ವೇಗಿಯನ್ನು ಅವಮಾನಿಸಿದ್ದಾರೆ ಅನ್ನೋ ಮಾತುಗಳು ಕೇಳಿಬಂದಿತ್ತು. ಇದೀಗ ಪಾಂಡ್ಯಗೆ ಜಹೀರ್ ಪ್ರತಿಕ್ರಿಯೆ ನೀಡಿದ್ದಾರೆ.
6) ರೆಬೆಲ್ ಸ್ಟಾರ್ ಮನೆಯಲ್ಲಿ ಅಬ್ಬರಿಸಿದ ಐರಾ!
ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಕಿಡ್ ಪಟ್ಟಿಯಲ್ಲಿ ಈಕೆಯದು ಸ್ಪೇಷಲ್ ಸ್ಥಾನ. ಹುಟ್ಟುವ ಮುನ್ನವೇ ಅಂಬರೀಶ್ ತಾತನಿಂದ ವಿಶೇಷ ತೊಟ್ಟಿಲನ್ನು ಗಿಫ್ಟ್ ಆಗಿ ಪಡೆದುಕೊಂಡ ಬೇಬಿ YR ನಿನ್ನೆ (ಅಕ್ಟೋಬರ್ 8ರಂದು) ಯಶ್ ಹಾಗೂ ರಾಧಿಕಾರೊಂದಿಗೆ ಮಂಡ್ಯ ಸಂಸದೆ ಸುಮಲತಾರನ್ನು ಮೊದಲ ಸಲ ಬೆಂಗಳೂರಿನ ಮನೆಯಲ್ಲಿ ಭೇಟಿಯಾಗಿದ್ದಾಳೆ.
7) ಅಭಿನಯ ಚಕ್ರವರ್ತಿಯನ್ನೇ ಖಳನಾಯಕ ಮಾಡಿದ ಸಲ್ಮಾನ್ : ದಬಾಂಗ್-3 ಲುಕ್!
ಸಲ್ಮಾನ್ ಖಾನ್ ನಟನೆಯ 'ದಬಾಂಗ್-3' ಚಿತ್ರದಲ್ಲಿ ಖಳನಾಯಕನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಸುದೀಪ್ ಫಸ್ಟ್ ಲುಕ್ ಅನ್ನು ಸಲ್ಮಾನ್ ಖಾನ್ ರಿವೀಲ್ ಮಾಡಿದ್ದಾರೆ. ಕಿಚ್ಚ ಸುದೀಪ್ ಫಸ್ಟ್ ಲುಕ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
8) '6 ತಿಂಗಳಲ್ಲಿ ಯಡಿಯೂರಪ್ಪ ಸರ್ಕಾರ ಪತನದ ಭವಿಷ್ಯ’
ಕರ್ನಾಟಕ ನೆರೆ ಪರಿಹಾರಕ್ಕೇ ಕೇಂದ್ರ ಸ್ಪಂದಿಸಿದ ರೀತಿ, ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಪರಿಹಾರ ತರುವಲ್ಲಿ ವಿಫಲ ಸೇರಿದಂತೆ ಹಲವು ವಿಚಾರಗಳಿಂದ ಕರ್ನಾಟಕದ ಬಿಜೆಪಿ ಸರ್ಕಾರ ಟೀಕೆಗೆ ಗುರಿಯಾಗಿದೆ. ಇದರ ಬೆನ್ನಲ್ಲೇ ಬಿಜೆಪಿ ಮುಖಂಡ ಬಿ ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಇನ್ನಾರು ತಿಂಗಳಲ್ಲಿ ಪತನವಾಗಲಿದೆ ಎಂದು ಭವಿಷ್ಯ ನುಡಿಯಲಾಗಿದೆ.
9) ಹೆಚ್ಚು ಮೈಲೇಜ್, ಕಡಿಮೆ ಬೆಲೆ: ಟಾಟಾ ಬಿಡುಗಡೆ ಮಾಡಿದೆ ಟಾಟಾ ಟಿಗೋರ್!
ಟಾಟಾ ಟಿಗೋರ್ ಎಲೆಕ್ಟ್ರಿಕ್ ಕಾರು ಹೆಚ್ಚುವರಿ ಫೀಚರ್ಸ್‌ನೊಂದಿಗೆ ಬಿಡುಗಡೆಯಾಗಿದೆ. ಭಾರತದ ಲಭ್ಯವಿರುವ ಕಡಿಮೆ ಬೆಲೆಯ ಸೆಡಾನ್ ಎಲೆಕ್ಟ್ರಿಕ್ ಕಾರು ಅನ್ನೋ ಹೆಗ್ಗಳಿಕೆಗೆ ಟಿಗೋರ್ ಪಾತ್ರವಾಗಿದೆ. ಟಿಗೋರ್ ಎಲೆಕ್ಟ್ರಿಕ್ ಕಾರಿನ ಹೆಚ್ಚಿನ ವಿವರ ಇಲ್ಲಿದೆ.
10) 48 ಗಂಟೆಯಲ್ಲ, ನಾಲ್ಕು ದಿನವಾದ್ರೂ ಸರಿ ಹುಲಿ ಕೊಲ್ಬೇಡಿ: ಅರಣ್ಯ ಸಚಿವರ ಆದೇಶ!...
ಚೌಡಹಳ್ಳಿಯ ಬಂಡೀಪುರ ಹುಲಿ ಯೋಜನೆಗೆ ಸೇರಿದ ಗೋಪಾಲಸ್ವಾಮಿ ಬೆಟ್ಟದ ವಲಯದಂಚಿನ ಮಹಾಲಿಂಗಶೆಟ್ಟರ ಜಮೀನಿನ ಬಳಿಕ ದನ ಮೇಯುಸುತ್ತಿದ್ದಾತನ ಮೇಲೆ ಹುಲಿ ದಾಳಿ ನಡೆದಿದ್ದು, ಇದರಿಂದ ಬೆಚ್ಚಿ ಬಿದ್ದ ಗ್ರಾಮಸ್ಥರು ಹುಲಿಯನ್ನು ಕೊಲ್ಲುವಂತೆ ಒತ್ತಾಯಿಸಿದ್ದರು. ಇದೀಗ ಅರಣ್ಯ ಸಚಿವರು ಹುಲಿ ಕೊಲ್ಲದಂತೆ ಆದೇಶ ನೀಡಿದ್ದಾರೆ.