Asianet Suvarna News Asianet Suvarna News

ಚೀನಿ ವಸ್ತು ಬಹಿಷ್ಕರಿಸಲು ಕರೆ, ಭಾನುವಾರ ಲಾಕ್‌ಡೌನ್‌ಗೆ ತೆರೆ; ಮೇ.30ರ ಟಾಪ್ 10 ಸುದ್ದಿ!

ರಾಜ್ಯದಲ್ಲಿ ಭಾನುವಾರ ಹೇರಲಾಗಿದ್ದ ಲಾಕ್‌ಡೌನ್ ನಿಯಮ ಸಡಿಲಿಕೆ ಮಾಡಲಾಗಿದೆ. ಆದರೆ ದೇಶದಲ್ಲಿ ಇಂದು ದಾಖಲೆಯ ಕೊರೋನಾ ಕೇಸ್ ದೃಢಪಟ್ಟಿದೆ. ಒಂದೇ ದಿನ 7720 ಜನಕ್ಕೆ ವೈರಸ್‌ ತಗುಲಿದೆ. ಇದರ ಬೆನ್ನಲ್ಲೇ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಏರಿಕೆಯಾಗಿದೆ. ವಿಶ್ವ ಆರೋಗ್ಯ ಸಂಸ್ಥೆ ಹೊಸ ರೂಪ ನೀಡಲು ಭಾರತದ ಜೊತೆ ಕೈಜೋಡಿಸಲು ಇಟಲಿ ಸಜ್ಜಾಗಿದೆ. ಟಿಕ್‌ಟಾಕ್ ಡಿಲೀಟ್ ಮಾಡಿದ ನಟ ಮಿಲಿಂದ್ ಸೋಮನ್, ಆಲಿಯಾ ಬ್ರೇಕ್ ಅಪ್ ಸ್ಟೋರಿ ಸೇರಿದಂತೆ ಮೇ.30ರ ಟಾಪ್ 10 ಸುದ್ದಿ ಇಲ್ಲಿವೆ.

Boycott china products to Karnataka Lockdown top 10 news of may 30
Author
Bengaluru, First Published May 30, 2020, 5:17 PM IST
  • Facebook
  • Twitter
  • Whatsapp

WHO ಬೇಕಿದೆ ಹೊಸ ರೂಪ; ಪ್ರಧಾನಿ ಮೋದಿ ಬೆಂಬಲಿಸಿದ ಇಟಲಿ!

ಕೊರೋನಾ ವೈರಸ್‌ಗೆ ತೀವ್ರವಾಗಿ ನಲುಗಿದೆ ದೇಶ ಇಟಲಿ. ಇದೀಗ ನಿಧಾನವಾಗಿ ಚೇತರಿಕೆ ಕಾಣುತ್ತಿದೆ. ಇದರ ಬೆನ್ನಲ್ಲೇ  ಇಟಲಿ ಕೊರೋನಾ ವೈರಸ್ ಹುಟ್ಟಿನ ಕುರಿತು ಸ್ವತಂತ್ರ ತನಿಖೆಗೆ ಮುಂದಾಗಿದೆ. ಇದರೊಂದಿಗೆ ಪ್ರಧಾನಿ ಮೋದಿ ಜೊತೆ ಸೇರಿ ಆರ್ಥಿಕತೆ ಬಲಪಡಿಸಲು ಮಹತ್ವದ ಹೆಜ್ಜೆ ಇಡಲು ನಿರ್ಧರಿಸಿದೆ. ಈ ಕುರಿತು ಯುರೋಪಿಯನ್ ವಿದೇಶಾಂಗ ಸಚಿವ ವಿನ್ಸೆಂಝೋ ಅಮೆಂಡೋಲಾ ಮಾತುಗಳು ಇಲ್ಲಿವೆ.

ವಾಹನ ಚಾಲಕರಿಗೆ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆ ಶಾಕ್!

ಲಾಕ್‌ಡೌನ್‌ ತೆರವಾದ ಬಳಿಕ, ಇಲ್ಲವೇ ದೈನಂದಿನ ದರ ಪರಿಷ್ಕರಣೆ ಆರಂಭವಾದ ಬಳಿಕ ಪೆಟ್ರೋಲ್‌ ಹಾಗೂ ಡೀಸೆಲ್‌ ದರ ಏರಿಕೆ| ಪೆಟ್ರೋಲ್‌ ಹಾಗೂ ಡೀಸೆಲ್‌ ದರಗಳು 4ರಿಂದ 5 ರು.ನಷ್ಟುಏರಿಕೆ 

ಈ ಭಾನುವಾರ ರಾಜ್ಯದಲ್ಲಿ ಕಂಪ್ಲೀಟ್‌ ಲಾಕ್ ಡೌನ್ ಇಲ್ಲ!...

