ಚೆನ್ನೈ(ನ.06): ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿ ನಟ ಕಮಲ್ ಹಾಸನ್ ಅವರ ಮಕ್ಕಳ್ ನಿಧಿ ಮಾಯಮ್(MNM)ಪಕ್ಷದಿಂದ ಸ್ಪರ್ಧಿಸಿದ್ದ ಮೂವರು ಅಭ್ಯರ್ಥಿಗಳು ಬಿಜೆಪಿ ಸೇರಿದ್ದಾರೆ.

ಭಾರತದ ಮೊದಲ ಟೆರರಿಸ್ಟ್ ಹಿಂದೂ; ಕಮಲ್ ಹಾಸನ್ ವಿವಾದದ ಕಿಡಿ

ಪ್ರತಿಯೊಂದು ಧರ್ಮದಲ್ಲೂ ಭಯೋತ್ಪಾದಕರಿದ್ದಾರೆ: ಕಮಲ್

ಪಕ್ಷ ಸ್ಥಾಪನೆ ಸಂದರ್ಭದಲ್ಲಿ ಕಮಲ್ ಜೊತೆಗೆ ನಿಂತಿದ್ದ ಎನ್.ರಾಜೇಂದ್ರನ್, ಟಿ.ರವಿ ಹಾಗೂ ಎಸ್.ಕರುಣ್ಯಾ, ಇದೀಗ ಪಕ್ಷ ತೊರೆದು ಕಮಲ ಪಾಳೇಯ ಸೇರಿದ್ದಾರೆ. ಈ ಮೂವರೂ ಕಳೆದ ಲೋಕಸಭೆ ಚುನಾವಣೆಯಲ್ಲಿ MNM ಪಕ್ಷದಿಂದ ಸ್ಪರ್ಧಿಸಿದ್ದರು.

'ಹಿಂದೂ' ಎನ್ನುವ ಬದಲು ಭಾರತೀಯರೆನ್ನಿ, ಯಾಕಂದ್ರೆ...!: ಕಮಲ್ ಮತ್ತೊಂದು ವಿವಾದ

ಕಮಲ್ ಟೀವಿ ಚಾನೆಲ್ ಆರಂಭ, ಚುನಾವಣೆಗೆ ಸಜ್ಜು

ಆದರೆ ಕಮಲ್ ರಾಜಕೀಯ ನಿಲುವುಗಳಿಂದ ಬೇಸತ್ತು ಪಕ್ಷ ತೊರೆಯುತ್ತಿರುವುದಾಗಿ ಈ ಮೂವರೂ ನಾಯಕರು ಸ್ಪಷ್ಟಪಡಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದಲ್ಲಿ ದೇಶ ಅಭಿವೃದ್ಧಿಯ ಪಥದಲ್ಲಿ ಮುನ್ನಡೆದಿದ್ದು, ಈ ಕಾರಣಕ್ಕೆ ಬಿಜೆಪಿ ಸೇರುತ್ತಿರುವುದಾಗಿ ಈ ನಾಯಕರು ಹೇಳಿದ್ದಾರೆ.

ಹಿಂದಿ ಹೇರಿಕೆ; ತಮಿಳು ತಂಟೆಗೆ ಬಂದ್ರೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡ್ತೀವಿ ಎಂದ ಕಮಲ್ ಹಾಸನ್

POK ಪಾಕಿಸ್ತಾನಕ್ಕೆ: ಜನಾಭಿಪ್ರಾಯ ಸಂಗ್ರಹವಾಗಲಿ ಎಂದ ಕಮಲ್ ಹಾಸನ್
ಕಮಲ್ ಹಾಸನ್ 2018ರಲ್ಲಿ ಮಕ್ಕಳ್ ನಿಧಿ ಮಾಯಮ್ ಪಕ್ಷ ಸ್ಥಾಪಿಸಿದ್ದರು. ಕಳೆದ ಲೋಕಸಭೆ ಚುನಾವಣೆಯಲ್ಲಿ MNM ಪಕ್ಷ ಶೇ.3.2ರಷ್ಟು ಮತಗಳಿಸಿತ್ತು.