ಕೊಯಮತ್ತೂರು[ಮೇ.17]: ಪ್ರತಿಯೊಂದು ಧರ್ಮವೂ ತನ್ನದೇ ಆದ ಭಯೋತ್ಪಾದಕರನ್ನು ಹೊಂದಿದೆ ಎನ್ನುವ ಮೂಲಕ ನಟ ಕಂ ರಾಜಕಾರಣಿ ಕಮಲ್ ಹಾಸನ್, ಗೋಡ್ಸೆಯನ್ನು ಹಿಂದೂ ಧರ್ಮದ ಮೊದಲ ಭಯೋತ್ಪಾದಕ ಎಂದು ನೀಡಿರುವ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಮಹಾತ್ಮ ಗಾಂಧಿ ಹಂತಕ ನಾಥೂರಾಮ್ ಗೋಡ್ಸೆ ಹಿಂದೂ ಧರ್ಮದ ಮೊದಲ ಭಯೋತ್ಪಾದಕ ಎಂಬ ಹೇಳಿಕೆ ನೀಡುವ ಮೂಲಕ ವಿವಾದಕ್ಕೀಡಾದ ನಟ ಕಮಲ್ ಕಂ ರಾಜಕಾರಣಿ ಹಾಸನ್ ಮೇಲೆ ಚಪ್ಪಲಿ, ಮೊಟ್ಟೆ ಹಾಗೂ ಕಲ್ಲು ತೂರಾಟ ನಡೆಸಲಾಗಿತ್ತು. ಇದೀಗ ತಮ್ಮ ವಿರುದ್ಧ ವ್ಯಕ್ತವಾದ ಆಕ್ರೋಶ ಹಾಗೂ ದಾಳಿಗಳ ಕುರಿತು  ಪ್ರತಿಕ್ರಿಯಿಸಿರುವ ಕಮಲ್ ಹಾಸನ್, ಪ್ರತಿಯೊಂದು ಧರ್ಮವೂ ತನ್ನದೇ ಆದ ಭಯೋತ್ಪಾದಕರನ್ನು ಹೊಂದಿದೆ. ಇದೇ ಹಿನ್ನಲೆಯಲ್ಲಿ ನಾನು ಹೇಳಿಕೆ ನೀಡಿದ್ದೆ. ಒಂದು ವೇಳೆ ನನ್ನ ಬಂಧಿಸುವುದಾದರೇ ಬಂಧಿಸಲಿ. ಆದರೆ ನನ್ನ ಬಂಧನದಿಂದ ಮತ್ತಷ್ಟು ಸಮಸ್ಯೆಗಳು ಉದ್ಭವವಾಗಲಿದೆ ಎನ್ನುವ ಮೂಲಕ ಮತ್ತೆ ಸುದ್ದಿಗೆ ಗ್ರಾಸವಾಗಿದ್ದಾರೆ .

ಪ್ರತಿ ಧರ್ಮದಲ್ಲೂ ಅದರದೇ ಆದ ಭಯೋತ್ಪಾದನೆ ಇರುತ್ತದೆ. ನಾವು ಯಾರೂ ನಾವು ಪವಿತ್ರರು ಎಂದು ಹೇಳಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ಪ್ರತೀಯೊಂದು ಧರ್ಮದಲ್ಲೂ ಭಯೋತ್ಪಾದಕರು ಇದ್ದಾರೆ ಎಂಬುದನ್ನು ಇತಿಹಾಸವೇ ತಿಳಿಸಿದೆ ಎಂದು ಹೇಳಿದ್ದಾರೆ.

ಗೆದ್ದವರಾರು? ಬಿದ್ದವರಾರು ? ಮಹಾಸಂಗ್ರಾಮದ ಮಹಾಫಲಿತಾಂಶ. ಗುರುವಾರ 23 ಮೇ.