ಮುಂಬೈ(ಮೇ.30): ಲಡಾಕ್ ಗಡಿ ಪ್ರದೇಶದಲ್ಲಿ ಚೀನಾ ಪ್ರತಿ ದಿನ ಖ್ಯಾತೆ ತೆಗೆಯುತ್ತಿದೆ. ಭಾರತೀಯ ಯೋಧರನ್ನು ವಶಕ್ಕೆ ಕೂಡ ಪಡೆದಿದೆ. ಭಾರತ ತನ್ನ ನೆಲದಲ್ಲಿ ರಸ್ತೆ ನಿರ್ಮಿಸುತ್ತಿರುವುದಕ್ಕೆ ಚೀನಾ ತಕರಾರು ನಡೆಸಿ ಇದೀಗ ಕಾಮಾಗಾರಿಯೇ ಸ್ಥಗಿತಗೊಂಡಿದೆ. ಹಲವು ಸುತ್ತಿನ ಮಾತುಕತೆಗಳು ಫಲಪ್ರದವಾಗಿಲ್ಲ. ಇದು ಭಾರತೀಯರನ್ನು ಮತ್ತಷ್ಟು ಕೆರಳಿಸಿದೆ. ಈ ಘಟನೆ ಬೆನ್ನಲ್ಲೇ ಲಡಾಕ್‌ನ ಶಿಕ್ಷಣ ಹರಿಕಾರನಾಗಿ ಗುರುತಿಸಿಕೊಂಡಿರುವ ಸೊನಮ್ ವಾಂಗ್ಚುಕ್ ಚೀನಿ ವಸ್ತುಗಳ ಬಹಿಷ್ಕರಿಸಲು ಕರೆ ನೀಡಿದ್ದರು. ಈ ಕರೆಗೆ ಖ್ಯಾತ ನಟ ಮಿಲಿಂದ್ ಸೋಮನ್ ಸ್ಪಂದಿಸಿದ್ದಾರೆ.

ಗಡಿಯಲ್ಲಿ ಮತ್ತೆ ಚೀನಾ ತಂಟೆ: ಲಡಾಖ್‌ ಬಳಿ ಬಂಕರ್‌ ನಿರ್ಮಾಣ!.

ಅಮೀರ್ ಖಾನ್ ಅಭಿನಯದ 3 ಈಡಿಯೆಟ್ಸ್ ಚಿತ್ರದಲ್ಲಿ ಪುಂಗ್ಶುಕ್ ವಾಂಗ್ಡು ಪಾತ್ರ, ಇದೇ ಸೋನಮ್ ವಾಂಗ್ಚುಕ್ ಪ್ರೇರಿತವಾಗಿದೆ. ಎಂಜಿನಿಯರ್ ಆಗಿರುವ ವಾಂಗ್ಚುಕ್, ಲಡಾಕ್‌ನಲ್ಲಿ ಶಿಕ್ಷಣ ಹರಿಕಾರನಾಗಿ ಗುರುತಿಸಿಕೊಂಡಿದ್ದಾರೆ. ಇತ್ತೀಚೆಗೆ ವಾಂಗ್ಚುಕ್, ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮೂಲಕ ಭಾರತೀಯರಲ್ಲಿ ಮನವಿ ಮಾಡಿದ್ದರು. ಚೀನಾ ಪ್ರತಿ ದಿನ ಭಾರತಕ್ಕೆ ಸಂಕಷ್ಟೆ ತರುತ್ತಿದೆ. ನಮಗೆ ಚೀನಿ ಜನತೆಯಿಂದ ಯಾವ ಸಮಸ್ಯೆ ಇಲ್ಲ. ಆದರೆ ಅಲ್ಲಿ ಸರ್ಕಾರವೇ ನಮಗೆ ಸಮಸ್ಯೆಯಾಗಿದೆ ಎಂದಿದ್ದಾರೆ.

ಚೀನಾ ವಾಯುನೆಲೆ ವಿಸ್ತರಣೆ, ಯುದ್ಧ ವಿಮಾನ ನಿಯೋಜನೆ!.

