ಪುಣೆ[ಅ.09]: ಸಾಮಾನ್ಯವಾಗಿ ಫುಡ್ ಎಕ್ಸೆಕ್ಯುಟಿವ್ ಮನೆ ಅಥವಾ ಕಚೇರಿಗಳಿಗೆ ಫುಡ್ ಡೆಲಿವರಿ ಮಾಡುತ್ತಾರೆ. ಆದರೆ ಪುಣೆಯಲ್ಲಿ ನಡೆದ ಘಟನೆಯೊಂದು ಬಹುತೇಕ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಹೌದು ಫುಡ್ ಡೆಲಿವರಿ ಮಾಡಲು ಬಂದ ಯುವಕನೊಬ್ಬ ದಂಪತಿಯೊಂದು ಮುದ್ದಿನಿಂದ ಸಾಕಿದ್ದ ನಾಯಿಯನ್ನು ಕದ್ದೊಯ್ದಿದ್ದಾನೆ.

ಟ್ವಿಟರ್ ಬಳಕೆದಾರರದ ವಂದನಾ ಶಾ ಈ ವಿಚಿತ್ರ ಘಟನೆ ಕುರಿತು ಟ್ವೀಟ್ ಮಾಡಿದ್ದಾರೆ. ಸೋಮವಾರ ಮಧ್ಯಾಹ್ನ ತಾವು ಸಾಕಿದ್ದ 'ಡೋಟ್ಟು' ಕಾರ್ವೋ ರೋಡ್ ನ ತಮ್ಮ ಮನೆಯಿಂದ ನಾಪತ್ತೆಯಾಗಿರುವುದನ್ನು ಕಂಡು ಶಾಕ್ ಅಗಿದ್ದಾರೆ. ಸಿಸಿಟಿವಿ ಪರಿಶೀಲಿಸಿದಾಗ ಕೊನೆಯ ಬಾರಿ ಆ ಸಾಕು ನಾಯಿ ಮನೆ ಕಾಂಪೌಂಡ್ ಬಳಿ ಆಡುತ್ತಿರುವುದು ಗಮನಕ್ಕೆ ಬಂದಿದೆ.

ಮಾನವೀಯತೆ ಮಾತನಾಡಿದ್ದ Zomato: ಮನುಷ್ಯರನ್ನೇ ಹೊರ ದಬ್ಬಿದ್ದೇಕೋ?

ತುಂಬಾ ಹೊತ್ತು ಕಾದರೂ ನಾಯಿ ಮರಳದಿರುವುದನ್ನು ಕಂಡ ಅವರು ಆಸುಪಾಸಿನ ಮನೆಯವರಲ್ಲಿ ಈ ಕುರಿತು ಕೇಳಲಾರಂಭಿಸಿದ್ದಾರೆ. ಆದರೆ ಈ ಕುರಿತು ಸುಳಿವು ಸಿಕ್ಕಿಲ್ಲ. ಪೊಲೀಸ್ ಠಾಣೆಯಲ್ಲಿ ಈ ಕುರಿತು ದೂರು ನೀಡಿದಾಗ ಹುಡುಕಿ ಕೊಡುತ್ತೇವೆಂಬ ಭರವಸೆ ನೀಡಿದ್ದಾರೆ. 

ಹೀಗಿರುವಾಗ ವಂದನಾ ತಮ್ಮ ಮನೆ ಬಳಿ ಇರುವ ಫುಡ್ ಔಟ್ ಲೆಟ್ ನಲ್ಲಿ ಈ ಕುರಿತು ವಿಚಾರಿಸಿದ್ದಾರೆ. ಈ ವೇಳೆ ಅಲ್ಲಿದ್ದ ಓರ್ವ ಯುವಕ ನಾಯಿಯ ಗುರುತು ಹಿಡಿದಿದ್ದು, ಇದನ್ನು ತನ್ನ ಗೆಳೆಯ ತನ್ನೊಂದಿಗೆ ಕರೆದೊಯ್ದಿರುವುದಾಗಿ ತಿಳಿಸಿದ್ದಾನೆ.

