ಚೆನ್ನೈ (ಸೆ. 02): 2021 ರ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆ ಆರಂಭಿಸಿರುವ ಖ್ಯಾತ ನಟ, ಮಕ್ಕಳ ನೀಧಿ ಮಯ್ಯಂ ಪಕ್ಷದ ನಾಯಕ ಕಮಲ್‌ಹಾಸನ್‌, ಇದೀಗ ತಮ್ಮದೇ ಆದ ಟೀವಿ ಚಾನೆಲ್‌ ಆರಂಭಿಸಲು ನಿರ್ಧರಿಸಿದ್ದಾರೆ.

ಈ ಮೂಲಕ ತಮಿಳುನಾಡಿನ ಬಹುತೇಕ ರಾಜಕೀಯ ಪಕ್ಷಗಳು/ ನಾಯಕರ ರೀತಿಯಲ್ಲಿ ತಾವೂ ಒಂದು ಸುದ್ದಿವಾಹಿನಿಯ ಮಾಲೀಕತ್ವ ಹೊಂದಲು ನಿರ್ಧರಿಸಿದ್ದಾರೆ. ಈ ಚಾನೆಲ್‌ ಅನ್ನು ಅವರು ತಮ್ಮ ಅಭಿಪ್ರಾಯ ಹಂಚಿಕೊಳ್ಳಲು, ತಮ್ಮ ಪಕ್ಷದ ಪರ ಚುನಾವಣಾ ಪ್ರಚಾರಕ್ಕೆ ಬಳಸಿಕೊಳ್ಳುವ ಸಾಧ್ಯತೆ ಇದೆ.