ರಜಾ ದಿನದಂದು ರಾಜ್ಯದ ಜನತೆಯ ಹಿತದೃಷ್ಟಿಯಿಂದ ಹಾಗೂ ಸಾರ್ವಜನಿಕರಿಗೆ ತೊಂದರೆ ಆಗಬಾರದೆಂದು ಈ ನಿಯಮವನ್ನೂ ಸಡಿಲಿಸಿದೆ. ಸಿಎಂ ಕಚೇರಿಯಿಂದ ಈ ಸಂಬಂಧ ಪ್ರಕಟಣೆ ಹೊರಡಿಸಲಾಗಿದ್ದು,  ಭಾನುವಾರ ಸಂಪೂರ್ಣ ಲಾಕ್​ಡೌನ್ ಇರುವುದಿಲ್ಲ ಎಂದು ತಿಳಿಸಲಾಗಿದೆ.

ವಿಮಾನ ಮೂಲಕ 177 ಯುವತಿಯರ ತವರುನಾಡಿಗೆ ಕಳಿಸಿದ ಸೂದ್‌!

ಲಾಕ್‌ಡೌನ್‌ನಿಂದ ಮುಂಬೈನಲ್ಲಿ ಸಿಲುಕಿದ್ದ ಕರ್ನಾಟಕದ ಕಲಬುರಗಿ, ಬಿಹಾರ, ಜಾರ್ಖಂಡ್‌ ಹಾಗೂ ಉತ್ತರ ಪ್ರದೇಶದ ಕಾರ್ಮಿಕರನ್ನು ಅವರ ತವರಿಗೆ ಕಳಿಸಲು ಸಾರಿಗೆ ವ್ಯವಸ್ಥೆ ಮಾಡಿದ್ದ ಬಾಲಿವುಡ್‌ ನಟ ಸೋನು ಸೂದ್‌ ಈಗ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.


ದೇಶದಲ್ಲಿ ಒಂದೇ ದಿನ ದಾಖಲೆಯ 7720 ಜನಕ್ಕೆ ವೈರಸ್‌!

ನಾಲ್ಕನೇ ಹಂತದ ಲಾಕ್‌ಡೌನ್‌ ಮುಕ್ತಾಯಗೊಳ್ಳಲು ಕೇವಲ ಒಂದು ದಿನ ಬಾಕಿ ಇರುವಾಗಲೇ ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆ ದಾಖಲೆ ಪ್ರಮಾಣದಲ್ಲಿ ಏರಿಕೆಯಾಗಲು ಆರಂಭಿಸಿದೆ. ಗುರುವಾರ ದಾಖಲೆಯ 7135 ಮಂದಿಗೆ ಸೋಂಕು ಕಾಣಿಸಿಕೊಂಡಿತ್ತು. ಶುಕ್ರವಾರ ಈ ದಾಖಲೆ ಕೂಡ ಭಗ್ನಗೊಂಡಿದ್ದು 7720 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಇದೇ ವೇಳೆ 151 ಮಂದಿ ಕೊರೋನಾದಿಂದ ಸಾವಿಗೀಡಾಗಿದ್ದಾರೆ.

ಆಲಿಯಾ ಭಟ್‌ ಸಿದ್ಧಾರ್ಥ್‌ ಮಲ್ಹೋತ್ರಾ ದೂರವಾಗಿದ್ದೇಕೆ?

ಸ್ಟೂಡೆಂಟ್ ಅಫ್‌ ದಿ ಇಯರ್‌ ಸಿನಿಮಾದ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟು ಜನಪ್ರಿಯವಾದವರೂ ಆಲಿಯಾ ಭಟ್‌ ಹಾಗೂ ಸಿದ್ಧಾರ್ಥ್‌ ಮಲ್ಹೋತ್ರಾ. ಇಬ್ಬರ ಅನ್‌ಸ್ಕ್ರೀನ್‌ ಕೆಮಿಸ್ಟ್ರಿಗೆ ಫಿದಾ ಆದ ಪ್ಯಾನ್ಸ್‌ ನಿಜ ಜೀವನದಲ್ಲೂ ಇವರು ಜೋಡಿಯಾಗಲಿ ಎಂದು ಹಾರೈಸಿದ್ದರು. ನಂತರ ಇದು ನಿಜವಾಗಿತ್ತು ಕೂಡ. ಆಲಿಯಾ ಸಿದ್ಧಾರ್ಥ್‌ ಡೇಟಿಂಗ್‌  ಹೆಡ್‌ಲೈನ್‌ ನ್ಯೂಸ್‌ ಆಗಿತ್ತು ಕೆಲವು ದಿನಗಳು. ಆದರೆ ಈ ರಿಲೇಷನ್‌ಶಿಪ್‌ ವರ್ಕೌಟ್‌ ಆಗಲಿಲ್ಲ. ದೀರ್ಘ ಕಾಲದ ನಂತರ ಸಿದ್ಧಾರ್ಥ್‌ ಬ್ರೇಕ್‌ಅಪ್‌ ಬಗ್ಗೆ ಮಾತಾನಾಡಿದ್ದಾರೆ. 

ಕೊರೋನಾ ವೈರಸ್: ಜೂನ್ 30ರ ವರೆಗೆ ಫ್ರೀ ಸರ್ವೀಸ್ ವಿಸ್ತರಿಸಿದ ಮಾರುತಿ ಸುಜುಕಿ!

