ಯಶ್, ಪತ್ನಿ ರಾಧಿಕಾ ತಮ್ಮ ಆದಾಯದ ಬಗ್ಗೆ ಎಂದೂ ಕೇಳಿಲ್ಲ ಎಂದ ಹೇಳಿಕೆ ವೈರಲ್. ಇದು ಪುರುಷರಲ್ಲಿ ಅಸೂಯೆ ಹುಟ್ಟಿಸಿದ್ದು, "ನಮಗೂ ಅಂಥ ಹೆಂಡತಿ ಸಿಗಬಾರದೇ?" ಎಂಬ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಹೇಳಿಕೆ ದಾಂಪತ್ಯದಲ್ಲಿ ಹಣಕಾಸಿನ ವಿಚಾರದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.

ಕನ್ನಡಿಗ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ (Rocking Star Yash) ಅವರೀಗ ಮತ್ತೆ ಸುದ್ದಿಯಲ್ಲಿದ್ದಾರೆ. ನ್ಯೂಸ್ ಅಂದ್ರೆ ಅಂತಿಂಥ ವಾರ್ತೆ ಅಲ್ಲ, ಇದು ಜಗತ್ತಿನ ಗಂಡಸರೆಲ್ಲಾ ನಿಬ್ಬೆರಗಾಗಿ ನೋಡುತ್ತಿರುವ ಆಟ ಎನ್ನಬಹುದು. ಕಾರಣ, ಯಶ್ ಎಲ್ಲೋ ಒಂದು ಕಡೆ ಹೇಳಬಾರದ ಆ ಮಾತು ಹೇಳಿಬಿಟ್ಟಿದ್ದಾರೆ. ಅದು ಗೊತ್ತಾಗಿದ್ದೇ ತಡ, 'ಎಲ್ಲರಿಗೂ ಅಂಥ ಹೆಂಡ್ತಿ ಯಾಕೆ ಸಿಗ್ತಿಲ್ಲ' ಅಂತ ಪೂರ್ವ-ಪಶ್ಚಿಮ, ಉತ್ತರ-ದಕ್ಷಿಣ ಹೀಗೆ ಎಲ್ಲಾ ದಿಕ್ಕಿನಲ್ಲಿರುವ ಗಂಡಸರೂ ಗರಂ ಆಗಿ ಕೈ ಹಿಸುಕಿಕೊಳ್ಳುತ್ತಿದ್ದಾರೆ. ಹಾಗಿದ್ದರೆ ಅಂಥದ್ದೇನಾಯ್ತು?

ಹೌದು, ಏನೋ ಒಂದು ಆಗೋಗಿದೆ! ಕನ್ನಡದ ವಿಶ್ವ ವಿಖ್ಯಾತ ನಟ ಯಶ್ ಅವರು ಸಂದರ್ಶನವೊಂದರಲ್ಲಿ 'ನನ್ನ ಹೆಂಡ್ತಿ ಇವತ್ತಿನವರೆಗೂ ನನ್ನ ಬಳಿ ಹಣ ಎಷ್ಟಿದೆ ಅಂತ ಕೇಳಿಯೇ ಇಲ್ಲ ಎಂದಿದ್ದಾರೆ. ಅದೀಗ ಬಹಳಷ್ಟು ವೈರಲ್ ಆಗಿಬಿಟ್ಟಿದೆ. ಯಶ್ ಹೇಳಿಕೆ ವೈರಲ್ ಆಗಿದ್ದಕ್ಕಿಂತ ಹೆಚ್ಚು ಅದಕ್ಕೆ ಬಂದಿರುವ ಕಾಮೆಂಟ್ಸ್ ವೈರಲ್ ಆಗುತ್ತಿವೆ. ಯಾಕೆ ಅದು ಹಾಗೆ ಆಗ್ತಿದೆ ಎಂಬುದಕ್ಕೆ ಹೆಚ್ಚಿನ ಕ್ಲಾರಿಟಿ ಅಗತ್ಯವೇ ಇಲ್ಲ. ಏಕೆಂದರೆ, ಈ ಬಗ್ಗೆ ಮದುವೆಯಾಗಿರುವ ಎಲ್ಲಾ ಪುರುಷರ ಬಳಿ ಉತ್ತರವಿದೆ ಎನ್ನಬಹುದು. 

ಹೌದು, ಸಾಮಾನ್ಯವಾಗಿ ಸಂಸಾರ ಎಂದರೆ, 'ಸಂಸಾರ ಸಾಗರ', ಸಂಸಾರದ ಗೋಳು, ಸಂಸಾರ ಎಂದರೆ ಹೀಗೆ, ಹಾಗೆ ಎಂದು ಹೇಳುತ್ತಲೇ ಜೀವನ ಸಾಗಿಸುವವರೇ ಆಗಿದ್ದಾರೆ. ಹೆಂಡ್ತಿ ಅಂದ್ರೆ ಗಂಡನ ಹಣದ ಮೇಲೆ ಯಾವತ್ತೂ ಕಣ್ಣಿಟ್ಟವಳು ಎಂಬ ಸಾಮಾನ್ಯವಾದ ವಾದ ಮನೆಮಾಡಿದೆ. ಶೇಕಡಾ ನೂರರಲ್ಲಿ ಎಲ್ಲೋ ಅಪ್ಪಿ-ತಪ್ಪಿ ಒಬ್ಬರೋ ಇಬ್ಬರೋ ಹಣದ ಬಗ್ಗೆ, ಸೌಕರ್ಯದ ಬಗ್ಗೆ ಗಂಡನ ಬಳಿ ಮಾತನಾಡಲಿಕ್ಕಿಲ್ಲ, ಮಿಕ್ಕ ಎಲ್ಲ ಮಹಿಳೆಯರೂ ಬಂಗಾರ, ಆಸ್ತಿ, ಆಭರಣ ಎಂದು ಹಗಲೂ-ರಾತ್ರಿ ಗಂಡನ ತಲೆ ತಿನ್ನುವವರೇ ಎಂಬ ಜೋಕ್‌ಗಳು ಹರಿದಾಡುತ್ತಲೇ ಇರುತ್ತವೆ. ಹೀಗಾಗಿ, ಯಶ್ ಮಾತನ್ನು ಎಲ್ಲರೂ ಸೀರಿಯಸ್ಸಾಗಿ ತೆಗೆದುಕೊಂಡಿದ್ದಾರೆ. 