ಚೀನಾ ಗಡಿ ಖ್ಯಾತೆಗೆ ನಮ್ಮ ಸೇನೆ ಬುಲೆಟ್ ಮೂಲಕ ಉತ್ತರ ನೀಡಲಿದೆ. ಭಾರತೀಯರಾದ ನಾವು ವ್ಯಾಲೆಟ್ ಮೂಲಕ ಉತ್ತರ ನೀಡಬೇಕಿದೆ. ಇದಕ್ಕೆ ನಾವು ಚೀನಿ ವಸ್ತುಗಳನ್ನು ಬಹಿಷ್ಕರಿಸಿ. ಗ್ರಾಮ, ಗ್ರಾಮಗಳಲ್ಲಿ ಜನರಲ್ಲಿ ಅರಿವು ಮೂಡಿಸಿ ಸಾಧ್ಯವಾದಷ್ಟು ನಮ್ಮ ಸ್ವದೇಶಿ ವಸ್ತುಗಳನ್ನೇ ಬಳಸಿ ಎಂದು ಕರೆ ನೀಡಿದ್ದಾರೆ. ವಾಂಗ್ಚುಕ್ ಕರೆ ನೀಡಿದ ಬೆನ್ನಲ್ಲೇ ಖ್ಯಾತ ನಟ ಮಿಲಿಂದ್ ಸೋನಮ್, ಚೀನಾದ ಖ್ಯಾತ ಆ್ಯಪ್ ಟಿಕ್‌ಟಾಕ್ ಡಿಲೀಟ್ ಮಾಡಿದ್ದಾರೆ.

ಟ್ವಿಟರ್ ಮೂಲಕ ಮಾಹಿತಿ ಹಂಚಿಕೊಂಡಿರುವ ಮಿಲಿಂದ್, ನಾನು ಇನ್ಮುಂದೆ ಟಿಕ್‌ಟಾಕ್ ಬಳಸುತ್ತಿಲ್ಲ. ಚೀನಾ ವಸ್ತು ಬಹಿಷ್ಕರಿಸಿ ಎಂದು ವಾಂಗ್ಚುಕ್ ವಿಡಿಯೋ ಪೋಸ್ಟ್ ಮಾಡಿದ್ದಾರೆ.

 

ವಾಂಗ್ಚುಕ್ ವಿಡಿಯೋ ಮೂಲಕ ಮಹತ್ವ ಮಾಹಿತಿ ಹಂಚಿಕೊಂಡಿದ್ದಾರೆ. ಬುಲೆಟ್ ಶಕ್ತಿಗಿಂತ ವ್ಯಾಲೆಟ್ ಶಕ್ತಿ ಹೆಚ್ಚು. ಭಾರತದಲ್ಲಿ ತನ್ನ ವಸ್ತುಗಳನ್ನು ಮಾರಾಟ ಮಾಡೋ ಮೂಲಕ ಚೀನಾ ಪ್ರತಿ ವರ್ಷ 5 ಲಕ್ಷ ಕೋಟಿ ರೂಪಾಯಿ ಆದಾಯ ಗಳಿಸುತ್ತಿದೆ. ಹೀಗಾಗಿ ನಾವು ಚೀನಾ ವಸ್ತುಗಳನ್ನು ಬಹಿಷ್ಕರಿಸಿ ನಮ್ಮ ದೇಶವನ್ನು ಬಲಪಡಿಸಬೇಕಿದೆ ಎಂದು ವಾಂಗ್ಚುಕ್ ಹೇಳಿದ್ದಾರೆ. 

ವಾಂಗ್ಚುಕ್ ಕರೆಗೆ ಸ್ಪಂದಿಸಿದ ಮಿಲಿಂದ್ ಸೋಮನ್‌ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇಷ್ಟೇ ಅಲ್ಲ ಚೀನಾ ವಸ್ತು ಬಹಿಷ್ಕರಿಸಲು ಪಣತೊಟ್ಟಿದ್ದಾರೆ.