ಕೊರೋನಾ ವೈರಸ್ ಹಾಗೂ ಲಾಕ್‌ಡೌನ್ ಕಾರಣ ಮಾರುತಿ ಸುಜುಕಿ ಗ್ರಾಹಕರಿಗೆ ಹಲವು ಆಫರ್ ನೀಡುತ್ತಿದೆ. ಸುಲಭ ಸಾಲ, ಕಡಿಮೆ ಕಂತು ಸೇರಿದಂತೆ ಹಲವು ಆಫರ್ ಘೋಷಿಸಿದೆ. ಇದೀಗ ಫ್ರೀ ಸರ್ವೀಸ್, ವಾರೆಂಟಿ ಅವದಿಯನ್ನು ಜೂನ್ 30ರ ವರಗೆ ವಿಸ್ತರಿಸಿದೆ. 


ಚೀನಿ ವಸ್ತು ಬಹಿಷ್ಕರಿಸಲು ವಾಂಗ್‌ಚುಕ್ ಕರೆ; ಟಿಕ್‌ಟಾಕ್‌ ಡಿಲೀಟ್ ಮಾಡಿದ ಮಿಲಿಂದ್ ಸೋಮನ್!

ಕೊರೋನಾ ವೈರಸ್, ಭಾರತ ಗಡಿಯಲ್ಲಿ ತಕರಾರು ಸೇರಿದಂತೆ ಹಲವು ಕಾರಣಗಳಿಂದ ಭಾರತದಲ್ಲಿ ಚೀನಾ ವಸ್ತುಗಳ ಬಹಿಷ್ಕರಿಸಲು ಅಭಿಯಾನ ಆರಂಭವಾಗಿದೆ. ಇದರ ಬೆನ್ನಲ್ಲೇ ಪ್ರಧಾನಿ ಮೋದಿ ಕೂಡ ಸ್ವಾವಲಂಬಿ ಭಾರತ ನಿರ್ಮಾಣಕ್ಕೆ ಕರೆ ನೀಡಿದ್ದಾರೆ. ಇದೀಗ ಶಿಕ್ಷಣ ಹರಿಕಾರ ಎಂದೇ ಗುರುತಿಸಿಕೊಂಡಿರುವ ಸೊನಮ್ ವಾಂಗ್ಚುಕ್ ಮಹತ್ವದ ಕರೆ ನೀಡಿದ್ದಾರೆ. ಇದರ ಬೆನ್ನಲ್ಲೇ ನಟ ಮಿಲಿಂದ್ ಸೋಮನ್, ಚೀನಾ ಟಿಕ್‌ಟಾಕ್ ಆ್ಯಪ್‌ನಿಂದ ಹೊರಬಂದಿದ್ದಾರೆ.

ಯಾವುದಕ್ಕೂ ಹೆದರಬೇಡಿ, ಆಡಳಿತದ ಕಡೆ ಗಮನ ಕೊಡಿ; BSYಗೆ ಹೈಕಮಾಂಡ್ ಶ್ರೀರಕ್ಷೆ..!

ಅಮಿತ್ ಶಾ ಸುಮಾರು ಅರ್ಧಗಂಟೆಗಳ ಕಾಲ ರಾಜ್ಯ ರಾಜಕಾರಣದ ಬಗ್ಗೆ ಚರ್ಚೆ ನಡೆಸಿದ್ದು, ಕರ್ನಾಟಕದಲ್ಲಿ ಏನಾಗ್ತಿದೆ ಅಂತ ನಮಗೆ ಗೊತ್ತಿದೆ. ನೀವು ಆಡಳಿತದ ಕಡೆಯಷ್ಟೇ ಗಮನ ಕೊಡಿ, ಯಾವುದಕ್ಕೂ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ ಎಂದು ಸುವರ್ಣ ನ್ಯೂಸ್‌ಗೆ ಬಲ್ಲ ಮೂಲಗಳು ಖಚಿತಪಡಿಸಿದ್ದಾವೆ.

ಸಿಎಎ, ರಾಮ ಮಂದಿರ, ತ್ರಿವಳಿ ತಲಾಖ್, ಆರ್ಟಿಕಲ್ 370: ಮೋದಿ 2.0: 1 ವರ್ಷದ ಸಾಧನೆಗಳು!

ನರೇಂದ್ರ ಮೋದಿ ನೇತೃತ್ವದ 2ನೇ ಅವಧಿಯ ಕೇಂದ್ರ ಸರ್ಕಾರಕ್ಕೆ ಇಂದಿಗೆ ಒಂದು ವರ್ಷ ತುಂಬಿದೆ. ಹೀಗಿರುವಾಗ ಜನ ಮೆಚ್ಚಿದ ನಾಯಕ ಮೋದಿ ಈ ಒಂದು ವರ್ಷದಲ್ಲಿ ಮಾಡಿದ ಸಾಧನೆಗಳೇನು? ಇಲ್ಲಿದೆ ಸಂಪೂರ್ಣ ವಿವರ

Follow Us:
Download App:
  • android
  • ios