Asianet Suvarna News Asianet Suvarna News

ವಿಮಾನ ಮೂಲಕ 177 ಯುವತಿಯರ ತವರುನಾಡಿಗೆ ಕಳಿಸಿದ ಸೂದ್‌!

ಮುಂಬೈನಲ್ಲಿ ಸಿಲುಕಿದ್ದ ಕರ್ನಾಟಕದ ಕಲಬುರಗಿ, ಬಿಹಾರ, ಜಾರ್ಖಂಡ್‌ ಹಾಗೂ ಉತ್ತರ ಪ್ರದೇಶದ ಕಾರ್ಮಿಕರನ್ನು ತವರಿಗೆ ಕಳುಹಿಸಿದ್ದ ನಟ ಸೋನು ಸೂದ್| ಬೆಂಗಳೂರಿಂದ ವಿಮಾನ ಕಳಿಸಿ 177 ಯುವತಿಯರ ಒಡಿಶಾಕ್ಕೆ ಕಳಿಸಿದ ಸೂದ್‌| 

Sonu Sood airlifts 177 girls from Kerala, sends them home to Odisha
Author
Bangalore, First Published May 30, 2020, 12:26 PM IST
  • Facebook
  • Twitter
  • Whatsapp

ಮುಂಬೈ(ಮೇ.30): ಲಾಕ್‌ಡೌನ್‌ನಿಂದ ಮುಂಬೈನಲ್ಲಿ ಸಿಲುಕಿದ್ದ ಕರ್ನಾಟಕದ ಕಲಬುರಗಿ, ಬಿಹಾರ, ಜಾರ್ಖಂಡ್‌ ಹಾಗೂ ಉತ್ತರ ಪ್ರದೇಶದ ಕಾರ್ಮಿಕರನ್ನು ಅವರ ತವರಿಗೆ ಕಳಿಸಲು ಸಾರಿಗೆ ವ್ಯವಸ್ಥೆ ಮಾಡಿದ್ದ ಬಾಲಿವುಡ್‌ ನಟ ಸೋನು ಸೂದ್‌ ಈಗ ಮತ್ತೊಮ್ಮೆ ಮಾನವೀಯತೆ ಮೆರೆದಿದ್ದಾರೆ.

ಕೇರಳದಲ್ಲಿ ಸಿಲುಕಿದ್ದ ಒಡಿಶಾದ 177 ಯುವತಿಯರು ಬಾಡಿಗೆ ವಿಮಾನದ ಮೂಲಕ ತವರಿಗೆ ಮರಳಲು ವ್ಯವಸ್ಥೆ ಮಾಡಿದ್ದಾರೆ. ‘ಭುವನೇಶ್ವರದಲ್ಲಿರುವ ಸ್ನೇಹಿತರೊಬ್ಬರು ಸೂದ್‌ ಅವರಿಗೆ ಕೇರಳದಲ್ಲಿ ಸಿಲುಕಿದ ಒಡಿಶಾದ ಯುವತಿಯರ ಮಾಹಿತಿ ನೀಡಿದರು. ಕೂಡಲೇ ಸೂದ್‌ ಅವರು ಸರ್ಕಾರವನ್ನು ಸಂಪರ್ಕಿಸಿ ಅಗತ್ಯ ಅನುಮತಿ ಪಡೆದರು.

ಬ್ಯಾಕ್‌ಗ್ರೌಂಡ್ ಡ್ಯಾನ್ಸರ್ಸ್‌ಗೆ ರೇಷನ್ ಕಿಟ್ ಕೊಟ್ಟ ಸೋನು ಸೂದ್

ಬೆಂಗಳೂರಿನಿಂದ ವಿಮಾನವೊಂದನ್ನು ಬಾಡಿಗೆ ಪಡೆದು ಕೊಚ್ಚಿಗೆ ಕಳಿಸಲಾಯಿತು. ಈ ಮೂಲಕ ಭುವನೇಶ್ವರಕ್ಕೆ ಯುವತಿಯರು ಮರಳಲು ವ್ಯವಸ್ಥೆ ಮಾಡಲಾಯಿತು’ ಎಂದು ಸೂದ್‌ ಅವರ ಆಪ್ತರು ಹೇಳಿದ್ದಾರೆ. ಸೂದ್‌ ಅವರ ಈ ಯತ್ನಗಳಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ತವರಿಗೆ ಮರಳುವವರಿಗೆ ಉಚಿತ ಸಹಾಯವಾಣಿಯನ್ನೂ ಇತ್ತೀಚೆಗೆ ಸೂದ್‌ ಆರಂಭಿಸಿದ್ದರು.

Follow Us:
Download App:
  • android
  • ios