ನವದೆಹಲಿ(ಮೇ.30): ಕೊರೋನಾ ವೈರಸ್ ಕಾರಣ ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಸಮಸ್ಯೆಯಾಗದಂತೆ ಹಲವು ಆಫರ್ ಘೋಷಿಸಿದೆ. ಮಾರ್ಚ್ 25 ರಿಂದ ಭಾರತದಲ್ಲಿ ಲಾಕ್‌ಡೌನ್ ಘೋಷಣೆ ಮಾಡಿದ ಕಾರಣ ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ ಫ್ರೀ ಸರ್ವೀಸ್, ವಾರೆಂಟಿ ಅವದಿಯನ್ನು ಮೇ.30ರ ವರೆಗೆ ವಿಸ್ತರಿಸಿತ್ತು. ಆದರೆ ಕೊರೋನಾ ವೈರಸ್ ನಿಯಂತ್ರಣಕ್ಕೆ ಬಾರದ ಕಾರಣ ಬಹುತೇಕ ಕಡೆಗಳಲ್ಲಿ ಲಾಕ್‌ಡೌನ್ ಮುಂದುವರಿದಿದೆ. ಹೀಗಾಗಿ ಮಾರುತಿ ಸುಜುಕಿ ಫ್ರೀ ಸರ್ವೀಸ್ ಅವದಿಯನ್ನು ಜೂನ್ 30 ವರಗೆ ವಿಸ್ತರಿಸಿದೆ.

ಲಾಕ್‌ಡೌನ್ ವೇಳೆ ನಿಮ್ಮ ಕಾರು ನಿರ್ವಹಣೆ ಹೇಗೆ? ಪಾಲಿಸಿ 5 ಸೂತ್ರ!

ಮಾರುತಿ ಸುಜುಕಿ ಗ್ರಾಹಕರು ತಮ್ಮ ಕಾರು ಫ್ರೀ ಸರ್ವೀಸ್ ಅವದಿ ಮೇ ತಿಂಗಳಲ್ಲಿ ಅಂತ್ಯವಾಗುತ್ತಿದ್ದರೆ, ಚಿಂತಿಸುವ ಅವಶ್ಯಕತೆ ಇಲ್ಲ. ಕಾರಣ ಇದೀಗ ಈ ಅವದಿಯನ್ನು ಜೂನ್ 30ರ ವರೆಗೆ ವಿಸ್ತರಿಸಲಾಗಿದೆ. ಈಗಾಗಲೇ ಹಲವು ಗ್ರಾಹಕರು ವಿವೆದೆಡೆ ಸಿಲುಕಿದ್ದಾರೆ. ಇತ್ತ ಕಾರು ಫ್ರೀ ಸರ್ವೀಸ್ ಮಾಡುವುದು ಹೇಗೆ ಎಂಬ ಚಿಂತೆಗೆ ಮಾರುತಿ ಸುಜುಕಿ ಫುಲ್ ಸ್ಟಾಪ್ ಇಟ್ಟಿದೆ.

ಸ್ವಲ್ಪ ವಿಚಿತ್ರ, ಆದ್ರೂ ಸತ್ಯ! ಕಾರು ಪಾರ್ಕಿಂಗ್ ವೈರಲ್ ವಿಡಿಯೋ ನೋಡಿದ್ರಾ?

ಲಾಕ್‌ಡೌನ್ ಸಮಯದಲ್ಲಿ ಮಾರುತಿ ಸುಜುಕಿ ತನ್ನ ಗ್ರಾಹಕರಿಗೆ SMS ಮೂಲಕ ಕೊರೋನಾ ವೈರಸ್ ಹರಡದಂತೆ ತೆಗೆದುಕೊಳ್ಳಬೇಕಾದ ಮುನ್ನಚ್ಚೆರಿಕಾ ಕ್ರಮಗಳು, ಕಾರು ಹಾಳಾಗದಂತೆ ಕಾಪಾಡಿಕೊಳ್ಳಲು ಏನು ಮಾಡಬೇಕು ಅನ್ನೋದನ್ನು ಹೇಳಿತ್ತು. 25 ಮಿಲಿಯನ್ SMS ಗ್ರಾಹಕರಿಗೆ ಕಳುಹಿಸಿದೆ. ಬ್ಯಾಟರಿ, ಕಾರಿನ ಎಂಜಿನ್, ಮೈಲ್ಡ್ ಹೈಬ್ರಿಡ್ ವಾಹನ ಸೇರಿದಂತೆ ಮಾರುತಿ ಸುಜುಕಿ ವಾಹನಗಳ ಸುರಕ್ಷೆ ಹಾಗೂ ಸುದೀರ್ಘ ಬಾಳಿಕೆಗೆ ಮಾಡಬೇಕಾದ ಕ್ರಮಗಳನ್ನು ಹೇಳಿತ್ತು.