ಹಿಂದಿ ದಿವಸ ಆಚರಣೆ ಪ್ರಯುಕ್ತ ಗೃಹ ಸಚಿವ ಅಮಿತ್ ಶಾ ಒಂದೇ ದೇಶ, ಒಂದೇ ಭಾಷೆ,  ಹಿಂದಿಯನ್ನು ದೇಶದ ಸಾಮಾನ್ಯ ಭಾಷೆಯನ್ನಾಗಿ ಮಾಡಿ ಎಂದಿರುವ ಟ್ವೀಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಹಿಂದಿ ಹೇರಿಕೆ ಬಗ್ಗೆ ಪರ- ವಿರೋಧ ಚರ್ಚೆಗಳು ಜೋರಾಗಿದೆ. 

ಒಂದು ದೇಶ, ಒಂದೇ ಭಾಷೆ: ಹಿಂದಿ ರಾಷ್ಟ್ರೀಯ ಭಾಷೆಯಾಗಿಸಲು ಶಾ ಮನವಿ

ನಟ, ರಾಜಕಾರಣಿ ಕಮಲ್ ಹಾಸನ್ ಅಮಿತ್ ಶಾ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಒಂದು ವೇಳೆ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಮಾಡಿದರೆ ತಮಿಳುನಾಡಿನಲ್ಲಿ ಜಲ್ಲಿಕಟ್ಟು ಗಿಂತ ದೊಡ್ಡ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದ್ದಾರೆ. 

 

‘ನಾವು ಎಲ್ಲಾ ಭಾಷೆಗಳನ್ನು ಗೌರವಿಸುತ್ತೇವೆ. ಆದರೆ ತಮ್ಮ ಮಾತೃಭಾಷೆ ಯಾವತ್ತಿದ್ದರೂ ತಮಿಳು ಆಗಿರುತ್ತದೆ. ಜಲ್ಲಿಕಟ್ಟು ಒಂದು ಪ್ರತಿಭಟನೆ ಅಷ್ಟೇ. ನಮ್ಮ ಭಾಷೆ ವಿಚಾರ ಬಂದರೆ ಅದಕ್ಕಿಂತ ದೊಡ್ಡ ಪ್ರತಿಭಟನೆ ನಡೆಯುತ್ತದೆ’ ಎಂದು ಹೇಳಿದ್ದಾರೆ. 

ಇದು ಇಂಡಿಯಾ, ಹಿಂಡಿಯಾ ಅಲ್ಲ: ಸ್ಟಾಲಿನ್ ಅಬ್ಬರಕ್ಕೆ 'ಉತ್ತರ' ತತ್ತರ!

ಹಿಂದಿ ದಿನಾಚರಣೆಯ ಪ್ರಯುಕ್ತ ಗೃಹ ಸಚಿವ ಅಮಿತ್ ಶಾ ಹಿಂದಿ ಮಾಧ್ಯಮದ ಮೂಲಕ ಇಡೀ ದೇಶವನ್ನು ಒಂದಾಗಿಸುವ ಮನವಿ ಮಾಡಿದ್ದಾರೆ. 'ಮಾತೃಭಾಷೆ ಬಳಕೆಯನ್ನು ಹೆಚ್ಚಿಸಿ, ಇದರೊಂದಿಗೆ ಹಿಂದೀ ಭಾಷೆ ಪ್ರಯೋಗಿಸಿ ದೇಶದ ಒಂದೇ ಭಾಷೆ ಎಂಬ ಗಾಂಧೀಜಿ ಹಾಗೂ ಸರ್ದಾರ್ ಪಟೇಲ್ ಕನಸು ನನಸಾಗಿಸಿ' ಎಂದು ಮನವಿ ಮಾಡಿಕೊಂಡಿದ್ದರು.