ಕನ್ನಡ ಚಿತ್ರರಂಗವನ್ನು ಎತ್ತರಕ್ಕೆ ಕರೆದೊಯುವುದರಲ್ಲಿ ಈ ಸ್ಟಾರ್‌ ನಟರುಗಳ ಪಾಲು ದೊಡ್ಡದಿದೆ. ಕೆಜಿಎಫ್‌ ಚಿತ್ರದಿಂದ ಶುರುವಾದ ಕ್ರೇಜ್‌ ಕುರುಕ್ಷೇತ್ರ, ಪೈಲ್ವಾನ್ ಹೀಗೆ ಸಾಲು ಸಾಲು ಚಿತ್ರಗಳು ಲಿಸ್ಟ್‌ ಸೇರಿಕೊಳ್ಳುತ್ತಿದೆ. ಬಿಗ್‌ ಬಜೆಟ್‌ ಸಿನಿಮಾ ಮಾಡುತ್ತಾ ಬ್ಲಾಕ್‌ ಬಸ್ಟರ್ ಹಿಟ್‌ ಕೋಡುತ್ತಿರವ ನಟರು ಬೇರೆ ಭಾಷೆಯಲ್ಲೂ ನಟಿಸುತ್ತಿದ್ದಾರೆ.

ಬಿಗ್ ಬಾಸ್ ಕಿಚ್ಚ ಸುದೀಪ್ ಸಂಭಾವನೆ ರಿವೀಲ್!

ಹೌದು! 'ಈಗ' ಚಿತ್ರದ ನಂತರ 'ಸೈರಾ ನರಸಿಂಹ ರೆಡ್ಡಿ'ಯಲ್ಲಿ ಕಾಣಿಸಿಕೊಂಡ ಸುದೀಪ್ ಸದ್ಯಕ್ಕೆ ಬಾಲಿವುಡ್‌ ಬ್ಯಾಡ್‌ ಬಾಯ್ ಸಲ್ಮಾನ್‌ ಖಾನ್ ಅಭಿನಯದ 'ದಬಾಂಗ್‌-3' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಕೆಲ ದಿನಗಳ ಹಿಂದೆ ಸಲ್ಮಾನ್ ಖಾನ್ ತಮ್ಮ ಟ್ಟಿಟರ್ ಖಾತೆಯಲ್ಲಿ ಸುದೀಪ್ ಖಳನಾಯಕನಾಗಿ ಕಾಣಿಸಿಕೊಳ್ಳುತ್ತಿರುವ ಬಗ್ಗೆ ಹಂಚಿಕೊಂಡಿದ್ದರು.

'ಖಳನಾಯಕ ಎಷ್ಟು ಶಕ್ತಿಶಾಲಿ ಆಗಿರುತ್ತಾನೋ, ಅವನಿಗೆ ಟಕ್ಕರ್ ಕೊಡುವುದರಲ್ಲಿರುವ ಮಜಾನೆ ಬೇರೆ' ಎಂದು ಬರೆದುಕೊಂಡು ಸುದೀಪ್‌ ಲುಕ್‌ ರಿವೀಲ್‌ ಮಾಡಿದ್ದಾರೆ. ಈ ಚಿತ್ರದಲ್ಲಿ ಬಲ್ಲಿ ಸಿಂಗ್‌ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಕಿಚ್ಚಾ ಪೊಸ್ಟರ್‌ ಲುಕ್‌ ಖಡಕ್ ಆಗಿದೆ.

 

ಸಲ್ಮಾನ್‌ ಟ್ಟೀಟ್‌ಗೆ ಸುದೀಪ್‌ ನೀಡಿದ ಪ್ರತಿಕ್ರಿಯೆ ಅಭಿಮಾನಿಗಳ ಮನ ಗೆದ್ದಿದೆ, 'ಇದು ಎಂತಹ ಸಂದರ್ಭ ಅಂದ್ರೆ ವಿಲನ್‌ಗೆ ಹೀರೋ ಮೇಲೆ ಲವ್‌ ಆಗೋಗಿದೆ, ಇಲ್ಲಿ ಜಗಳ ಆಗೋ ಮಾತೆ ಇಲ್ಲ, ನಿಮ್ಮೊಂದಿಗೆ ಕೆಲಸ ಮಾಡಿದ್ದು ಒಂದು ವಂಡರ್‌ಫುಲ್‌ ಎಕ್ಸ್‌ಪೀರಿಯನ್ಸ್‌, ಎಲ್ಲ ಕ್ಷಣಗಳನ್ನು ಟ್ರೆಷರ್‌ ಮಾಡಬೇಕು. ಥ್ಯಾಂಕ್‌ ಯು ಸರ್ ' ಎಂದು ಮರು ಪ್ರತಿಕ್ರಿಯೆ ನೀಡಿದ್ದಾರೆ.

 

ಅಕ್ಟೋಬರ್ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ;