ಭಾರತದ ಮೊದಲ ಭಯೋತ್ಪಾದಕ ಹಿಂದೂ ಎಂಬ ಹೇಳಿಕೆ ಬಳಿಕ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ ಕಮಲ್ ಹಾಸನ್| ಹಿಂದೂ ಪದ ಪ್ರಾಚೀನ ಗ್ರಂಥಗಳಲಿಲ್ಲ, ವಿದೇಶಿಗರು ನೀಡಿದ ಹೆಸರು| ಹಿಂದೂ ಎಂದು ಗುರುತಿಸಿಕೊಳ್ಳದೆ, ಭಾರತೀಯರೆಂದು ಹೇಳಿಕೊಳ್ಳೋಣ

ನವದೆಹಲಿ[ಮೇ.18]: ದೇಶದ ಮೊದಲ ಭಯೋತ್ಪಾದಕ ಎಂಬ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದ ಕಮಲ್ ಹಾಸನ್, ಇದೀಗ ಮತ್ತೊಂದು ಹೆಲಿಕೆ ನೀಡುವ ಮೂಲಕ ಉರಿಯುವ ಬೆಂಕಿಗೆ ತುಪ್ಪ ಸುರಿದಿದ್ದಾರೆ. 'ಹಿಂದೂ' ಎಮಬ ಪದ ಯಾವುದೇ ಪ್ರಾಚೀನ ಗ್ರಂಥಗಳಲ್ಲಿಲ್ಲ. ಇದು ವಿದೇಶೀ ಆಕ್ರಮಣಕಾರರು ನಿಡಿದ ಶಬ್ಧ ಎನ್ನುವ ಮೂಲಕ ಮತ್ತೊಂದು ವಿವಾದಕ್ಕೆ ನಾಂದಿ ಹಾಡಿದ್ದಾರೆ.

ಪ್ರತಿಯೊಂದು ಧರ್ಮದಲ್ಲೂ ಭಯೋತ್ಪಾದಕರಿದ್ದಾರೆ: ಕಮಲ್

ಟ್ವಿಟರ್ ನಲ್ಲಿ ತಮಿಳು ಲಿಪಿಯಲ್ಲಿ ಈ ಕುರಿತಾಗಿ ಬರೆದುಕೊಂಡಿರುವ ಕಮಲ್ ಹಾಸನ್ 'ಯಾವುದೇ ಪ್ರಾಚೀನ ಗ್ರಂಥಗಳಲ್ಲಿ ಹಿಂದೂ ಎಂಬ ಶಬ್ಧವನ್ನು ಉಲ್ಲೇಖಿಸಿಲ್ಲ. ಮೊಘಲರು ಸೇರಿದಂತೆ ಇನ್ನಿತರ ವಿದೇಶೀ ಆಕ್ರಮಣಕಾರರು ಈ ಪದ ಬಳಕೆ ಆರಂಭಿಸಿದ್ದರು. ಹೀಗಾಗಿ ಒಂದು ಧರ್ಮಕ್ಕೆ ಈ ಶಬ್ಧವನ್ನು ಸೀಮಿತಗೊಳಿಸುವುದು ತಪ್ಪು. ನಮ್ಮನ್ನು ನಾವು ಭಾರತೀಯರೆಂದು ಗುರುತಿಸಿಕೊಳ್ಳಬೇಕೇ ಹೊರತು ಹಿಂದೂ ಎಂದಲ್ಲ' ಎಂಬ ಸ್ಪಷ್ಟನೆ ನೀಡಿದ್ದಾರೆ.

Scroll to load tweet…

ಭಾರತದ ಮೊದಲ ಟೆರರಿಸ್ಟ್ ಹಿಂದೂ; ಕಮಲ್ ಹಾಸನ್ ವಿವಾದದ ಕಿಡಿ

ಮಕ್ಕಳ್ ನಿಧಿ ಮಯ್ಯಮ್ ಪಕ್ಷದ ಮುಖ್ಯಸ್ಥ ಕಮಲ್ ಹಾಸನ್ ಈ ಕುರಿತಾಗಿ ಪ್ರತಿಕ್ರಿಯಿಸುತ್ತಾ ''ಅಲ್ವರ್ ಆಗಲಿ ನಯನ್ಮಾರ್ ಆಗಲಿ, ಶೈವರು ಅಥವಾ ವೈಷ್ಣವರಾಗಲಿ ಹಿಂದೂ ಎಂಬ ಪದ ಬಳಕೆ ಮಾಡಿಲ್ಲ. ನಮ್ಮ ಮೇಲೆ ಆಕ್ರಮಣ ನಡೆಸಿ ಶಾಸನ ನಡೆಸಿದ ಬ್ರಿಟಿಷರು ಹಾಗೂ ವಿದೇಶಿಗರು ನೀಡಿದ ಈ ಪದವನ್ನೇ ನಾವು ಮುಂದುವರೆಸಿಕೊಂಡು ಹೋಗುತ್ತಿದ್ದೇವೆ' ಎಂದಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.