ಮುಸ್ಲಿಂ ಬೇಡ, ಹಿಂದೂ ಡೆಲಿವರಿ ಬಾಯ್ ಕಳ್ಸಿ ಎಂದ ಗ್ರಾಹಕ: Zomato ಉತ್ತರ ಮನಮೋಹಕ!

ವಿಚಾರಣೆ ಮತ್ತಷ್ಟು ಮುಂದುವರೆಸಿದಾಗ ನಾಯಿ ಕದ್ದೊಯ್ದಾತ ಫುಡ್ ಡೆಲಿವರಿ ಸಂಸ್ಥೆ Zomato ಉದ್ಯೋಗಿಯಾಗಿದ್ದು, ಆತನ ಹೆಸರು ತುಷಾರ್ ಎಂದು ತಿಳಿದು ಬಂದಿದೆ. ಕೂಡಲೇ ವಂದನಾ ಆ ಯುವಕನಿಂದ ತುಷಾರ್ ನಂಬರ್ ಪಡೆದು ಕರೆ ಮಾಡಿ, ನಾಯಿ ಕುರಿತು ವಿಚಾರಿಸಿದ್ದಾರೆ. ಈ ವೇಳೆ ತುಷಾರ್ ತಾನು ನಾಯಿ ಕೊಂಡೊಯ್ದಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ ಹಿಂದಿರುಗಿಸುವ ವಿಚಾರ ಬಂದಾಗ ಮಾತ್ರ ತಾನದನ್ನು ತನ್ನೂರಿಗೆ ಕಳುಹಿಸಿಕೊಟ್ಟಿರುವುದಾಗಿ ನೆಪ ಕೊಟ್ಟಿದ್ದಾನೆ.

ಹೀಗಿರುವಾಗ ವಂದನಾ ನಾಯಿಯನ್ನು ಹಿಂದಿರುಗಿಸಿದರೆ ಹಣ ನೀಡುವುದಾಗಿಯೂ ತಿಳಿಸಿದ್ದಾರೆ. ಆದರೆ ತುಷಾರ್ ಮಾತ್ರ ನೆಪ ನೀಡಿದ್ದಾನೆ. ಇದಾದ ಕೆಲವೇ ಕ್ಷಣಗಳಲ್ಲಿ ಆತನ ಫೋನ್ ಸ್ವಿಚ್ ಆಫ್ ಆಗಿದೆ. ಹೀಗಾಗಿ ಮಹಿಳೆ ತನ್ನ ನಾಯಿ ಹಿಂದಿರುಗಿಸುವಂತೆ Zomato ಮೊರೆ ಹೋಗಿದ್ದಾಳೆ.

ಒಮ್ಮೊಮ್ಮೆ ಮನೆಯೂಟ ಮಾಡಿ: Zomato ಟ್ವೀಟ್ ಮಾಡಿದೆ ಮೋಡಿ!

ವಂದನಾರ ಈ ಮನವಿಗೆ Zomato ಕೂಡಲೇ ಪ್ರತಿಕ್ರಿಯಿಸುತ್ತಾ 'ಇಂತಹ ವರ್ತನೆ ನಿಜಕ್ಕೂ ಒಪ್ಪುವಂತಹದ್ದಲ್ಲ. ದಯವಿಟ್ಟು ನಿಮ್ಮ ವಿಳಾಸ ಅಥವಾ ಡೆಲಿವರಿ ಡಿಟೈಲ್ಸ್ ಕಳುಹಿಸಿಕೊಡಿ. ನಮ್ಮ ತಂಡದ ಯಾರಾದರೂ ಓರ್ವ ಸದಸ್ಯ ನಿಮ್ಮನ್ನು ಶೀಘ್ರದಲ್ಲಿ ಸಂಪರ್ಕಿಸುತ್ತಾರೆ' ಎಂದಿದೆ.

ವಿಶೇಷ ಚೇತನ Zomato ಉದ್ಯೋಗಿಗೆ ಸಿಕ್ತು ಎಲೆಕ್ಟ್ರಿಕ್ ವಾಹನ!

ಅಕ್ಟೋಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;