ನಟ ಯಶ್ ಅವರು 'ನನ್ನ ಹೆಂಡತಿ ಇವತ್ತಿನವರೆಗೂ ನನ್ನ ಬಳಿ ಹಣ ಎಷ್ಟಿದೆ ಎಂದು ಕೇಳಿಯೇ ಇಲ್ಲ' ಎಂದು ಹೇಳಿದ್ದು ಕೇಳಿ ಹಲವರು ಹೌಹಾರಿದ್ದಾರೆ. ಅಷ್ಟೇ ಅಲ್ಲ, ನಮಗೂ ಅಂಥ ಹೆಂಡತಿ ಸಿಗಬಾರದೇ ಎಂದು ಕೆಲವರು ಕಾಮೆಂಟ್ ಕೂಡ ಹಾಕಿದ್ದಾರೆ. ಇನ್ನೂ ಕೆಲವರು ಕಾಮೆಂಟ್ ಹಾಕದಿದ್ದರೂ, ಮನಸ್ಸಿನಲ್ಲೇ ಅಂದುಕೊಂಡಿದ್ದಾರೆ ಎಂಬುದಕ್ಕೆ ಅವರು ಕಾಮೆಂಟ್‌ನಲ್ಲಿ ಹಾಕಿರುವ ಇಮೋಜಿಯೇ ಸಾಕ್ಷಿ. ಹಾಗಿದ್ದರೆ, ಯಶ್ ಹೆಂಡತಿ, ಅಂದ್ರೆ ರಾಧಿಕಾ ಪಂಡಿತ್ ಅಷ್ಟು ಒಳ್ಳೆಯವರೇ?

ಹೌದು ಎನ್ನದೇ ಬೇರೆ ದಾರಿಯೇ ಇಲ್ಲ! ಏಕೆಂದರೆ, ಸ್ವತಃ ರಾಧಿಕಾ ಪಂಡಿತ್ ಗಂಡನೇ ಹೀಗೆ ಹೇಳಿರುವಾದ ಸಂದೇಹಪಡಲು ಇನ್ನೇನಿದೆ? ಸಾಮಾನ್ಯವಾಗಿ ಯಾವುದೇ ಪತಿ ಬಹಿರಂಗವಾಗಿ ಇಂಥಹ ವಿಷಯದಲ್ಲಿ ಬಹಿರಂಗವಾಗಿ ಹೀಗೆ ಹೇಳಿಕೆ ಕೊಡುವುದಿಲ್ಲ. ಕಾರಣ, ಮಹಿಳೆಯರು ಎಂದರೆ, ಪತ್ನಿಯರು ಎಂದರೆ ಅತೀ ಆಸೆ ಉಳ್ಳವರು, ಅದು ಬೇಕು ಇದು ಬೇಕು ಎಂದು ತಮ್ಮ ಪತಿಯನ್ನು ಪೀಡಿಸುವವರೇ ಎಂಬುದು ಹಲವರ ಅನಿಸಿಕೆ, ಅಭಿಪ್ರಾಯ. ಆದ್ರೆ, ಯಶ್ ಮಾತ್ರ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ. ಹೀಗಾಗಿ ಈ ಸಂಗತಿಯೀಗ ಇಡೀ ಜಗತ್ತಿನ ಗಂಡಸರ ಗಮನ ಸೆಳೆದಿದೆ. 

ಅಂದಹಾಗೆ, ನಟ ಯಶ್ ಹಾಗೂ ರಾಧಿಕಾ ಪಂಡಿತ್ ಜೋಡಿಗೆ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಸದ್ಯ ರಾಕಿಂಗ್ ಸ್ಟಾರ್ ಖ್ಯಾತಿಯ ನಟ ಯಶ್ ಅವರು ಬಾಲಿವುಡ್ ಮೇಕಿಂಗ್ 'ರಾಮಾಯಣ' ಹಾಗೂ ಪ್ಯಾನ್ ವಲ್ಡ್‌ 'ಟಾಕ್ಸಿಕ್' ಚಿತ್ರಗಳ ಶೂಟಿಂಗ್‌ಗಳಲ್ಲಿ ಬ್ಯುಸಿ ಆಗಿದ್ದಾರೆ. ಯಶ್ ನಟನೆಯ ಈ ಸಿನಿಮಾಗಳನ್ನು ಬಹುಶಃ 2026ರಲ್ಲಿ ತೆರೆಯ ಮೇಲೆ ನೋಡಬಹುದು. ಆದರೆ, ನಟ ಯಶ್ ಅಭಿಮಾನಿಗಳು ಈಗಲೇ ಅವರ ಚಿತ್ರಗಳಿಗಾಗಿ ಕಾದು ಕುಳಿತಿದ್ದಾರೆ. ಈಗ ಬೇರೆಲ್ಲಾ ಸಂಗತಿಗಳಿಗಿಂತ ಈ ವಿಷಯವೇ ಹೆಚ್ಚು ಗಮನ ಸೆಳೆಯುತ್ತಿದೆ, ಯಾಕೋ ಏನೋ..!