ಶರತ್ ಬಚ್ಚೇಗೌಡ ಸೇರಿ ಟಿಕೆಟ್ ಕೇಳಿದವರಿಗೆಲ್ಲ ದೊಡ್ಡ ದೊಡ್ಡ ಹುದ್ದೆ ಗಿಫ್ಟ್ ಕೊಟ್ಟ BSY

ಅನರ್ಹರ ಲೈನ್ ಕ್ಲೀಯರ್? ಬಿಜೆಪಿ ಟಿಕೆಟ್ ಕೇಳಿದ್ದವರಿಗೆ ನಿಗಮ ಮಂಡಳಿ ಗಿಫ್ಟ್/ ಡ್ಯಾಮೇಜ್ ಕಂಟ್ರೋಲ್ ಗೆ  ಬಿಎಸ್ ವೈ ಸ್ಟೆಪ್

BJP unhappy leaders got charaim post of Corporation board

ಬೆಂಗಳೂರು[ಅ. 09]   ಅನರ್ಹ ಶಾಸಕರಿಗೆ ತಲೆನೋವಾಗಿದ್ದ ಸಮಸ್ಯೆಗೆ ಸಿಎಂ ಪರಿಹಾರ ನೀಡಿದ್ದಾರೆ. ಟಿಕೆಟ್ ಬೇಕೆಂದು ಗಂಟು ಬಿದ್ದಿದ್ದ ಬಿಜೆಪಿ ನಾಯಕರಿಗೆ ಸಿಎಂ ವಿವಿಧ ಹುದ್ದೆ ನೀಡಿದ್ದಾರೆ.

ಮೂವರು ಮಾಜಿ ಶಾಸಕರು ಸೇರಿ 8 ನಾಯಕರಿಗೆ ನಿಗಮ ಮಂಡಳಿ ಹುದ್ದೆ ನೀಡಲಾಗಿದೆ. ಎಂ.ಟಿ.ಬಿ.ನಾಗರಾಜ್ ವಿರುದ್ಧ ಸಿಡಿದೆದ್ದಿದ್ದ ಶರತ್ ಬಚ್ಚೇಗೌಡಗೆ ಅವರಿಗೆ ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷಗಿರಿ ನೀಡಲಾಗಿದ್ದು ಡ್ಯಾಮೇಜ್ ಕಂಟ್ರೋಲ್ ಮಾಡಲಾಗಿದೆ.

ಇಬ್ಬರು ಚಾಡಿಕೋರ ಕೇಂದ್ರ ಸಚಿವರಿಂದ ಬಿಎಸ್ ವೈ ಮುಗಿಸಲು ಯತ್ನ

ಗೋಕಾಕ್ ಮೂಲದ ಅಶೋಕ್ ಪೂಜಾರಿಗೂ ಹುದ್ದೆ ಭಾಭ್ಯ ಸಿಕ್ಕಿದೆ. ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷರಾಗಿ ನೇಮಕ ಮಾಡಲಾಗಿದೆ. ರಮೇಶ್ ಜಾರಕಿಹೊಳಿ ವಿರುದ್ಧ ಕಳೆದ ಬಾರಿ ಸೋತಿದ್ದ ಪೂಜಾರಿ ಈ ಬಾರಿ ಸ್ಪರ್ಧೆ ಮಾಡಲಿದ್ದಾರೆ ಎನ್ನುವ ಮಾತು ಕೆಳಿ ಬಂದಿತ್ತು.

"

ಹಿರೇಕೆರೂರು ಮಾಜಿ ಶಾಸಕ ಬಣಕಾರ್ ಗೆ ಹುದ್ದೆ ಭಾಗ್ಯ ಒಲಿದು ಬಂದಿದೆ. ಕೃಷಿ ಉತ್ಪನ್ನ ಹಾಗೂ ಸಂಸ್ಕರಣಾ ನಿಗಮದ ಅಧ್ಯಕ್ಷ ಹುದ್ದೆ ನೀಡಲಾಗಿದ್ದು ಬಿಜೆಪಿ ಭಿನ್ನರ ಬೆಂಕಿ ಹಾರಿಸಲು ಯಡಿಯೂರಪ್ಪ ಯತ್ನ ನಡೆಸಿರುವುದು ಸ್ಪಷ್ಟವಾಗಿದೆ.

ಕಾಗವಾಡ ಕ್ಷೇತ್ರದ ಮಾಜಿ ಶಾಸಕ ರಾಜು ಕಾಗೆ ಅವರನ್ನು ಬೆಳಗಾವಿ ಭಾಗದ ಕಾಡಾ ಯೋಜನೆ ಅಧ್ಯಕ್ಷರಾಗಿ ನೇಮಕ  ಮಾಡಲಾಗಿದೆ. ಅಚ್ಚುಕಟ್ಟು ಪ್ರದೇಶಾಭಿವೃದ್ಧಿ (ಕಾಡಾ) ಯೋಜನೆ ಅಧ್ಯಕ್ಷತೆ ನೀಡಲಾಗಿದೆ.

ಅಕ್ಟೋಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;

Latest Videos
Follow Us:
Download App:
  • android
  • ios